‘ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ’ ಮೈ.ಶ್ರೀ. ನಟರಾಜರ ಕವನ ಸಂಕಲನವಾಗಿದೆ. ಇದಕ್ಕೆ ಜೋಗಿಯವರ ಬೆನ್ನುಡಿ ಬರಹವಿದೆ; ರಾಜಕಾರಣವನ್ನು ಗೇಲಿ ಮಾಡುವುದಕ್ಕೆ ವ್ಯಂಗ್ಯಚಿತ್ರ ಮತ್ತು ಕವಿತೆಯಿಂದ ಮಾತ್ರ ಸಾಧ್ಯ. ಅಲ್ಲಿ ಮಾತಾಡಿದರೆ ಜಗಳವಾಗುತ್ತದೆ. ವಾದಿಸಿದರೆ ಮಾತು ಬಿದ್ದು ಹೋಗುತ್ತದೆ. ನಿರಾಕರಿಸಿದರೆ ಸೋಲಬೇಕಾಗುತ್ತದೆ. ಕವಿತೆ ಈ ಎಲ್ಲಾ ಅಡೆತಡೆಗಳನ್ನೂ ಮೀರಿಬಿಡುತ್ತದೆ. ಈ ಸಂಕಲನದಲ್ಲಿ ಎಂ.ಎಸ್.ನಟರಾಜ್ ಅಮೆರಿಕಾ ರಾಜಕಾರಣವನ್ನು, ಅದನ್ನು ಆವಾಹಿಸಿಕೊಂಡ ವ್ಯಕ್ತಿಗಳನ್ನು ಕವಿತೆಯ ಮೂಲಕ ನಿವಾಳಿಸುತ್ತಾರೆ. ಸರಸಮಯ ಶೈಲಿ, ಲಯಬದ್ಧತೆ, ತುಸು ವ್ಯಂಗ್ಯ ಮತ್ತು ನಿರಾಳ ಕನ್ನಡದ ಈ ಕವಿತೆಗಳು ಕಷ್ಟ ಕೊಡುವುದಿಲ್ಲ. ಕವಿಯ ಸಕಾರಣ ಸಿಟ್ಟನ್ನು ತೋರುವಾಗಲೂ ಈ ಕವಿತೆಗಳು ಗದ್ದಲ ಮಾಡುವುದಿಲ್ಲ. ಅಣಕವಾಡು, ಸಾಂದರ್ಭಿಕ ರಚನೆ, ಪ್ರತಿಕ್ರಿಯೆ- ಹೀಗೆ ಮೂರು ಬಗೆಯ ಪದ್ಯಗಳು ಇಲ್ಲಿವೆ. ಇವು ಅರ್ಥ ಮಾಡಿಕೊಳ್ಳಲು ತಿಣುಕಾಡಬೇಕಾದ ರಚನೆಗಳಲ್ಲ. ಬದಲಾಗಿ ಮನಸ್ಸನ್ನು ಮುದಗೊಳಿಸಿ, ಮುಗುಳ್ಳಗು ತುಳುಕಿಸುವಂಥ ಸಜ್ಜನ ಕವಿತೆಗಳು. ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ ಎಂಬ ಶೀರ್ಷಿಕೆಯಲ್ಲಿ ವ್ಯಂಗ್ಯವಿದೆ, ವಿಪರ್ಯಾಸವಿದೆ. ಆರೋಗ್ಯವಂತ ತುಂಟ ಮನಸ್ಸು ತನ್ನೆದುರಿಗಿನ ಜಗತ್ತನ್ನು ವಂಡರ್‌ಕಣ್ಣಿಂದ ನೋಡಿ ಬರೆದ ಸಾಲುಗಳಂತೆ ಕಾಣುವ ಈ ಪದ್ಯಗಳು ಕವಿತ್ವದ ಭಾರದಿಂದ ನಮ್ಮನ್ನು ಕುಗ್ಗಿಸುವುದಿಲ್ಲ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
ಮೈ.ಶ್ರೀ. ನಟರಾಜ-ಹುಟ್ಟೂರು ಹಾಸನ, ಅರವತ್ತರ ದಶಕದ ಕೊನೆಯಲ್ಲಿ ಅಮೆರಿಕೆಗೆ ತೆರಳಿ, ಅಮೆರಿಕದ ಅಣುಶಕ್ತಿ ನಿಯಂತ್ರಣ ಆಯೋಗದಲ್ಲಿ ರಾಕ್ ಮೆಕ್ಯಾನಿಕ್ಸ್ ವಿಭಾಗಾಧಿಕಾರಿ ಮತ್ತಿತರ ಜವಾಬ್ದಾರಿಗಳೊಂದಿಗೆ ಸೇವೆ ಸಲ್ಲಿಸಿ ನಿವೃತ್ತರಾಗಿ ಮೇರೀಲ್ಯಾಂಡಿನಲ್ಲಿ ಪತ್ನಿ ಗೀತಾರೊಂದಿಗೆ ವಾಸವಿದ್ದಾರೆ. ನಾನೂ ಅಮೆರಿಕನ್ ಆಗಿಬಿಟ್ಟೆ, ಮಧುಚಂದ್ರ, ಸಿರಿಕೇಂದ್ರ (ಕವನ ಸಂಕಲನ), ಮೀನಿನ ಹೆಜ್ಜೆ, ಮತ್ತು ನೇಣು, ಪರದೇಶಿಗಳ ಪಾರ್ಟಿ ಮತ್ತು ಇತರ ಮೂರು ನಾಟಕಗಳು. ಮತ್ತು ಐ ಆ್ಯಮ್ ಬ್ರಾಹ್ಮಣ್ (ನಾಟಕಗಳು), ಜಾಲತರಂಗ, ಮತ್ತು ಜಾಲತರಂಗಿಣಿ (ಅಂಕಣ ಬರಹಗಳು) , ಮಾಯಾವಿ ಸರೋವರ (ಅನುವಾದಿತ ನಾಟಕ) The void and the womb (ಬಯಲು-ಬಸಿರು) ...
READ MORE