‘ನೀನಾ ೬೦’ ಇದು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಕೃತಿಯಾಗಿದ್ದು, ಇಡೀ ಸಂಕಲನ ವಿಪ್ರಲಂಭ ಶೃಂಗಾರದ ಕವಿತೆಗಳನ್ನೇ ಒಳಗೊಂಡಿದೆ. ಇಲ್ಲಿಯ ಕವಿತೆಗಳು ಸ್ವಾನುಭವ, ಭಾವ ತೀವ್ರತೆ, ಹೊಚ್ಚಹೊಸ ರೂಪಕ- ಪ್ರತಿಮೆ, ನಾಟಕೀಯ ಗುಣವಿಶೇಷ ಮುಂತಾದವುಗಳಿಂದ ಸಮೃದ್ಧವಾಗಿವೆ ಎಂಬುದನ್ನೂ ಈ ಬರೆಹಗಳು ಎತ್ತಿ ತೋರಿವೆ. ಇಲ್ಲಿಯ ಸ್ಪಂದನೆಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಹೊಸ ಓದಿಗೆ, ಹೊಸ ನೋಟಕ್ಕೆ ದಿಕ್ಕೂಚಿಯಾಗಿವೆ. 'ನೀನಾ' ೧೯೬೪ ರಲ್ಲಿ ಪ್ರಕಟವಾದಾಗಲೇ ಓದಿದ ತಲೆಮಾರಿನವರು, ನಂತರ 1988 ರಲ್ಲಿ ಅದರ ಓದಿಗೆ ತೆರೆದುಕೊಂಡವರು ಮತ್ತು ಈಗ 'ನೀನಾ-೬೦' ಕ್ಕೆ ಸ್ಪಂದನೆ ಬರೆಯುವ ಸಂದರ್ಭದಲ್ಲಿ ಓದಿದವರು - ಹೀಗೆ ಮೂರು ವಿಭಿನ್ನ ಕಾಲಘಟ್ಟದ ಓದು, ಸ್ಪಂದನೆಗಳು ಕುತೂಹಲಕರವಾಗಿವೆ. ಒಂದೇ ಕವಿತೆ ವಿಭಿನ್ನಾರ್ಥಗಳಿಗೆ, ಹೊಸ ಅರ್ಥ ಛಾಯೆಗಳಿಗೆ ಕಾರಣವಾಗಿರುವುದು ಕವಿಯ ಸೃಜನಪ್ರತಿಭೆಗೆ ನಿದರ್ಶನವಾಗಿದೆ.
ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...
READ MORE