ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ

Author : ಸುಬ್ಬು ಹೊಲೆಯಾರ್‌ (ಹೆಚ್. ಕೆ. ಸುಬ್ಬಯ್ಯ)

Pages 115

₹ 100.00




Year of Publication: 2013
Published by: ಸಂಸ್ಕೃತಿ ಪ್ರಕಾಶನ
Address: #58 ಎಫ್, ಆದರ್ಶ ಕಾಲೋನಿ ಕಂಟೋನ್ಮೆಂಟ್ ಬಳ್ಳಾರಿ- 583104

Synopsys

‘ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ’ ಕೃತಿಯು ಸುಬ್ಬು ಹೊಲೆಯಾರ್ ಅವರ ಕವನಗಳ ಸಂಕಲನವಾಗಿದೆ. ಈ ಕವನ ಸಂಕಲನದ ಸ್ಥಾಯಿಭಾವ ನೋವು. ಕಹಿಯುಂಡ ಕವಿ ಕೆಂಡದುಂಡೆಗಳನ್ನು ಉಗುಳಿಲ್ಲ. ಆಗಿರುವ ಹಾಗೂ ಆಗುತ್ತಿರುವ ನೋವು ನುಂಗಿಕೊಂಡೇ ನೀಡಿದ ರಚನೆಗಳು. ನೋವುಂಡ ಮನಸುಗಳ ಸಮರ್ಥ ಅಭಿವ್ಯಕ್ತಿಯಾಗಿವೆ. ಆದ್ದರಿಂದಲೇ, ಇಲ್ಲಿರುವ ಕವನಗಳು ನೋವಿನ ಕುಲುಮೆಯಲ್ಲಿ ಅರಳಿದ ಹೂವುಗಳು . 

About the Author

ಸುಬ್ಬು ಹೊಲೆಯಾರ್‌ (ಹೆಚ್. ಕೆ. ಸುಬ್ಬಯ್ಯ)
(21 September 1962)

ಸುಬ್ಬು ಹೊಲೆಯಾರ್‌ ಎಂದೇ ಪ್ರಖ್ಯಾತವಾಗಿರುವ ಹೆಚ್. ಕೆ. ಸುಬ್ಬಯ್ಯ  ಕೋಮಾರಯ್ಯ ಮತ್ತು ತಿಪ್ಪಮ್ಮ ದಂಪತಿಗಳ ಮಗನಾಗಿ ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ ಜನಿಸಿದರು. ಪ್ರಸ್ತುತ ದೂರದರ್ಶನ ಚಂದನ ವಾಹಿನಿಯಲ್ಲಿ ಕಾರ್ಯಕ್ರಮ ನಿರೂಪಕರಾಗಿರವ ಸುಬ್ಬು ಹೊಳೆಯಾರ್‌, ಡಿಪ್ಲೊಮ ಇನ್ ಡ್ರಾಮಾ ಪದವಿ, ನೀನಾಸಂ ಹೆಗ್ಗೋಡು ಇಲ್ಲಿ ರಂಗ ಶಿಕ್ಷಣ ಕಲಿತವರು. ’ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ ಕೃತಿಗೆ ಡಾ. ಜಿ. ಎಸ್. ಎಸ್. ಕಾವ್ಯಪ್ರಶಸ್ತಿ, ದಿನಕರದೇಸಾಯಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀಗಂಧದ ಹಾರ ಕಾವ್ಯಪ್ರಶಸ್ತಿ, ’ಅಮ್ಮ’ಗೌರವ ಪ್ರಶಸ್ತಿ, ಮುಳ್ಳೂರ್‌ ನಾಗರಾಜ್ ಕಾವ್ಯಪ್ರಶಸ್ತಿ ಸೇರಿದಂತೆ ಹಲವಾರು ...

