ಶ್ವೇತಪ್ರಿಯ

Author : ಬೇಲೂರು ರಘುನಂದನ್

Pages 84

₹ 60.00




Year of Publication: 2011
Published by: ಶ್ವೇತಪ್ರಿಯ ಪ್ರಕಾಶನ
Address: #216, 5ನೇ ಮುಖ್ಯರಸ್ತೆ, ಕೆನರಾಬ್ಯಾಂಕ್ ಲೇಔಟ್, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು- 560097
Phone: 9742606000

Synopsys

‘ಶ್ವೇತಪ್ರಿಯ’ ಕವಿ, ರಂಗಕರ್ಮಿ ಬೇಲೂರು ರಘುನಂದನ್ ಅವರ ಕವನ ಸಂಕಲನ. ಈ ಕೃತಿಗೆ ಖ್ಯಾತ ಕಲಾವಿದೆ ಉಮಾಶ್ರೀ ಅವರ ಬೆನ್ನುಡಿಯ ಮಾತುಗಳಿವೆ. ಇಲ್ಲಿ ಕವಿ ನಾನು, ಹಳದಿ, ಮಲೆನಾಡ ಮಳೆಯಲ್ಲಿ, ತಂಗಿ ಕೊಯ್ದಳು ಮಲ್ಲಿಗೆ, ತಾಯಿಯಲ್ಲವೇ, ಬಂಗಾರದ ಬಾಗಿನ, ಇನಿಯನ ಮುದ್ದು, ಆತ್ಮಶಕ್ತಿಯಾದೆ, ಚುಕ್ಕಿ ಇಟ್ಟಳು ಲಕುಮಿ, ಈ ಹೊತ್ತು, ಕ್ಷಮಿಸಮ್ಮ, ಬಾ ನನ್ನಾತ್ಮಕೆ, ಜೀವ ಜನನಿಯರು, ಗುರು ಬಂದನು, ನೂತನ, ಚಿತ್ರಸಂತೆ, ನೆರಳಾಗುವರು, ನೆನಪು, ಶುಭಾಷಯ, ಬರೆಯಬೇಕಿದೆ, ಮನದೊಳಗೆ ಮಳೆಯಾಗುತಿದೆ, ಶಿಲ್ಪಿ, ನಿಸರ್ಗ, ನೋವು, ಗರ್ಭಗುಡಿ, ಗೆಟ್ಟಿರೊಟ್ಟಿ, ಕ್ಷಮಾ, ಅಪರಾಧಿ ನಾನಂತೆ, ಭೂತಪ್ಪನ ಗುಡ್ಡ, ಕನ್ನಡ ಹಕ್ಕಿ, ಕವಿಯ ಕೂಗಿ ಕರೆದಿದೆ, ಮರೆತುಬಿಡಿ ನನ್ನ, ನಿನ್ನ ಪ್ರೀತಿಗಿಲ್ಲ ಕೊನೆ, ಮನದ ಮಾತು, ಶ್ವೇತಪ್ರಿಯ, ನಾನಿಲ್ಲವೇ, ಕಣ್ಣಮಿಂಚು, ಗೆಳತನ, ಅನ್ನಚಿನ್ನ, ಭವಿತದ ಬದುಕು, ಒಡಲಬಳ್ಳಿ, ಕರೆ ಬಂದಿದೆ, ನುಡಿಸುತಾಯೇ, ಮನದ ಸತಿ, ಗೆಳತಿ, ಭಾವನವರು, ಚಂದಾಮಾಮ ಬಾರೋ, ಸತಿ ಸರಸ್ವತಿ, ಹರಯಬಂದಾಗ, ವೇದ ಸೇರಿದಂತೆ ಹಲವು ಕವಿತೆಗಳು ಸಂಕಲನಗೊಂಡಿವೆ.

About the Author

ಬೇಲೂರು ರಘುನಂದನ್
(21 May 1982)

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು.  ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ..  ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ...

READ MORE

Related Books