‘ಪ್ರೇಮ ಹೂ ಗೊಂಚಲು’ ಶ್ರೀ ಬಿ.ವಿ. ರಾವ್ ಅವರ ಕವನ ಸಂಕಲನವಾಗಿದೆ. ಈ ಕವನಗಳಲ್ಲಿ "ಪ್ರೇಮ ಹೂಗೊಂಚಲು" ಭಾಗದಲ್ಲಿ ನಿನ್ನ ನೆನಪು, ಯಾರು ಹಿತವರು, ಅವಳ ಕನಸು, ಆತ್ಮಾರ್ಪಣೆ ಮತ್ತು "ಭಕ್ತಿ ಹೂಗೊಂಚಲು" ಭಾಗದಲ್ಲಿ ಅಪರ್ಣೆಗೆ, ದೇವೀ ಅಷ್ಟಕ, ದೇವಿ ತ್ರಿಮೂರ್ತಿಗೆ, ಶರಣಾಗತಿ, ಗಣಪತಿ ಮತ್ತು ಜಗನ್ಮಾತೆ ಮತ್ತು 'ಶಿವಪಾದಕೆ' ಈ ಕವನಗಳನ್ನು ಭರತನಾಟ್ಯಕ್ಕೆ ಅಳವಡಿಸಿದ ಶ್ರೀಮತಿ ಸಂಧ್ಯಾ ಕೇಶವರಾವ್ ಅವರಿಗೆ ನನ್ನ ಕೃತಜ್ಞತೆಗಳು. ನನ್ನ ಪ್ರಥಮ ಕವಿ ಸನ್ಮಾನವನ್ನು ಮಾಡಿದ ಕಾವೇರಿ ಮಾತಾ ಸಂಗೀತ ವೃಂದಕ್ಕೆ ನನ್ನ ಧನ್ಯವಾದಗಳು. ಇದರ ಕೆಲವು ಗೀತೆಗಳನ್ನು ಪ್ರಥಮವಾಗಿ ಸಾರ್ವಜನಿಕವಾಗಿ ಹಾಡಿದವರು ಸೋಮಸುಂದರಂ ಮತ್ತು ವೃಂದದವರು.
ಶ್ರೀ ಬಿ.ವಿ.ರಾವ್ (ಬಪ್ಪನಾಡು ವಿಜಯ್ ಕುಮಾರ್) ಅವರು ದಿನಾಂಕ: 25\ 09\1946 ರಂದು ಮಂಗಳೂರು ಜಿಲ್ಲೆಯ ಕಿನ್ನಿಗೋಳಿನಲ್ಲಿ ಜನಿಸಿದರು. ಕಿನ್ನಿಗೋಳಿಯ ಪಾಂಪೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕಲಿತ ಮೇಲೆ ಬಿ.ವಿ.ರಾಯರು ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಪಿ.ಯು.ಸಿ ಮಾಡಿ ಉನ್ನತ ಅಂಕಗಳನ್ನು ಗಳಿಸಿ ಸುರತ್ಕಲ್ಲಿನ ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ( ಆಗ KREC ಮತ್ತು ಈಗ NITK) 1968ರಲ್ಲಿ ಬಿ.ಇ. ಮೆಕ್ಯಾನಿಕಲ್ ಮಾಡಿದರು. ಶ್ರೇಷ್ಠ ಇಂಜಿನಿಯರಾಗಿದ್ದು ಕವಿಗಳಾಗಿರುವುದು ಇವರ ವಿಶೇಷ ಸಾಧನೆ. ಇವರು ನಚಿಕೇತ ಮನೋವಿಕಾಸ ಕೇಂದ್ರ, ವಿಜಯನಗರ, ಬೆಂಗಳೂರು, ಇದರ ಸಂಸ್ಥಾಪಕರು ಹಾಗೂ ಪ್ರಸ್ತು ...
READ MORE