READ MORE

Reviews

(ಹೊಸತು, ಫೆಬ್ರವರಿ 2014, ಪುಸ್ತಕದ ಪರಿಚಯ)

ಮುಖಪುಟದ ಅಸಹಾಯಕ ಮೊಗದಲ್ಲಿನ ಭಾವನೆಗಳೇನಿರಬಹುದು ? ಹುಡುಕಿದರೂ ಅರ್ಧ ಪರ್ಸೆಂಟ್ ಸಂತಸದ ಸುಳಿವಿಲ್ಲ. ದುಃಖದ ಮಡುವಿನಲ್ಲಿ ಈಜಾಡಿ ಸಂತೋಷವನ್ನು ಮೇಲ್ವರ್ಗಗಳಿಗೆ ಧಾರೆಯೆರೆದು ಕೊಟ್ಟಿರುವ ಮುಖವಿದು, ಕೆಲವರಲ್ಲಿ ಕ್ರೌರ್ಯ. ಮೊಳಕೆಯೊಡೆಯಲು ತಕ್ಕಂತಹ ಭೂಮಿಕೆ - ಸಿಡಿಯಲು ಸನ್ನದ್ಧವಾದ ಅದಮ್ಯ ಸಿಡಿಮದ್ದು ! ಇಲ್ಲಿನ ಮುಖದ ಒಂದೊಂದು ಭಾವನೆಗಳು ಈ ಸಂಕಲನದ ಒಂದೊಂದು ಕವನಗಳಲ್ಲೂ ಪಡಿಮೂಡಿವೆ. ಇವು ದೀನ ದಲಿತರ ಹಾಡು-ಪಾಡು. ದೈನ್ಯತೆಯೇ ಮೂರ್ತಿವೆತ್ತಂತಿರುವ ನಮ್ಮ ದೇಶದ ದಲಿತವರ್ಗದ ನಿತ್ಯ ಬದುಕಿನ ಗೋಳು, ಮೃಷ್ಟಾನ್ನ ಉಣ್ಣುವವರ ಸೇವೆ ಮಾಡುತ್ತ ಅವಕಾಶವಂಚಿತರಾಗಿ ಶತಮಾನಗಳಷ್ಟು ದೀರ್ಘಕಾಲ ಯಾತನೆ ಅನುಭವಿಸಿ ಇದೀಗ ಎದ್ದು ಪ್ರತಿಭಟಿಸತೊಡಗಿದ ಕಾಲಘಟ್ಟದಲ್ಲಿನ ಈ ಕವನಗಳು ಅವರ ಬದುಕಿನ ವಾಸ್ತವವನ್ನು ತಿಳಿಸುತ್ತವೆ. ಜಾತೀಯತೆ ನಮ್ಮ ದೇಶಕ್ಕ೦ಟದ ಶಾಪ ! ದುರ್ಬಲರನ್ನು ತುಳಿದು ಹೊಸಕಿಹಾಕುವುದು ಇದುವರೆಗೆ ನಡೆದ ಮಹಾಪಾಪ ! ಚರಿತ್ರೆಯಲ್ಲಿ ನಡೆದುಹೋದ ಇಂತಹ ಅಚಾತುರ್ಯ ಮರುಗದಿರುವುದು ಕೂಡ ಮಹಾ ಅಪರಾಧ. ಈ ಸಂಕಲನ ಸುಬ್ಬು ಹೊಲೆಯಾರ್ ಅವರ ಕವನಗಳ ಗುಚ್ಛ, ಇಲ್ಲಿನ ನೋವಿನ ಆಳವನ್ನು ಗ್ರಹಿಸುವ ಸಹೃದಯತೆ ಯಾರಲ್ಲಿ ಇದೆ ? ನೋಡೋಣ. ಕೆಲವು ಕವನಗಳು ಅರ್ಥವಾಗುತ್ತಿಲ್ಲ, ನಾವೇ ಅರ್ಥೈಸಿಕೊಂಡು ಓದಬೇಕಾಗಿದೆ.

Related Books