‘ತೊಟ್ಟಿಲ ಹಗ್ಗಕ್ಕೆ ಸುತ್ತಿದ ಮಿಡಿನಾಗರ’ ಜಿ.ವಿ. ಶಿವಕುಮಾರ ಅಮ್ಮಾಪುರ ಅವರ ಕವಿತಾ ಸಂಕಲನ.ಇಲ್ಲಿ ಕಾದ ಮೈಯೊಳಗೆ ಕದಳಿಯ ಕೊನರು, ಅವಳೊಂದಿಗೆ ಇಟ್ಟ ಹೆಜ್ಜೆಗಳು, ತೊಟ್ಟಿಲ ಹಗ್ಗಕ್ಕೆ ಸುತ್ತಿದ ಮಿಡಿನಾಗರ, ನನ್ನ ಕವನಕ್ಕೆ ಕಾಲು ಬಂದಿದೆ ಅಂತ ಅನ್ನಿಸಿದರ, ಮೌನ ಮಾಲಿನ್ಯ, ಕಲ್ಲಾದ ಬೆವರು, ಕಂದೀಲ ಮತ್ತು ಕ್ರಾಂತಿ, ಅವತರಿಸು, ದರಿದ್ರದೇವಿ, ದಲಿತ ಮಗುವಿನ, ಗಾಳಿ, ಗಜಲ್, ದೀಪ ದೀವಟಿಗೆ ಬೆಂಕಿ, ಕಾಡೂರ ಕುಸುಮ, ಎತ್ತರದ ಪುಟ್ಟ ಕಿಟಕಿಯಲಿ, ಸಾಕ್ಷಿ, ಹುಡುಕಾಟ, ವಿರಹಿ, ನನ್ನಾಕೆ, ದುಃಸ್ವಪ್ನ, ಅನುಭಾವಿ ಅಲ್ಲಮ ಮತ್ತು, ಕರಸ್ಥಲ ಲಿಂಗಯ್ಯ, ದೇವದಾಸಿ, ಭೀಮ ಸೇರಿದಂತೆ 46 ಕವಿತೆಗಳು ಸಂಕಲನಗೊಂಡಿವೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಅಮ್ಮಾಪುರದವರಾದ ಶಿವಕುಮಾರ ಹಿರೇಮಠ ಅವರು ಕವಿ-ಲೇಖಕ. ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಶಿವಕುಮಾರ ಅವರಿಗೆ 2014 ಕ್ರೈಸ್ಟ್ ಕಾಲೇಜ್ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಸಂದಿದೆ. ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಶಿವಕುಮಾರ ಕ್ರಿಯಾಶೀಲ ಯುವಕರಲ್ಲಿ ಒಬ್ಬ. ...
READ MORE