ಲೇಖಕ ಲಿಂಗರಾಜ ಸೊಟ್ಟಪ್ಪನವರ ಕವನ ಸಂಕಲನ ಕೃತಿ ʻಹರಿವ ನದಿಯೂ ಹಂಬಲದ ತಟವೂʼ. ಇಲ್ಲಿನ ಕವಿತೆಗಳ ಕಥಾ ವಸ್ತುಗಳು ಒಂದಕ್ಕೊಂದು ಭಿನ್ನವಾಗಿವೆ. ಮನುಷ್ಯ ಮನುಷ್ಯನ ನಡುವಿನ ಬಿರುಕು ಒಡಕುಗಳನ್ನು ಮತ್ತೆ ಬೆಸೆಯಲು ಮುರಿದಿರುವದನ್ನು ಕಟ್ಟಲು ತೊಡಗಬೇಕಾದ ತುರ್ತನ್ನು ಅವುಗಳು ಸೂಚಿಸುತ್ತವೆ. ಅತ್ಯಂತ ಅಗತ್ಯವಾದ, ಮನುಷ್ಯರೆಲ್ಲರೂ ಒಂದಾಗಿ ಮಾಡಬೇಕಾದ ಕೆಲಸಗಳ ಕುರಿತೂ ಹೇಳುತ್ತವೆ.
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹಿರೇಮರಳಿಹಳ್ಳಿ ಗ್ರಾಮದವರಾದ ಲಿಂಗರಾಜ ಸೊಟ್ಟಪ್ಪನವರ ಅವರು ಫೆಬ್ರವರಿ 7, 1977ರಲ್ಲಿ ಜನಿಸಿದರು. ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಅನೇಕ ಕತೆಗಳು, ಕವಿತೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಾವಿಗೆ ಐಡೆಂಟಿಟಿ ಇಲ್ಲ ಕವಿತೆಗಳ ಹಸ್ತಪ್ರತಿಗೆ ಕಣವಿ ಕಾವ್ಯ ಪುರಸ್ಕಾರ , ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಡಾ. ನಿರ್ಮಲ್ ವರ್ಮಾ ಅವರ ಹರ್ ಬಾರೀಶ್ ಮೇ’ ಕೃತಿಯ ಕನ್ನಡ ಅನುವಾದಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಫೆಲೋಶಿಪ್ ದೊರೆತಿವೆ. ಕೃತಿಗಳು: ಮಾರ್ಗಿ (ಕಥಾ ಸಂಕಲನ) ...
READ MORE