ಮೊದಲ ಹೆಜ್ಜೆ ಹೊಂಗನಸಿನೆಡೆಗೆ

Author : ಅನ್ನಪೂರ್ಣ ಯನ್.ಕೆ.

Pages 52

₹ 50.00




Year of Publication: 2022
Published by: ವಾತ್ಸಲ್ಯ ಪ್ರಕಾಶನ
Address: ಧಾತ್ರಿ, ಹಂದೇಳು ಪುತ್ತಿಗೆ, ಸಂಪಿಗೆ ಪೋಸ್ಟ್‌, ಮೂಡಬಿದಿರೆ- 574227
Phone: 9901327983

Synopsys

'ಮೊದಲ ಹೆಜ್ಜೆ ಹೊಂಗನಸಿನೆಡೆಗೆ' ಕವನ ಸಂಕಲನವನ್ನು ಅನ್ನಪೂರ್ಣ ಯನ್.ಕೆ ಅವರು ರಚಿಸಿದ್ದಾರೆ. "ಇಲ್ಲಿನ ಕವಿತೆಗಳಲ್ಲಿ ಸೃಜನಾತ್ಮಕತೆ ಸಕಾರಾತ್ಮಕವಾಗಿ ಹೊರಹೊಮ್ಮುವ ಬೀಜ ಬಿತ್ತನೆಯಾಗಿದೆ. ಇಂದು ಗಿಡವಾಗಿ ಫಲ ಪುಷ್ಪ ಕೊಡುವ ಮರವಾಗಿದೆ. ಇದು ಹೆಮ್ಮರವಾಗಬೇಕು. ಇದಕ್ಕೆ ಸಾಕ್ಷಿಯಾಗಿ ಇವರು ರಚಿಸಿರುವ ಅಪ್ಪ ನನ್ನಪ್ಪ ಎಂಬ ಕವಿತೆ ಅರ್ಥಗರ್ಭಿತವಾಗಿದೆ. ಇಲ್ಲಿ ಅಪ್ಪನಿಗೆ ಸಾರಥಿ ಎಂಬ ಪದಪ್ರಯೋಗ ಮಾಡಿರುತ್ತಾರೆ. ಸಾರಥಿಯನ್ನು ಮರೆಯುವ ಈ ಕಾಲಘಟ್ಟದಲ್ಲಿ ಈ ಕವಿತೆ ಉಪಯುಕ್ತವಾಗಿದೆ. ಸತ್ಯವಾಗಿ ಉಳಿಯುವ ಬಾಂಧವ್ಯವೇ ತಾಯಿ-ಕಂದನ ಬೆಸುಗೆ ಎಂಬುದಾಗಿ ಇನ್ನೊಂದು ಕವಿತೆಯಲ್ಲಿ ಉಲ್ಲೇಖಿಸಲಾಗಿದೆ. ಪುಸ್ತಕ ಎಂಬ ಕವಿತೆಯು ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಲಹೆಗಾರನಾಗಿ ನಿಮಿತ್ತವಾಗುತ್ತದೆ" ಎಂದು ಈ ಕೃತಿಯ ಹಿನ್ನುಡಿಯಲ್ಲಿ ಸಂಕಲನದ ಕುರಿತಾಗಿ ವಿವರಿಸಲಾಗಿದೆ.

About the Author

ಅನ್ನಪೂರ್ಣ ಯನ್.ಕೆ.
(09 January 2002)

ಕವಿ ಅನ್ನಪೂರ್ಣ ಯನ್.ಕೆ. ಅವರು ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪಡೆ ವಾಣೀನಗರದ ಕುತ್ತಾಜೆಯವರು. ನಾಗರಾಜ ಕಡಂಬಳಿತ್ತಾಯ ವಸಂತ ಕುಮಾರಿ ದಂಪತಿಗಳ ಮಗಳಾಗಿ 09-01-2002ರಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆ, ವಾಣೀನಗರದಲ್ಲಿ ಪೂರೈಸಿ, ಪದವಿಪೂರ್ವ ಶಿಕ್ಷಣವನ್ನು ಅಡ್ಯನಡ್ಕದ ಜನತಾ ಪದವಿಪೂರ್ವ ಕಾಲೇಜು ಮುಗಿಸಿ ಪ್ರಸ್ತುತ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ತೃತೀಯ ಬಿಎಸ್ಸಿ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಇವರು ಹಲವಾರು ಕವನ, ಕಥೆ, ಲೇಖನಗಳನ್ನು ಬರೆದಿದ್ದಾರೆ. ಇವರ ಬರಹಗಳು ಕಾರವಲ್ ಅಮರ ಸುದ್ದಿ, ನೇಸರ, ಜಾಗೃತಿ ಹಾಗೂ ವಿಕಾಸ ...

READ MORE

Related Books