‘ಗಾಳಿಗೆ ತೊಟ್ಟಿಲ ಕಟ್ಟಿ’ ಕವಿ ದೇವು ಮಾಕೊಂಡ ಅವರ ಕವನ ಸಂಕಲನ. ಕೃತಿಗೆ ಪ್ರೊ.ಎಚ್.ಎಸ್. ಶಿವಪ್ರಕಾಶ್ ಅವರು ಬೆನ್ನುಡಿ ಬರೆದಿದ್ದು, ದೇವು ಮಾಕೊಂಡ ಅವರ ಕವಿತೆಗಳ ತಿರುಳು ನಮ್ಮನ್ನು ಸುತ್ತುವರಿದು ದಿನೇ ದಿನೆ ಇನ್ನೂ ಎಲ್ಲ ಎಲ್ಲೆ ಮೀರುತ್ತಿರುವ ಇಡೀ ಪೃಥ್ವಿಯ ಬಗೆಗಿನ ಧಾವಂತ ಮತ್ತು ಲೋಕಕಾರುಣ್ಯ ಬಹುಮಟ್ಟಿಗಿನ ಇಂದಿನ ಕನ್ನಡ ಕಾವ್ಯಕ್ಕೆ ಅಂಟಿಕೊಂಡಿರುವ ಲೈಂಗಿಕ ಪರಾಯಣತೆಯಿಂದ ದೂರವುಳಿದು, ಬಣಗು ಹೇಳಿಕೆಗಳ, ಸಿಡಿನುಡಿಗಳಿಂದ ಬಹು ಮುಂದೆ ಹೋಗಿ, ಈ ಕವಿತೆಗಳು ತನ್ನ ಮತ್ತು ಇದಿರಿನ ಬಗೆಗಿನ ಮೈತ್ರಿಭಾವನೆಯ ಧ್ಯಾನದಂತೆ ನಮ್ಮನ್ನು ಸೆಳೆಯುತ್ತವೆ. ಚಿಗುರಿನಲ್ಲೇ ಇಂತಿಪ್ಪ ಕಾವ್ಯಗುಣಗಳಿಂದ ಸಮೃದ್ಧವಾಗಿರುವ ಈ ಕವಿತೆಗಳು ತಮ್ಮ ಬಾಳಿಕೆ-ತಾಳಿಕೆ ಗುಣಗಳಿಂದ ಕನ್ನಡ ಕಾವ್ಯಲೋಕದಲ್ಲಿ ಹೊಸ ಆಶಾಕಿರಣಗಳಾಗಿವೆ ಎಂಬ ನಂಬುಗೆ ನನಗಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಯುವ ಬರಹಗಾರ ದೇವು ಮಾಕೊಂಡ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದವರು. ಸಿಂದಗಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ. ‘ಬಿಕರಿಗಿಟ್ಟ ಕನಸು, ಹೆಗ್ಗೇರಿಸಿದ್ದ ಚರಿತೆ’ ಅವರ ಪ್ರಕಟಿತ ಕವನ ಸಂಕಲನಗಳು. ಹಲವಾರು ಲೇಖನಗಳು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಗುರುರತ್ನ, ವಿದ್ಯಾಸಿರಿ ವಿಷಾರದ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿ ಬಹುಮಾನ, ಆಕಾಶವಾಣಿ ಭದ್ರಾವತಿಯಿಂದ ಪ್ರತಿಭಾ ಪ್ರಶಂಸಾ ಪ್ರಶಸ್ತಿಗಳು ಲಭಿಸಿವೆ. ಅಲ್ಲದೇ ವಿಜಯಪುರ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮೀರವಾಡಿ ದತ್ತಿ ಪ್ರಶಸ್ತಿಯೂ ದೊರೆತಿದೆ. ...
READ MORE