ಸಮಾಜದ ಮನುಷ್ಯನ ಕ್ರೌರ್ಯ, ಸ್ವಾರ್ಥ, ಪರಿಸರ ನಾಶ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಇಂದಿನ ವಾಸ್ತವವನ್ನು ಕವಿತೆಗಳಲ್ಲಿ ವಿಡಂಬಿಸಿದ್ದಾರೆ. ಜನರನ್ನು ಪ್ರಶ್ನಿಸಿ.ಇಂದಿನ ಸಮಾಜದ ತವಕ ತಲ್ಲಣಗಳಿಗೆ ಕವಿತೆಗಳ ಮೂಲಕ ಧ್ವನಿ ನೀಡಿದ್ದಾರೆ. ಇರುವುದೊಂದೆ ಭೂಮಿ, ನರಲೀಲೆ, ನಮ್ಮೂರು, ದೇವರು ಹಚ್ಚಿದ ಲಾಂದ್ರ ಮತ್ತಿತರ ಕವಿತೆಗಳು ಗಮನ ಸೆಳೆಯುತ್ತವೆ
ಶಿಕ್ಷಕ, ಹವ್ಯಾಸಿ ಬರಹಗಾರ ರವಿರಾಜ್ ಸಾಗರ್ ಎಂತಲೇ ಪರಿಚಿತರಾಗಿರುವ ರವಿಚಂದ್ರ ಡಿ. ಅವರು 1986 ಜುಲೈ 19 ರಂದು ಜನಿಸಿದರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮಂಡಗಳಲೆ ಗ್ರಾಮದವರಾದ ಇವರು ಪ್ರಸ್ತುತ ರಾಯಚೂರಿನ ಮಾನ್ವಿ ತಾಲ್ಲೂಕಿನ ಮಲ್ಕಾಪುರ ಸರ್ಕಾರಿ ಶಾಲೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೇ ಬರೆಯುವ ಹವ್ಯಾಸ ಬೆಳೆಸಿಕೊಂಡ ರವಿಚಂದ್ರ ಇವರು ಪತ್ರಿಕೋದ್ಯಮ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವೃತ್ತಿಯ ಜೊತೆಗೆ ಜಾನಪದ ಸಂಪಾದನೆ, ಫೋಟೋಗ್ರಫಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಮಲ್ಕಾಪುರ ಸರ್ಕಾರಿ ಶಾಲೆಯ ಮಕ್ಕಳು ಹೊರತರುತ್ತಿರುವ ಮಂದಾರ ಕನ್ನಡ ಮಕ್ಕಳ ಪತ್ರಿಕೆಯನ್ನು ಸಂಪಾದಕರು ...
READ MORE