ಕಲ್ಪನೆ ಮತ್ತು ವಾಸ್ತವಿಕವಾಗಿ ಹಲವಾರು ಕವಿತೆಗಳು ಓಡುವವರನ್ನು ಅರೇ ಕ್ಷಣ ನಿಲ್ಲಿಸಿ ಓದುವಂತೆ ಮಾಡುತ್ತವೆ. ಹೆಣ್ಣಿನ ಅಳಲು ನಿಂದನೆಯ ಜೊತೆಗೆ ಮಾನಸಿಕ ತೊಳಲಾಟವು ಸಮಾಜವನ್ನೇ ಪ್ರಶ್ನಿಸುವಂತಿದ್ದು, ಹಿರಿ ಜೀವಿಗಳ ಮನಸ್ಥಿತಿಯನ್ನು ವ್ಯಕ್ತಪಡಿಸುವಂತ ಕವಿತೆಗಳು ನಿಮಗಿಲ್ಲಿ ಓದ ಸಿಗುತ್ತವೆ. ತಾಯಿಯ ಕೋರಿಕೆ, ಓದುವ ಮಕ್ಕಳಲ್ಲಿ ಭಾಷಾ ಪ್ರೇಮ ಮೂಡುವಂತಹ ಕವನಗಳಿವೆ. ಪ್ರೀತಿ ಪ್ರೇಮದ ಅಮಲಿನಂತಹ ಮಧುರತೆಯ ಪಾಕವು ಪಕ್ವವಾಗಿದ್ದು ಅಲ್ಲಲ್ಲಿ ಮನದ ಭಾವದ ಶಕ್ತಿಯು ತನ್ಮಯಗೊಳ್ಳುತ್ತದೆ. ಶೂನ್ಯವೇ ಎಲ್ಲವೂ ಆಗಿದ್ದು ಅವಶೇಷ ರೂಪಕವೇ ಸಾಹಿತ್ಯ ಎನಿಸುವುದು. ಬದುಕಿನ ಸಾರ್ಥಕತೆಯ ಮನೋಭಾವ ಬೆಳೆಸುವ ಕವಿತೆಗಳು 'ಮೌನ ಕುಸುಮ' ಕವನಸಂಕಲನದಲ್ಲಿ ಓದ ಸಿಗುತ್ತವೆ.
ಚಿತ್ರದುರ್ಗ ಜಿಲ್ಲೆಯ ಮಾರಘಟ್ಟ ಗ್ರಾಮದವರಾದ ದೀಪಿಕಾ ಬಾಬು ಅವರು ಬಾಲ್ಯದ ದಿನಗಳಿಂದಲೂ ಸಾಹಿತ್ಯದಲ್ಲಿ ಒಲವು ಬೆಳೆಸಿಕೊಂಡವರು. ಹಲವಾರು ಜಿಲ್ಲಾ ಮತ್ತು ರಾಜ್ಯ ಮಟ್ಟದ ದಿನಪತ್ರಿಕೆಗಳಲ್ಲಿ ಕವಿತೆಗಳನ್ನು, ಲೇಖನಗಳನ್ನು, ಸಣ್ಣ ಸಣ್ಣ ಕಥೆಗಳನ್ನು ಬರೆಯುತ್ತಾ ಬಂದ ದೀಪಿಕಾ ಅವರು ಪ್ರಸ್ತುತ 'ವಿನಯವಾಣಿ' ದಿನಪತ್ರಿಕೆಯಲ್ಲಿ 'ಸ್ತ್ರೀ ಲಹರಿ' ಎಂಬ ವಾರದ ಅಂಕಣವನ್ನು ಬರೆಯುತ್ತಿದ್ದಾರೆ. ಕೃತಿ : "ಮೌನ ಕುಸುಮ" ಚೊಚ್ಚಲ ಕವನಸಂಕಲನ ...
READ MORE