‘ಭಾವಧಾರೆ’ ಕೃತಿಯು ಮಹಾಂತೇಶ ವೀ ಕರೀಮಟ್ಟಿ ಅವರ ಕವನಸಂಕಲನವಾಗಿದೆ. ಕೃತಿಗೆ ನ್ನುಡಿ ಬರೆದಿರುವ ಎನ್. ಎಂ. ಬಿರಾದರ ಅವರು, ‘ಮಹಾಂತೇಶ ವೀ ಕರೀಕಟ್ಟಿಯವರ ಕವನಸಂಕಲನ ಪ್ರಥಮ ಕೃತಿಯಾದರೂ ಹಲವು ವಿಚಾರಗಳಿಂದ ಗಮನ ಸೆಳೆಯುವಂತಹುದು. ಈ ಕವನ ಸಂಕಲನದಲ್ಲಿ ಪ್ರೀತಿ-ಪ್ರೇಮ, ಪರಿಸರ, ಪ್ರಚಲಿತ ತಲ್ಲಣಗಳು, ನಾಡು-ನುಡಿ, ಅಪ್ಪನ ಪಾತ್ರ, ಶಿಕ್ಷಣದ ಮಹತ್ವ, ಪ್ರಕೃತಿಯ ಮುನಿಸು, ಹಬ್ಬಗಳು ಮುಂತಾದ ವಿಷಯ ವಸ್ತುಗಳನ್ನು ಇಟ್ಟುಕೊಂಡು ಅರ್ಥಪೂರ್ಣ ಕವಿತೆಗಳನ್ನು ರಚಿಸಿದ್ದಾರೆ. ಆ ಕವಿತೆಗಳಲ್ಲಿನ ಜೀವನ ದೃಷ್ಠಿ, ಮಾನವ ಪ್ರೇಮದ ಒಳಗುರಿಗಳು, ಭವಿಷ್ಯತ್ತಿನ ಬಗೆಗಿನ ಹಂಬಲ, ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವ ಕ್ರಮ ಇವೆಲ್ಲವೂ ಮಹಾಂತೇಶ ಅವರನ್ನು ಸಮರ್ಥ ಕವಿಯಾಗಿಸಬಲ್ಲವು ಎಂಬುವುದಕ್ಕೆ ಸಾಕ್ಷಿಯಾಗಿವೆ’ ಎಂದಿದ್ದಾರೆ.
ಕೃತಿಯ ಕುರಿತು ಲೇಖಕ ಬಸವರಾಜ ಡೋಣೂರ ಅವರು, ‘ಈ ಸಂಕಲನದಲ್ಲಿ ಅನೇಕ ಪ್ರೇಮಕವನಗಳಿವೆ. ಹೆಣ್ಣು ಮಡದಿಯಾಗಿ, ಪೈಯಸಿಯಾಗಿ ಕಾಣಿಸಿಕೊಳ್ಳುತ್ತಾಳೆ. ಅವಳು ಕೈಗೆ ಸಿಕ್ಕರೂ ಸಿಗದಿದ್ದರೂ ಕವಿ ಅವಳಿಗೆ ಶಾಪ ಹಾಕುವುದಿಲ್ಲ. ಆದರೆ ಎಚ್ಚರದ ಸ್ಥಿತಿಯಲ್ಲಿ ಕವಿ ಅವಳನ್ನು ಎದುರುಗೊಳ್ಳುವುದಿಲ್ಲ. ಅನೇಕ ಕವಿತೆಗಳಲ್ಲಿ ಅವಳು ಮಲಗಿಯೇ ಇದ್ದಾಳೆ. ಅವಳು ಎದ್ದೇಳಲಿ ಎಂದು ಕವಿ ಕಾದಿದ್ದಾನೆ. ಎಚ್ಚರವಾಗದ ಅವಳೆದರು ಕವಿ ತನ್ನ ಪ್ರೇಮ, ವೇದನೆ, ಹತಾಶೆ, ನಿರಾಸೆ ಅಭಿವ್ಯಕ್ತಿಸುತ್ತಾನೆ. ಆದರೆ ಕವಿಯ ಬೇಗುದಿ ಆಲಿಸಿ ಅದನ್ನು ಶಮನಗೊಳಿಸಲು