ಸ್ತ್ರೀಯೆಂದರೆ ಅಷ್ಟೇ ಅಲ್ಲ

Author : ಅಶೋಕ ನರೋಡೆ

Pages 186

₹ 150.00




Year of Publication: 2021
Published by: ಸಚಿನ್ ಪಬ್ಲಿಷರ್ಸ್
Address: ನಂ.624, 2ನೇ ಮಹಡಿ, 9ನೇ ಡಿ ಮೈನ್, ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು- 560104
Phone: 9986167684

Synopsys

‘ಸ್ತ್ರೀಯೆಂದರೆ ಅಷ್ಟೇ ಅಲ್ಲ…’ ವಿಸ್ಮೃತಿ-ವಿಸ್ಮಯ-ವಿಭ್ರಮ ಈ ಕೃತಿ ಡಾ.ಅಶೋಕ ನರೋಡೆ ಅವರ ಖಂಡಕಾವ್ಯಗಳ ಸಂಕಲನ. ಈ ಸಂಕಲನಕ್ಕೆ ಶ್ರೀಮತಿ ಲೀಲಾ ಕಲಕೋಟಿ, ಡಾ. ಶಶಿಕಲಾ ಎಂ. ಮೊರಬಂದ, ಡಾ. ಗುರುದೇವಿ ಹುಲೆಪ್ಪನವರಮಠ ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆದಿರುವ ಲೀಲಾ ಕಲಕೋಟಿ ಅವರು ಸ್ತ್ರೀ ಅಂದರೆ ಅಷ್ಟೇ ಅಲ್ಲ ಎನ್ನುವ ಡಾ.ಅಶೋಕ ನರೋಡೆಯವರ ಕೃತಿಯು ಶೀರ್ಷಿಕೆಯಿಂದ ನಮಗೆ ಥಟ್ಟನೆ ನೆನಪಾಗುವುದು ಹಿರಿಯ ಕವಿ ಡಾ. ಶಿವರುದ್ರಪ್ಪನವರ ಸ್ತ್ರೀ ಅಂದರೆ ಅಷ್ಟೇ ಸಾಕೆ ಎನ್ನುವ ಕವನ. ಸ್ತ್ರೀ ಎಂಬ ಒಂದಕ್ಷರದಲ್ಲಿ ಅಡಗಿದ್ದ ಸ+ತ+ರ ಅಕ್ಷರಗಳ ಏಕತಾನತೆ ಹೊಂದಿ ಹೊರಹೊಮ್ಮಿದ ಸ್ತ್ರೀಯೆಂಬ ಅಕ್ಷರದಂತೆ. ವಿಸ್ತೃತಿ, ವಿಭ್ರಮ, ವಿಸ್ಮಯ ಎಂಬ ಖಂಡಕಾವ್ಯಗಳಲ್ಲಿ ಕೇಂದ್ರ ಬಿಂದು ಸ್ತ್ರೀಯಾಗಿದ್ದು, ಅವಳ (ಆಂತರಿಕ) ಅಂತರಂಗದ ಅಲೆಗಳ ಧ್ವನಿಯೇ ಇಲ್ಲಿ ಪ್ರತಿಧ್ವನಿಸಿದಂತಿದೆ. ಇದು ಓದುಗರ ಮನದಲ್ಲೂ ಹಲವು ಬಗೆಯ ಅಲೆಗಳನ್ನು ಎಬ್ಬಿಸುವಂತಿದೆ. ನಾದ-ನಿನಾದವಾಗಿ ಮಾರ್ದನಿಸುವಂತಿದೆ ಎನ್ನುತ್ತಾರೆ. ಕೃತಿಯ ಕುರಿತು ವಿವರಿಸಿರುವ ಡಾ.ಶಶಿಕಲಾ ಎಂ. ಮೊರಬದ ಅವರು ಇಂದಿನ ಮಹಿಳೆಯ ಇರಬಯಸುವ ಆದರ್ಶವನ್ನು ಕುರಿತು ಕವಿ ಮಾತನಾಡುತ್ತಾರೆ. ಪುರುಷಶಾಹಿ ವ್ಯವಸ್ಥೆ ಹುಟ್ಟು ಹಾಕಿದ, ಕಟ್ಟು ಸಂಕೋಲೆಗಳನ್ನು ಕಿತ್ತು ಹಾಕಿ, ನಾವು ನಮ್ಮಿಷ್ಟದಂತೆ ಬದುಕಿ, ನಮ್ಮ ಮಕ್ಕಳಿಗೂ ಮುಕ್ತ ಸ್ವಾತಂತ್ರ್ಯ ನೀಡುತ್ತೇವೆ. ಎಂಬ ಮಹದಾಶೆಯನ್ನು ಇಲ್ಲಿ ಮೂಡಿಸಿದ್ದಾರೆ ಎಂದಿದ್ದಾರೆ. ಖಂಡಕಾವ್ಯದ ಪ್ರಾರಂಭದಲ್ಲಿ ದೇವದೂತನಿಗೆ ಬ್ರಹ್ಮ ಹೇಳಿದ ಮಾತು ವಿಸ್ಮಯದದ ಭಾಗದಲ್ಲಿ ಸಾಕಾರಗೊಂಡಿದೆ. ಅರಿವೆ ಗುರು ಆಗಿರುವುದರಿಂದ ತನ್ನ ದುಸ್ಥಿತಿಯನ್ನು ಅರಿತ ಹೆಣ್ಣು ಅದರಿಂದ ಹೊರಬರಲು ತಾನೆ ಸಿದ್ಧಿವಾಗುವ ಪ್ರಯತ್ನವನ್ನಿಲ್ಲಿ ಕಾಣಬಹುದಾಗಿದೆ.

About the Author

ಅಶೋಕ ನರೋಡೆ
(01 March 1965)

ಅಶೋಕ ನರೋಡೆ ಎಂದೇ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾದ ಅಶೋಕ ಮುರಿಗೆಪ್ಪ ನರೋಡೆ, ಬೆಳಗಾವಿಯ ಅಥಣಿಯಲ್ಲಿ 1965 ಮಾರ್ಚಿ 01 ರಲ್ಲಿ ಜನಿಸಿದರು. ಕನ್ನಡ ಪ್ರಾಧ್ಯಾಪಕರು, ಕವಿಗಳು, ಸಂಶೋಧಕರು. ಮಹಾಲಿಂಗಪುರದ ಕಲಾ ಹಾಗೂ ಡಿ.ಡಿ.ಎಸ್, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ‘ಏಕಲವ್ಯನ ಪಾತ್ರ : ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಕರ್ನಾಟಕ ವಿ.ವಿಯಿಂದ ಪಿಎಚ್.ಡಿ ಪಡೆದಿದ್ದಾರೆ. ‘ರನ್ನ ವಿಚಾರ ವೇದಿಕೆ, ಕಾವ್ಯ ಕಾರಂಜಿ, ಅಪೂರ್ವ ಪ್ರಕಾಶನಗಳಂತಹ ಸಂಸ್ಥೆಗಳ - ಸಂಘಟಕರು. ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅವರ ಹೊಸಗನ್ನಡ ಕಾವ್ಯ ಸಂಚಯ ಪಠ್ಯಗ್ರಂಥವೂ ಆಗಿದೆ.  ‘ಬೇಡಿಕೆ, ಆಸ್ಫೋಟ, ನದಿ ಮತ್ತು ನಾನು, ಮಧುರ ...

READ MORE

Related Books