ಕಣ್ಣ ಪಾಪೆಯ ಬೆಳಕು

Author : ಟಿ. ಯಲ್ಲಪ್ಪ

Pages 108

₹ 100.00




Year of Publication: 2016
Published by: ಬೆಳಕು ಪ್ರಕಾಶನ
Address: ನಂ-38, ಕಾವ್ಯ, 1ನೇ ತಿರುವು, ಗಂಗಮ್ಮ ದೇವಸ್ಥಾನ ರಸ್ತೆ, ಎ.ನಾರಯಣಪುರಂ ಬಡಾವಣೆ, ದೂರವಾಣಿನಗರ ಅಂಚೆ, ಬೆಂಗಳೂರು-560016
Phone: 9900265419

Synopsys

ಕಣ್ಣ ಪಾಪೆಯ ಬೆಳಕು- ಕವಿ, ಲೇಖಕ ಟಿ.ಯಲ್ಲಪ್ಪ ಅವರ ಕವನ ಸಂಕಲನ. ಕಾಂತಾವಾರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟಿನ 2016 ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ ಇದು. ಟಿ. ಯಲ್ಲಪ್ಪ ಈಗ ಬರೆಯುತ್ತಿರುವರಲ್ಲಿ ಗಮನಿಸಬೇಕಾದ ಕವಿಗಳಲ್ಲೊಬ್ಬರು. ಅವರ ಕವನ ಸಂಕಲನವಾದ ಕಣ್ಣ ಪಾಪೆಯ ಬೆಳಕು ಕೃತಿಯಲ್ಲಿ ಸಂಗ್ರಹದ ಉದ್ದಕ್ಕೂ ಓದುಗರನ್ನು ದಂಗುಬಡಿಸುವಂಥ ಕವಿತೆಗಳಿವೆ. ವಿನಯದ ಕವಚದಲ್ಲಿ ರಕ್ಷಿತವಾದ ಅವರ ಸಾತ್ವಿಕ ಆಕ್ರೋಶ ಅನನ್ಯವಾದದ್ದು. ಅದನ್ನು ಬೇಕಾದರೆ ಹೃದಯದಲ್ಲಿ ಆಚಿತಸ್ಥವಾದ ಬಸಿರಿನ  ದಿವ್ಯಾಗ್ನಿ ಅನ್ನಬಹುದು. ಭಾಷೆಯ ಸಂಯಮ, ಅರ್ಥದ ಧ್ವನ್ಯಾನುರಣನ, ಲಯದ ನಿರ್ಲಿಪ್ತಿ ಮತ್ತು ಅಂಗೈಯಲ್ಲಿ ಆರತಿ ಹಿಡಿದ ಪ್ರಾಣದ ಉರಿದೀವಿಗೆಯಿಂದಾಗಿ ಇವರ ಕವಿತೆಗಳು ಕಾವ್ಯಾಸಕ್ತರನ್ನು ಆಕ್ರಮಿಸುತ್ತವೆ ಎನ್ನುತ್ತಾರೆ ಡಾ. ಎಚ್.ಎಸ್.ವೆಂಕಟೇಶಮೂರ್ತಿ. ಕನ್ನಡದ ಮಹಾಕವಿಗಳ ಕಾವ್ಯದ ನಡೆಮಡಿಯ ಮೇಲೆ ವಿನಯದಿಂದ ಹೆಜ್ಜೆ ಶರಣು ಸಲ್ಲಿಸುತ್ತಾ ಸಾಗುವ ಇವರ ಕವಿತೆಗಳು ಬಹು ಪ್ರಚಲಿತ ರೂಪಕಗಳನ್ನು ಥಟ್ಟನೆ ಉಲ್ಟಾ ಮಾಡಿ ವ್ಯಂಗ್ಯಧ್ವನಿ ಸಾಧಿಸುವ ಕ್ರಮ ಮೆಚ್ಚುಗೆಯಾಗುವಂತಿದೆ. ಪುತಿನ ಗಾಂಧಿಯನ್ನು ಕುರಿತು ಬರೆದಾಗ ಸೃಷ್ಟಿಸಿದ ಗರುಡ ಮತ್ತು ಅದರ ನೆರಳು ಇಲ್ಲಿ ಪಲ್ಲಟಗೊಂಡು ಗರುಡ ಮತ್ತು ಹಕ್ಕಿಮರಿಯ ದಾರುಣ ರೂಪಕವಾಗಿ ಭಾವಾಂತರಗೊಂಡಿದೆ. ಇಲ್ಲಿನ ಕವಿತೆಗಳಲ್ಲಿ ಹೊಸತನವಿದೆ. 

About the Author

ಟಿ. ಯಲ್ಲಪ್ಪ
(02 October 1970)

ಟಿ. ಯಲ್ಲಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ನಾರಾಯಣಪುರದಲ್ಲಿ  02-10-1970 ರಂದು ಜನಿಸಿದರು. ಕೃಷಿ ಕಾರ್ಮಿಕರ ಮನೆಯಲ್ಲಿ ಹುಟ್ಟಿದ ಯಲ್ಲಪ್ಪನವರು ಶಾಲಾ ದಿನಗಳಿಂದಲೇ ಕವಿತಾ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಶಾಲಾ ಕಾಲೇಜುಗಳ ಅನೇಕ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಪ್ರತಿಭಾವಂತರು. ಪ್ರಸ್ತುತ ಬೆಂಗಳೂರಿನ ಕೆ.ಆರ್.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಇಪ್ಪತ್ತೆರಡರ ಅಳಲು(ಲಲಿತಾ ಪ್ರಬಂಧ), ಕಡಲಿಗೆ ಕಲಿಸಿದ ದೀಪ ಚಿಟ್ಟೆಮತ್ತು ಜೀವಯಾನ, ನವಿಲಿಗೆ ಬಿದ್ದ ಕತ್ತಲ ಕನಸು, ಇವರ ಕಡಲಿಗೆ ಕಳಿಸಿದ ದೀಪ ಕೃತಿಯು ANKLETS ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷಿಗೆ ...

READ MORE

Related Books