ಲೇಖಕ ಆಲೂರು ದೊಡ್ಡನಿಂಗಪ್ಪ ಅವರ ಕೃತಿ ‘ಮುಟ್ಟು’. ಕೃತಿಗೆ ಬೆನ್ನುಡಿ ಬರೆದ, ಎಚ್ ಎಸ್ ಶಿವಪ್ರಕಾಶ್ ’ದೊಡ್ಡನಿಂಗಪ್ಪ ತುಳಿದ ಹಾದಿಯಲ್ಲಿ ನಡೆಯುವಾಗ ಗುರುತಿಸುವ, ಹೊಳೆಯಿಸುವ, ಬೆಳಗಿಸುವ ಸೂಕ್ಷ್ಮಗಳು ಅವರ ಕವಿತೆ ಕಾಂತಿಯನ್ನು ನೀಡುತ್ತವೆ. ಒಂದಿರುಳು ಕೋವಿ ನಳಿಕೆಯಿಂದ ಅಂತರಿಕ್ಷ ಕೂಟಗಳ ಸುತ್ತುವ ಕುದುರೆ ಹಾರಿತು ಎಂಥ ಅಚ್ಚರಿ; ಇಲ್ಲಿ ನೋಡುವ ಬಗೆ ಕೇವಲ ವರ್ಣನಾತ್ಮಕವಾಗದೆ, ಅನ್ವೇಷಕವಾಗುತ್ತದೆ. ಬಹುಮಟ್ಟಿಗೆ ಬಾಲ್ಯ ಕಾಲದ ಅನುಭವಗಳನ್ನು ಹೂರಣ ಮಾಡಿಕೊಂಡಿರುವ ಇಲ್ಲಿನ ಕವಿತೆಗಳು ಕಪ್ಪು ಬೋರ್ಡಿನ ಮೇಲೆ ಮೂಡಿದ ಬಳಿ ಅಕ್ಷರಗಳಂತೆ ಗಮನ ಸೆಳೆಯುತ್ತವೆ. ಶವದ ಈ ಮನೆ' 'ಎತ್ತಿಕೊ’ ರೀತಿಯ ಕವಿತೆಗಳು' ಮಿತ್ರ ವಚನದ ಮೋಡಿಯಲ್ಲಿ ಗಾಢ ಭಾವನೆಗಳನ್ನು ಧ್ವನಿಸುತ್ತವೆ. ಈ ಕವಿತೆಗಳ ರಾಜಕೀಯ ಅರ್ಥಗಳು ಗಟ್ಟಿ ಮಾತುಗಳಲ್ಲಿ ಕಿರುಗುಡುವುದಿಲ್ಲ. ಬದಲಿಗೆ ತಮ್ಮ ಮೆಲುದನಿಯಿಂದ ಒಳಗೊಳಗೇ ಅನುರಣಿಸಿತೊಡಗುತ್ತವೆ. ಕೆಲವೆಡೆ ಪ್ರತಿಮೆಗಳು ಎಡವಿದರೂ ಒಟ್ಟಾರೆಯಾಗಿ ಪರಿಚಿತವನ್ನು ಅಪರಿಚಿತವಾಗಿಸುವಲ್ಲಿ ಕವಿತೆಗಳು ಸ್ಪಷ್ಟ ಪ್ರತಿಮೆಗಳ ಮೂಲಕ ಮೈತಾಳುತ್ತವೆ” ಎಂದು ಪ್ರಶಂಸಿದ್ದಾರೆ.
ಲೇಖಕ ಆಲೂರು ದೊಡ್ಡನಿಂಗಪ್ಪ ಅವರು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಆಲೂರಿನವರು. ಸದ್ಯಕ್ಕೆ ಮೈಸೂರಿನ ರಂಗಾಯಣದಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲೂ ಸದಾ ಕ್ರಿಯಾಶೀಲರು. 'ಪಲ್ಲಟ' ಕನ್ನಡ ಚಲನಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಕೃತಿಗಳು: 'ನೇಕಾರ', 'ಮುಟ್ಟು' ಮತ್ತು 'ಎದೆಯ ಹೊಲದಲ್ಲಿ ಸೂರ್ಯಕಾಂತಿ,( ಕವನ ಸಂಕಲನಗಳು). ...
READ MORE