ಪ್ರೀತಿ ಭರತ್‌ರವರ ಎರಡನೆ ಸಂಕಲನ ಮೊದಲಿಗಿಂತ ಹೆಚ್ಚು ಪಕ್ವವಾಗಿದೆ. ನೈಜತೆ ಪ್ರೌಢತೆಯಿಂದ ಕೂಡಿದೆ. ಬದುಕಿನ ಕಹಿ-ಸಿಹಿ ಘಟನೆಗಳು- ಸಂಗತಿ-ಸತ್ಯಗಳು ಇಲ್ಲಿ ಕಥೆ ರೂಪದಲ್ಲಿ ಅರಳಿವೆ. ಚಿಕ್ಕದಾದ್ರೂ ಚೊಕ್ಕವಾಗಿದೆ. ಮಾನವೀಯ ಸಂಬಂಧಗಳ ಮಧುರ ಬೆಸುಗೆ ಇದೆ. ಪರಿಸರ ಪ್ರಜ್ಞೆ ಎದ್ದು ಕಾಣುತ್ತೆ. ಹಲವಾರು ಕಥೆಗಲ್ಲಿ ನೀತಿ ಸಂದೇಶವಿದೆ. ನಂಬಿಕೆ, ಕಥೆ ನಮ್ಮೆಲ್ಲರಿಗೂ ಪಾಠವಾಗಿದೆ. ಯಾರನ್ನು ನಂಬಬೇಡಿ- ಸಾಲ ಕೊಡಬೇಡಿ. ಮುಗ್ಧತೆ ಕಥೆಯಲ್ಲಿ ಅಮಾಯಕ ಯುವಕನ ಬಲಿ ಆಗುತ್ತೆ, ಕೋಮು ಗಲಭೆಯಲ್ಲಿ ಸಾಮಾಲಕ ಶಾಂತಿ ಹೇಳುತ್ತೆ. ಅದೇ ರೀತಿ ಫೇಸ್‌ಬುಕ್ ಫ್ರೆಂಡ್ಸ್ ಮತ್ತು ಮೋಸ. ಈ ಕಥೆಯಲ್ಲಿ ಸಾಮಾಜಿಕ ಜಾಲತಾಣದ ದುಷ್ಪರಿಣಾಮ ಮೂಡುತ್ತದೆ. ಮುಂಗೋಪದಲ್ಲಿ ಸಂಸಾರಿಕ ಚಿತ್ರಣದ ಹೂರಣವಿದೆ. ಹಾಗೆ ಶಾಂತಮ್ಮ, ಕುಸುಮ, ಕಥೆಗಳಲಲಿ ವ್ಯಕ್ತಿತ್ವದ ಚಿತ್ರಣವಿದೆ. ಛಲ, ಕಥೆಯಲ್ಲಿ - ಕ್ರಮ ಮತ್ತು ಚಲದಿಂದ ಮನುಷ್ಯನ ಸಹನೆ ಮುಟ್ಟಲು ತೋರಿಸುತ್ತೆ. ಮನೆಯ ದೀಪ ಅತಿ ಉತ್ತಮ ಸಂದೇಶ ಕಥೆ, ಸಮಾಜ ಸೇವೆಗೆ ಕಥೆ ಸಮಾಜದ ಕೊಳಕು -ಕೈಯಿಂದ ಅನಾವರಣ ತೋರಿಸುತ್ತೆ. ಸಾಲ-ಶೂಲ-ಮದುವೆ ಆಗಲಿ, ಯಾವುದೇ ಆಗಲಿ ಖರ್ಚಿಗೆ ಮಿತಿಯಿಲ್ಲ. ಇರಬೇಕೆಂದು ಸೂಚಿಸುತ್ತೆ. ಬೆದರಿಕೆ ಇಂದಿನ ಯುವಕರ ಮನಸ್ಥಿತಿ ತೋರುತ್ತೆ. ಒಟ್ಟಾರೆ ಇಲ್ಲಿನ ಅಷ್ಟು ಪುಟ್ಟ ಕಥೆಗಳು ಸಮುದ್ರದ ಮುತ್ತುಗಳಂತೆ ತನ್ನದೆ ವೈಶಿಷ್ಟ್ಯ ಹಾಗೂ ಗುಣ ಪಡೆದಿವೆ. ನಾನು ಇಲ್ಲಿ ಕೇವಲ ಕೆಲವರ ಹೆಸರನ್ನು ಸೂಚಿಸಿದ್ದೇನೆ. ಎಲ್ಲವೂ ಅತಿ ಸುಂದರವಾಗಿ ಅರಳಿದೆ. ಪ್ರೀತಿ ಭರತ್‌ರವರು ಸಾಮಾಜಿಕ ಕಳಕಳಿ, ಸಾಹಿತ್ಯ ಕೃಷಿ, ಕೌಟುಂಬದ ಪ್ರೀತಿ ಕಲಾ ಪ್ರೀತಿ, ವಿವಿಧ ಸಂಘದಲ್ಲಿ ಕ್ರಿಯಾಶೀಲತೆ ಅಲ್ಲದೆ ಮಕ್ಕಳಿಗಾಗಿ ಅನೇಕ ಕಥಾ ಸಂಕಲನ ಬರೆದಿರುವರು ಎಂದು ದ್ವಾರನಕುಂಟೆ ಪಾತಣ್ಣ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.