ಕವಿ ಮಧುರಕಾನನ ಗಣಪತಿ ಭಟ್ಟ ಅವರ ಕವನ ಸಂಕಲನ ಮಧುರ ವಾಹಿನಿ. ಈ ಸಂಕಲನಕ್ಕೆ ವಸಂತಕುಮಾರ ಪೆರ್ಲ ಅವರು ಮುನ್ನುಡಿ ಬರೆದಿದ್ದಾರೆ. ಯು.ಎಸ್. ರಾಮಕೃಷ್ಣ ಭಟ್ಟ ಉಂಡೆಮನೆ ಅವರು ಕೃತಿಯಲ್ಲಿ ಶುಭಹಾರೈಕೆ ಮಾತುಗಳನ್ನು ಬರೆದಿದ್ದಾರೆ. ಜೊತೆಗೆ ಪಿ.ಎನ್. ಮೂಡಿತ್ತಾಯ ಅವರು ಶುಭನುಡಿಗಳನ್ನು ಹಂಚಿಕೊಂಡಿದ್ದಾರೆ. ವಿ.ಬಿ.ಅರ್ತಿಕಜೆ ಅವರು ಕೃತಿಗೆ ನಲ್ನುಡಿಗಳನ್ನು ಬರೆದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಬಲಮುರಿ ಗಣಪ, ಶ್ರೀ ಗುರುಗಳಪ್ಪಣೆ, ಗೋ ನಮನ, ಜಲದೇವಿ ಸ್ತುತಿ, ವಾಹಿನಿ, ಐಸಿರಿ, ನಮ್ಮೂರು ಜಾತ್ರೆ, ಸೇರಿ 92 ಕವನಗಳು ಈ ಸಂಕಲನದಲ್ಲಿವೆ.
ಮಧುರಕಾನನ ಗಣಪತಿ ಭಟ್ಟ ಅವರು ದಕ್ಷಿಣ ಕನ್ನಡದ ಪುತ್ತೂರಿನ ದರ್ಬೆ ಮೂಲದವರು. ಭೂಗರ್ಭ ಶಾಸ್ತ್ರದ ಬಿ ಎಸ್ ಸಿ ಪದವೀಧರರಾಗಿರುವ ಇವರು ಅಂತರ್ಜಲ ಸಂಶೋಧಕ ನಾಗಿ 35 ವರ್ಷಗಳ ಅನುಭವ ಹೊಂದಿದ್ದಾರೆ. ಕಾಲೇಜು ವಿದ್ಯಾರ್ಥಿಹಂತದಲ್ಲೇ ವಾಹಿನಿ ಕಲಾಸಂಘ ಸ್ಥಾಪನೆ ಮಾಡಿ ,2010ರಿಂದ ರಾಜ್ಯಮಟ್ಟ್ಟದ ಸಂಸ್ಥೆಯಾಗಿ ಕಟ್ಟಿದವರು. ಹಲವಾರು ಗಾಯನ ತರಭೇತಿ ಶಿಬಿರಗಳು, ಭಾವಗಾಯನ ಭಾವನರ್ತನ ಗೋಷ್ಠಿಗಳ ಆಯೋಜನೆ, ಕವಿಗೋಷ್ಠಿ ಕಥಾಗೋಷ್ಠಿ, ವಿಮರ್ಶಾಗೋಷ್ಠಿಗಳ ಆಯೋಜನೆಚಮಾಡಿದ್ದಾರೆ. ಕೃತಿಗಳು::ಮಧುರವಾಹಿನಿ (ಕವನ ಸಂಕಲನ) ಗಾನಮಧುರಂ (ಧ್ವನಿಮುದ್ರಣ 2017) ಸಂಪಾದಿತ ಕೃತಿ - ವಾಹಿನಿ(1982) ಸವಿಜೇನು(2019) ...
READ MORE