ಅವಳು ಎದ್ದೇ ಇಲ್ಲ. ಇದೊಂದು ವಿಚಿತ್ರ ಸಂದರ್ಭ. ಈ ಸಂದರ್ಭ ಕಾವ್ಯದಲ್ಲಿ ಅನೇಕ ಹೊಸ ಅರ್ಥದ ಸಾಧ್ಯತೆಗಳನ್ನು ತೆರೆದು ತೋರಿಸುತ್ತದೆ. ‘ಮರೆಯದಿರು ನೀ ನನ್ನನ್ನು’ ಈ ಸಂಕಲನದ ಮತ್ತೊಂದು ಯಶಸ್ವಿ ಕವನ. ಹತ್ತಿರ ಬಂದು ಪ್ರೀತಿಯ ರುಚಿ ಉಣಿಸಿ ದೂರ ಹೋದ ಪ್ರಿಯತಮೆಯ ನೆನಕೆ ಈ ಕಾವ್ಯದಲ್ಲಿ ಮೂರ್ತವಾಗಿ ವ್ಯಕ್ತಗೊಂಡಿದೆ. ತಾನುಂಡ ಅನುಭವವನ್ನು ಕವಿಯಾದವನು ತನ್ನ ಕಾವ್ಯದಲ್ಲಿ ಹಸಿಹಸಿಯಾಗಿ ಕಟ್ಟಿಕೊಡಬಾರದು, ಹಳಸಲು ಭಾಷೆಯಲ್ಲಿ ವ್ಯಕ್ತಪಡಿಸಲೂ ಬಾರದು, ಅನುಭವ ಕಾಲದ ಹೊಡೆತಕ್ಕೆ ಸಿಲುಕಿ ತನ್ನ ತಾಜಾತನ ಕಳೆದುಕೊಳ್ಳಬಾರದು. ಕವನದ ಭಾಷೆ, ಅನುಭವದ ಬಣ್ಣ ಮತ್ತು ಧ್ವನಿಯನ್ನು ಹಿಡಿದಿಡಬೇಕು, ರೂಪಕಗಳು ಕಾವ್ಯದ ಧ್ವನಿ ಶಕ್ತಿಯನ್ನು ಧ್ವನಿ ಪೂರ್ಣವಾಗಿ ಅಭಿವ್ಯಕ್ತಿಸಬೇಕು. ಹೀಗಾದಾಗ ಮಾತ್ರ ಕಾವ್ಯ ಯಶಸ್ವಿಯಾಗುತ್ತದೆ. ಈ ದೃಷ್ಟಿಯಿಂದ ಈ ಸಂಗ್ರಹದ ಕೆಲವು ಕವನಗಳು ಯಶಸ್ವಿ ಕವನಗಳಾಗಿವೆ’ ಎನ್ನುತ್ತಾರೆ.
ಮಹಾಂತೇಶ ವೀ ಕರೀಕಟ್ಟಿ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಊರಿನವರು. (ಜನನ: 1989 ರಲ್ಲಿ), ಮೂಲತಃ ಕೃಷಿ ಕುಟುಂಬದವರು. ಮಾಧ್ಯಮಿಕ ಶಿಕ್ಷಣವನ್ನು ವಿಜಯಪುರದ ಸೈನಿಕ ಶಾಲೆಯಲ್ಲಿ, ಬೆಂಗಳೂರಿನ ಅಲೈನ್ಸ್ ಬಿಜಿನೆಸ್ ಅಕಾಡೆಮಿಯಲ್ಲಿ ಎಂ.ಬಿ.ಎ ಪದವಿ ಪಡೆದಿರುತ್ತಾರೆ. ಸದ್ಯ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದಾರೆ. ‘ಮನದ ಮಾತು’ ಬ್ಲಾಗ್ ಸೃಷ್ಟಿಸಿ ಬರೆಯುತ್ತಿದ್ದಾರೆ. ಕೃತಿಗಳು : ಭಾವಧಾರೆ ...
READ MORE