ಡಿ.ಬಿ. ರಜಿಯಾ ಅವರ ಈ ಕಾವ್ಯ ಸಂಕಲನಕ್ಕೆ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ಬೆನ್ನುಡಿ ಬರಹವಿದೆ. ಬದುಕಿನ ಕುರಿತಾದ ಅನುರಾಗವನ್ನು ಮಮತೆಯ ಘನರಾಗವಾಗಿಸುವೆಡೆ ಮುಖಮಾಡಿರುವ ಡಿ.ಬಿ. ರಜಿಯಾ ಅವರ ಕವಿತೆಗಳ ಈ ಕಜದ ಸ್ಥೈರ್ಯ, ಅದರ ಅಂತಸ್ಥ ಸರಳತೆಯಲ್ಲಿದೆ. ವೈಚಾರಿಕ, ಆರ್ಥಿಕ ಸ್ವಾತಂತ್ರ್ಯಗಳ ಮಾತಿರಲಿ ಭಾವಸ್ವಾತಂತ್ರ್ಯದ ಆವರಣಕ್ಕಾಗಿ ತುಡಿಯುವ ಜೀವದ ಸೀದಾ ಸಾದಾ ಸೊಲ್ಲುಗಳೇ ತಮ್ಮ ತೀವ್ರತೆ ಮತ್ತು ಪಾರದರ್ಶಕತೆಯಿಂದಾಗಿ ಇಲ್ಲಿ ತಮ್ಮ ಒಳಮರ್ಮವನ್ನು ತೋರಬಲ್ಲವಾಗಿವೆ ಎಂದಿದ್ದಾರೆ ಕಾಯ್ಕಿಣಿ. ಹಾಗೇ ಛಾಯೆ ಮತ್ತು ಮಾಯೆಗಳ ನಡುವಿನ ಅಸ್ಪಷ್ಟ ವಲಯದಲ್ಲಿ ರಜಿಯಾರ ಜೀಕು ಇದೆ. ಛಾಯೆ ಎಂದರೆ ಕೇವಲ ನೆರಳಲ್ಲ. ಛಾಯೆ ಎಂದರೆ ಬಿಂಬ ಕೂಡ. ಮಾಯೆ ಎಂದರೆ ಕೇವಲ ಮಾಯಕವಲ್ಲ, ಮಾಯೆ ಎಂದರೆ ಮಮತೆ ಕೂಡ. ಇಂಥ ಹೊಳಹುಗಳಿಗೆ ಆಸ್ಪದವಿದ್ದಾಗೆಲ್ಲ ಇವರ ಕವಿತೆಗಳು ಸ್ಪಂದನಶೀಲವಾಗುತ್ತವೆ. ಒಂದು ಬಗೆಯ ಕಡ್ಡಾಯ ಸಿಲೆಬಸ್ಸಿನಂತೆ ಕವಿಗಳ ಮೇಲೆ ವಿಶೇಷತಃ ಹೆಣ್ಣು ಕವಿಗಳ ಮೇಲೆ ಹೇರಲ್ಪಡುವ ನಿಗದಿತ ವಸ್ತುಪ್ರಪಂಚಗಳ ಯಾದಿಯ ಹಂಗನ್ನು ಪಕ್ಕಕ್ಕೆಸೆದು ತಮ್ಮ ಮಾಯೆ ತುಂಬಿದ ಕಣ್ಣನ್ನು ಒಮ್ಮೆ ಉಜ್ಜಿಕ್ಕೊಂಡು ಸುತ್ತಲೂ ನೋಡಿದರೆ ಸಾಕು, ಅಪ್ರತಿಮ ವಿನ್ಯಾಸಗಳ ಲೋಕ ನಳನಳಿಸಿ, ಮೈದಾಳಿ ಬರುವ ಅಚ್ಚರಿ ಮತ್ತು ಅಭಯ ರಜಿಯಾ ಅವರದಾಗಲಿ ಎಂದು ಅಕ್ಕರೆಯಿಂದ ಹಾರೈಸಿದ್ದಾರೆ.
ಡಿ. ಬಿ. ರಜಿಯಾ ಮೂಲತಃ ಬಳ್ಳಾರಿ ಜಿಲ್ಲೆಯ ಹಿರೇಕಾಳಿನವರು. 1954 ಜನವರಿ 26ರಂದು ಜನನ. ತಂದೆ ಹೆಚ್. ಇಬ್ರಾಹಿಂ, ತಾಯಿ ಸಕೀನಾ ಬೇಗಂ. ‘ಛಾಯೆ, ಕಳೆದು ಹೋಗುತ್ತೇವೆ, ಋತು’ ಎಂಬ ಹನಿಗವನಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ‘ವಾಸ್ತವದ ಕನವರಿಕೆ’ ಅವರ ಕಥಾ ಸಂಕಲನವಾಗಿದೆ. ಅವರಿಗೆ ಡಾ. ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಬಹುಮಾನ, ಕರಾವಳಿ ಲೇಖಕಿಯರು ವಾಚಕಿಯರ ಸಂಘದ ಕೃಷ್ಣಬಾಯಿ ದತ್ತಿ ಬಹುಮಾನ, ಅಮ್ಮ ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗಡೆ ಬಹುಮಾನ , ಹರಿಹರಶ್ರೀ ಪ್ರಶಸ್ತಿ, ...
READ MORE