ʼಕೋರಿಕೆʼ ಮೌಲಿಕ ವೈಚಾರಿಕ ಕೃತಿಯನ್ನು ಲೇಖಕ ಹೊ.ವೆ. ಶೇಷಾದ್ರಿ ಅವರು ರಚಿಸಿದ್ದಾರೆ. ಮಾನವ ಜೀವನದ ಸಮಸ್ಯೆಗಳಿಗೆ ಶಾಂತಚಿಂತನೆಯ ಪರಿಹಾರ. ಜನತೆಯ ಭಾವನೆ ಸರಿದಾರಿಯಲ್ಲಿ ಹರಿಯುವಂತೆ ಮಾಡಲು ಅದಕ್ಕೆ ವಿವೇಕಪೂರ್ಣ ಮಾರ್ಗದರ್ಶನ. ಸಮಾಜ ಜೀವನದ ಸಮಗ್ರ ದೃಷ್ಟಿಯನ್ನು ನೀಡಿ, ನಮ್ಮ ಒಳಗಣ್ಣು ತೆರೆಸುವ ಶಬ್ದಚಿತ್ರಗುಚ್ಛಗಳನ್ನು ಈ ಪುಸ್ತಕ ಒಳಗೊಂಡಿದೆ.
ಖ್ಯಾತ ಲೇಖಕ ಶೇಷಾದ್ರಿಯವರು (26-05-1926) ಹುಟ್ಟಿದ್ದು ಹೊಂಗಸಂದ್ರದಲ್ಲಿ. ತಂದೆ ವೆಂಕಟರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ (19476) ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವೀಧರರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರು. 1980ರಲ್ಲಿ ಕ್ಷೇತ್ರೀಯ (ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು) ಪ್ರಚಾರ ಕಾರ‍್ಯ ನಿರ್ವಹಣೆ, ಸಂಘದ ಪ್ರಧಾನ ಕಾರ‍್ಯದರ್ಶಿಯಾಗಿಯೂ ಆಗಿದ್ದರು.ಸಂಘದ ವೈಚಾರಿಕ ಹಾಗೂ ಸೈದ್ಧಾಂತಿಕ ಬರಹಗಳನ್ನು ಬರೆದರು. ವಿಕ್ರಮ, ಉತ್ಥಾನ-ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷ್‌ನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತ ಕಾಲಿಕೆಗಳಲ್ಲಿ ಲೇಖನ, ವಿಮರ್ಶಾತ್ಮಕ ವಿಶ್ಲೇಷಣೆಗಳನ್ನು ಬರೆದರು. ಕೃತಿಗಳು-ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ...
READ MORE