ದಾಮಿನಿ ರಂಗಸ್ವಾಮಿ ಅವರ ಮೊದಲ ಕವನ ಸಂಕಲನ ಮೊಗ್ಗಿನ ಮನಸು. ಇವರ ಕವಿತೆಗಳಲ್ಲಿ ಮೌನ ರೂಪಕವಾಗಿ ಮಾತನಾಡುತ್ತದೆ. ಕೇಳಿದೆ ನೀನು ಕವನ ಎಂದರೇನು? ಎಂಬ ಪದ್ಯದಲ್ಲಿ ಕವಯತ್ರಿಯೂ ತಾನು ಕಂಡಂತೆ ಕವಿತೆ ಎಂದರೇನು ಎಂಬುದನ್ನು ವಿವರಿಸುತ್ತಾ ಹೋಗಿದ್ದಾರೆ. ಹೆಣ್ಣು ಮತ್ತು ಹೆಣ್ಣಿನ ಆವಸ್ಥೆ ಕುರಿತು ಅನೇಕ ಪದ್ಯಗಳಿದ್ದು ಸ್ತ್ರೀ ಪರವಾದ ಧ್ವನಿಯನ್ನು ಹೊರಡಿಸುತ್ತವೆ. ಮುನ್ನುಡಿಯಲ್ಲಿ ಅಂಜನಪ್ಪ ಅವರು ಯುವ ಬರಹಗಾರ್ತಿಯ ಕವಿತೆಗಳನ್ನು ವಿಶ್ಲೇಷಿಸುತ್ತಾ “ಹೆಣ್ಣೆಂಬ ಮೃದುತ್ವದ ಸಾಗರವನ್ನು ಪೋಣಿಸಿಕೊಂಡು ಹುಟ್ಟಿದವಳು' ಎಂಬುದು ಏಕ ಕಾಲಕ್ಕೆ ಹಲವು ಧನಿಗಳನ್ನು ಧರಿಸುತ್ತದೆ. ಒಮ್ಮೊಮ್ಮೆ ತೀವ್ರ ಭಾವ ಬಂಧಿಯಾಗುವ ಕವಿತೆಗಳು, ಮತ್ತೊಮ್ಮೆ ಅದರಿಂದ ಬಿಡಿಸಿ ಪಾಲಾಗುವ ಹೆಣಗಾಟವನ್ನೂ ಹೇಳಿ ಬಿಡುತ್ತದೆ. ಕೆಲ ಪದ್ಯಗಳು ಏಕಾಂತದ ಕನವರಿಕೆ ಆಗದೆ ಲೋಕಾಂತದ ಮೊರತ ಆಗುವ ಮೂಲಕ ಸಾಮಾಜಿಕ ಸಂರಚನೆ, ಪಲ್ಲಟಗಳಿಗೆ ಧನಿ ಕೊಟ್ಟು ಬಿಡುತ್ತವೆ’ ಎನ್ನುವ ಅವರ ಮಾತುಗಳು ದಾಮಿನಿ ಅವರ ಬರಹದ ಆಳ ಅಗಲವನ್ನು ವಿವರಿಸುತ್ತದೆ.
ದಾಮಿನಿ ರಂಗಸ್ವಾಮಿ 1992 ಜನವರಿ 11 ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿ ಜನಿಸಿದರು. ತಂದೆ ಪ್ರೊ.ಎಂ.ಜಿ.ರಂಗಸ್ವಾಮಿ ತಾಯಿ ಕವಿತಾ. ಹಿರಿಯೂರಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿ.ಯು.ಸಿ. ಶಿಕ್ಷಣ, ಧಾರವಾಡದ ಜನತಾ ಶಿಕ್ಷಣ ಸಂಸ್ಥೆ (ಎಸ್‌ಡಿಎಂ)ನಲ್ಲಿ ಪದವಿ (ಬಿ.ಎ.), ಧಾರವಾಡ ವಿಶ್ವವಿದ್ಯಾಲಯದ ಆರ್.ಸಿ.ಹಿರೇಮಠ ಅಧ್ಯಯನ ಪೀಠದಲ್ಲಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಾಲಾ ದಿನಗಳಲ್ಲಿ ಕನ್ಯಾಕುಮಾರಿಯಿಂದ ಭಾರತ - ಪಾಕಿಸ್ತಾನದ ವಾಘಾ ಗಡಿಯವರೆಗೆ ಪ್ರವಾಸ, ವಾಘಾ ಗಡಿಯಲ್ಲಿ ಪ್ರತಿದಿನ ಸಂಜೆ ಜರುಗುವ ಮಿಲಿಟರಿ ಕವಾಯಿತುನಲ್ಲಿ ಭಾಗವಹಿಸಿ ರಾಷ್ಟ್ರಧ್ವಜ ಹಿಡಿದ ಗೌರವ ಅವರದ್ದು. 2007ರಲ್ಲಿ ಬೆಂಗಳೂರಲ್ಲಿ ಬಿ.ಎಸ್.ಎನ್.ಎಲ್ ಏರ್ಪಡಿಸಿದ್ದ ಮ್ಯಾರಾಥಾನ್ ...
READ MORE