ಕವಿ ನ. ಗುರುಮೂರ್ತಿ ಜಯಮಂಗಲ ಅವರು ಬರೆದ ಕವನ ಸಂಕಲನ-ಅರ್ಜಿ ಹಾಕಿ ಹುಟ್ಟಿದವರ ನಡುವೆ. ಒಟ್ಟು 64 ಕವಿತೆಗಳಿವೆ. ಸಾಮಾಜಿಕ ವಿದ್ಯಮಾನಗಳಿಗೆ ಸ್ಪಂದಿಸಿದ, ಪ್ರತಿಕ್ರಿಯಿಸಿದ, ಹೊಣೆಗಾರಿಕೆಯನ್ನು ಎಚ್ಚರಿಸುವ ಕವಿತೆಗಳು ಒಳಗೊಂಡಿವೆ. ನನ್ನ ಕವನ ನೋವ ದನಿ, ಬೆವರ ಹನಿ, ಬವಣೆಯ ಇಬ್ಬನಿ, ನನ್ನ ಕವನ ಬೇವ ನೆರಳು ಕರುಣಾ ಕಡಲು ಏಕಲವ್ಯನ ಒಡಲು ಹೀಗೆ ಕವನದ ಮೂಲಕ ತಮ್ಮ ಮೂಲ ಮನೋಧರ್ಮವನ್ನು ಸ್ಪಷ್ಟಪಡಿಸುತ್ತಾರೆ. ಕವಿಯಲ್ಲಿ ಒಂದು ಭಾವ-ವಿಚಾರ ಹಾಗೂ ವರ್ತನೆಗಳಲ್ಲಿ ಯಾವುದೇ ಮುಚ್ಚು-ಮರೆ ಇಲ್ಲ. ನನ್ನೊಳಗೆ ಬೆಳಕಿದೆ ನಾನು ಮಾತ್ರ ಕತ್ತಲಲ್ಲಿದ್ದೇನೆ ಎಂದು ವ್ಯಕ್ತಿಗತ ಪ್ರತಿಭೆಯನ್ನು ಹತ್ತಿಕ್ಕುವ ಕ್ರೂರ ವ್ಯವಸ್ಥೆಗೆ ಕನ್ನಡಿ ಹಿಡಿದು ವ್ಯಂಗ್ಯವಾಡುತ್ತಾರೆ,
ಸಾಹಿತಿ ಸರಜೂ ಕಾಟ್ಕರ್ ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಹಿಂದೆ ನಡೆದ ಅಮಾನವೀಯ ಪ್ರಸಂಗಗಳ ಬಗ್ಗೆ ಸೇಡಿನ ಕುರುಹಾಗಿ ಅವರ ಕಾವ್ಯ ಕುದಿಯುವುದಿಲ್ಲ. ಬದಲಾಗಿ; ಸರ್ವರೂ ಸಮಾನವಾಗಿ ಇದ್ದು, ಮಾನವೀಯತೆ ಮೆರೆಯೋಣ ಎಂಬ ಕನಿಷ್ಟ ಮನುಷ್ಯತ್ವವನ್ನು ಎಚ್ಚರಿಸುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.
ಬೆನ್ನುಡಿ ಬರೆದ ಸಾಹಿತಿ ಬೇಲೂರು ರಘುನಂದನ್ ‘ಕೆಲವು ಕಡೆ ಏಕೆ ಬದುಕುವುದನ್ನು ಕಲಿಸುತ್ತಿದ್ದಾರೆ, ಮತ್ತೆ ಕೆಲವು ಕಡೆ ಏಕೆ ಸಾಯುವುದನ್ನು ಕಲಿಸುತ್ತಿದ್ದಾರೆ ಎಂದು ಪ್ರಶ್ನಿಸುವ ಮೂಲಕವೇ ಸಾಮಾಜಿಕ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಏನಾಗಬೇಕು, ಹೇಗಿರಬೇಕು ಎಂಬ ಸೂಕ್ಷ್ಮತೆಯನ್ನು ಇವರ ಕಾವ್ಯಗಳು ಬಡಿದೆಬ್ಬಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕೃತಿಗೆ 2018ರ ಸಾಲಿನ ರಾಜ್ಯಮಟ್ಟದ ಕ.ಸಾ.ಪ ನಾ.ಕು.ಗಣೇಶ್ ದತ್ತಿ ಹಾಗೂ 'ಅವ್ವ' ಪ್ರಶಸ್ತಿ ಲಭಿಸಿದೆ.
ನಗು ಜಯಮಂಗಲ- ಕಾವ್ಯನಾಮದಿಂದ ನ.ಗುರುಮೂರ್ತಿ ಜಯಮಂಗಲ ಅವರು ಪರಿಚಿತರು. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಜಯಮಂಗಲ ಗಡಿ (ಜನನ: 01-07-1969) ಗ್ರಾಮದವರು.ತಂದೆ ದಿ.ನಲ್ಲಪ್ಪ ತಾಯಿ ಮುನಿಯಮ್ಮ. ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿಯ ಚಿಕ್ಕತಿರುಪತಿ ಸಂಕೀರ್ಣದ ಸಿದ್ದನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಕೋಲಾರ ಜಿಲ್ಲೆಯ ದಲಿತ ಚಳವಳಿಗಳಲ್ಲಿ ಭಾಗವಹಿಸಿದ ಅನುಭವಗಳೊಂದಿಗೆ ಸಾಹಿತ್ಕಾಸಕ್ತಿ ಬೆಳೆಸಿಕೊಂಡಿದ್ದರ ಫಲವಾಗಿ 'ಹೆಬ್ಬೆರಳ ಬೆವರು' ಕವನ ಸಂಕಲನ (2016) ಪ್ರಕಟಿಸಿದ್ದು, ಈ ಕೃತಿಯು ರಾಜ್ಯಮಟ್ಟದ ಕ.ಸಾ.ಪ ಪ್ರೊ.ಡಿ.ಸಿ. ಅನಂತಸ್ವಾಮಿ ಸಂಸ್ಮರಣೆ ದತ್ತಿ ಪ್ರಶಸ್ತಿ ಪಡೆದಿದೆ. 2018 ರಲ್ಲಿ ಪ್ರಕಟಿತ ಮತ್ತೊಂದು ಕವನ ಸಂಕಲನ-'ಅರ್ಜಿ ಹಾಕಿ ಹುಟ್ಟಿದವರ ನಡುವೆ' . ಅದಕ್ಕೂ ಅದೇ ಸಾಲಿನ ...
READ MORE