ಬೇರುಗಳು ಅಮ್ಮನ ಹಾಗೆ

Author : ಶ್ರೀಕೃಷ್ಣಯ್ಯ ಅನಂತಪುರ

Pages 112

₹ 135.00




Year of Publication: 2022
Published by: ನವಕರ್ನಾಟಕ ಪ್ರಕಾಶನ
Address: ಬೆಂಗಳೂರು
Phone: 08022161900

Synopsys

ಹಿರಿಯ ಕವಿ ಶ್ರೀಕೃಷ್ಣಯ್ಯ ಅನಂತಪುರ ಅವರ ಕವಿತೆಗಳ ಸಂಕಲನ ‘ಬೇರುಗಳು ಅಮ್ಮನ ಹಾಗೆ’. ಭಾವನೆಗಳನ್ನು ವಿಶಿಷ್ಟ ಚಿತ್ರಗಳಲ್ಲಿ ಕಟ್ಟುವ ಈ ಕವಿತೆಗಳು, ಮನಮುಟ್ಟುವ ಎಳೆಗಳನ್ನು ನೇವರಿಸುತ್ತ ಆರ್ದ್ರಗೊಂಡಿವೆ. ಇಲ್ಲಿನ ಪ್ರತಿಮೆಗಳಲ್ಲಿ ಹೊಸತನವೊಂದು ಕುತೂಹಲಕ್ಕೆ ಕಾರಣವಾಗುತ್ತದೆ. ಲೇಖಕ ಎಸ್.‌ ದಿವಾಕರ್‌ ಅವರು ಪುಸ್ತಕದ ಮುನ್ನುಡಿಯಲ್ಲಿ, “ಬೇರುಗಳು ಅಮ್ಮನ ಹಾಗೆ ಪುಸ್ತಕವು 58 ಕವನಗಳಿರುವ ಸಂಕಲನವಾಗಿದೆ. ಈ ಕವನಗಳು ಮೇಲ್ನೋಟಕ್ಕೆ ಸಂಕೀರ್ಣತೆಯನ್ನು ಬಿಟ್ಟುಕೊಟ್ಟ, ನೇರ ಅಭಿವ್ಯಕ್ತಿಯ ಸರಳ ಕವನಗಳಂತೆ ತೋರಬಹುದು. ಆದರೆ, ಸೂಕ್ಷ್ಮ ಓದುಗರು ಕೆಲವೆಡೆ ಸರಳತೆಯಲ್ಲೇ ಸಂಕೀರ್ಣತೆಯನ್ನು ಸಾಧಿಸುವ ವಿಧಾನವೊಂದು ಅಂತರ್ಗತವಾಗಿರುವುದನ್ನು ಗಮನಿಸದಿರಲಾರರು. ಶ್ರೀಕೃಷ್ಣಯ್ಯನವರ ಕೆಲವು ಕವನಗಳಲ್ಲಿ ಪ್ರತಿಮೆಗಳ ಮಹಾಪೂರವೇ ಇದೆ. ಇನ್ನು ಕೆಲವು ಕವನಗಳು ಎರಡು ಮೂರು ವಸ್ತುವಿಶೇಷಗಳ ವೈರುಧ್ಯವನ್ನೋ ವೈದೃಶ್ಯವನ್ನೋ ಪರಿಶೋಧಿಸುವಷ್ಟರಿಂದಲೇ ತೃಪ್ತವಾಗುತ್ತವೆ. ಮತ್ತೆ ಕೆಲವು ಕವನಗಳಲ್ಲಿ ಕಥನಾಂಶವೇ ಪ್ರತಿಮೆಗಳ ಅರ್ಥವಾಹಕವಾಗುತ್ತದೆ. ಮತ್ತೆ ಇಡಿಯಾಗಿ ಒಂದು ದೃಷ್ಟಾಂತವಾಗುವ, ನೀತಿಯೊಂದರಿಂದ ಕೊನೆಯಾಗುವ ಕವನಗಳೂ ಇವೆ” ಎಂದು ಹೇಳಿದ್ದಾರೆ. 

About the Author

ಶ್ರೀಕೃಷ್ಣಯ್ಯ ಅನಂತಪುರ

ಕವಿತೆಯ ಬಗ್ಗೆ ವಿಭಿನ್ನವಾಗಿ ಯೋಚಿಸುವ, ಅಭಿವ್ಯಕ್ತಿಗೂ ತಮ್ಮದೇ ಮಾರ್ಗವನ್ನು ಕಂಡುಕೊಂಡಿರುವ ಹಿರಿಯ ಕವಿ ಶ್ರೀಕೃಷ್ಣಯ್ಯ ಅನಂತಪುರ. ಈಗಾಗಲೇ ಸಂಕಲನ ರೂಪದಲ್ಲಿಯೂ ಅವರು ತಮ್ಮ ಕವಿತೆಗಳನ್ನು ಪ್ರಕಟಿಸಿದ್ದಾರೆ. ಕೃತಿಗಳು: ಬೇರುಗಳು ಅಮ್ಮನ ಹಾಗೆ, ಎದೆ ಬಿಗಿದ ಕ್ಷಣಗಳು ಅವರ ಕವನಸಂಕಲನಗಳಾಗಿವೆ. ...

READ MORE

Related Books