ಹೋರಾಟದ ಹಾಡುಗಳು

Author : ವೆಂಕಟೇಶ್‌ ಎಚ್‌

Pages 324

₹ 260.00




Year of Publication: 2022
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, 100 ಅಡಿ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ
Phone: 9449886390

Synopsys

ಹೋರಾಟದ ಹಾಡುಗಳು ವೆಂಕಟೇಶ್‌ ಎಚ್‌ ಹಾಗೂ ಜ್ಯೋತಿ ಎಸ್‌ ಅವರ ಸಂಪಾದಿತ ಕೃತಿಯಾಗಿದೆ. ತೆಲುಗಿನ ಕ್ರಾಂತಿಕಾರಿ ಕವಿ ಚರಬಂಡ ರಾಜು "ಹೋರಾಟವೇ ಡೈರಕ್ಷನ್, ಹಾಡು ನನಗೆ ಆಕ್ಸಿಜನ್" ಎಂದು ಘೋಷಿಸಿದ್ದ ಆದೇ ಹಾದಿಯಲ್ಲಿ 70ರ ದಶಕದ ಭಾಗದಿಂದ ಇಂದಿನವರೆಗೆ ಹಾಡುಗಳನ್ನು ಬರೆಯುತ್ತಾ, ಹಾಡುತ್ತಾ, ಹೋರಾಡುತ್ತಾ ಬಂದಿರುವ ಜನಪರ ಕವಿಗಳ ಹಾಡುಗಳನ್ನು ಈ ಕೃತಿಯಲ್ಲಿ ಸಂಕಲನಗೊಳಿಸಲಾಗಿದೆ. ಚರಬಂಡರಾಜು, ಗದ್ದ‌, ವಂಗಪಂಡು, ಪ್ರಸಾದ ರಾಪ್ ಮುಂತಾದ ತನ ಜನನಾಟ್ಯ ಮಂಡಳಿ ಕವಿಗಳ ಹಾಡುಗಳನ್ನು 80ರ ದಶಕದಲ್ಲಿ ಕನ್ನಡಕ್ಕೆ ಅನುವಾದಿಸಿಕೊಂಡು ಹೋರಾಟದ ಹಾದಿಯಲ್ಲಿ ಬಳಸಿಕೊಳ್ಳಲಾಯಿತು. ಅದೇ ಸಮಯದಲ್ಲಿ ಆರಂಭಗೊಂಡ ದಲಿತ ಚಳುವಳಿ ಹೋರಾಟದ ಭಾಗವಾಗಿ ಸಿದ್ದಲಿಂಗಯ್ಯ, ಕೆ.ಬಿ, ಸಿದ್ದಯ್ಯ, ಚನ್ನಣ್ಣವಾಲೀಕಾರ, ಕೋಟಗಾನಹಳ್ಳಿ ರಾಮಯ್ಯ, ಇಂದುಧರ ಹೊನ್ನಾಪುರ ಹಾಡುಗಳನ್ನು ಬರೆದರು. ನಂತರದಲ್ಲಿ ಹಿ.ಶಿ. ರಾಮಚಂದ್ರೇಗೌಡ, ಮಾನಸಯ್ಯ ಗೊಲ್ಲಹಳ್ಳಿ ಶಿವಪ್ರಸಾದ್‌, ಅಂಬಣ್ಣ, ಜನಾರ್ಧನ ಕೆಸರಗದೆ ಮುಂತಾದವರು ಹೋರಾಟದ ಅಗತ್ಯಗಳಿಗಾಗ: ಹಾಡುಗಳನ್ನು ಬರೆದರು, ಹೆಚ್ಚು ಕಡಿಮೆ ನಾಲ್ಕು ದಶಕಗಳ ಅವಧಿಯಲ್ಲಿ ಬೇರೆ ಬೇರೆಯವರಿಂದ ರಚನೆಯಾದ ಹೋರಾಟದ ಹಾಡುಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ. ದಲಿತ ರೈತ ಕಾರ್ಮಿಕ ಪರಿಸರವಾದಿ ಹಾಗೂ ಮಹಿಳಾಪರ ಹೋರಾಟಗಳ ಆಶಯಗಳಿಗೆ ಈ ದನಿಯಾಗುತ್ತಾ ಬಂದಿವೆ. ಇವುಗಳಿಂದಾಗಿ ವಚನ ಕವಿತೆಗಿಂತ ಭಿನ್ನವಾದ ಗೇಯತೆಗಳ ಹಾದಿಯೊಂದು ಕನ್ನಡದಲ್ಲಿ ಗಟ್ಟಿಯಾಗಿ ನಿರ್ಮಾಣಗೊಂಡಿತು. ಸಾವಿರಾರು ಜನರ ಮನಸೂರೆಗೊಂಡಿರುವ ಈ ಹಾಡುಗಳು ಅಸಿಗೂ ನಡೆಯುತ್ತಿರುವ ಮತ್ತು ಮಳೆಗೂ ಖಂಡಿತವಾಗಿ ಚೈತನ್ಯದಾಯಿಯಾಗಿದೆ ಎಂದು ಬಂಜಗೆರೆ ಜಯಪ್ರಕಾಶ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವೆಂಕಟೇಶ್‌ ಎಚ್‌

ವೆಂಕಟೇಶರವರು ಮೂಲತಃ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಯಶವಂತನಗರದ ಗ್ರಾಮದವರು. ಇವರು ಪ್ರಾರ್ಥಮಿಕ ಪ್ರೌಢ ಶಾಲೆಯನ್ನು ಸ್ವಗ್ರಾಮದಲ್ಲಿ ಪೂರ್ಣಗೊಳಿಸಿ, ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಸ್ತುತ್ತ ಸ.ಪ್ರ.ದ,ಕಾ.ರಾಣೇಬೆನ್ನೂರಿನಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಹೋರಾಟದ ಹಾಡುಗಳು ಇವರ ಮೊದಲ ಕೃತಿಯಾಗಿದೆ. ...

READ MORE

Related Books