ಕವಿ ಜಿ.ಕೆ. ಕುಲಕರ್ಣಿ ಅವರು ರಚಿಸಿದ ಕವನಗಳ ಸಂಗ್ರಹ ಕೃತಿ -ಬಾ ವಸಂತ ಬಾ. ಋತುಗಳಲ್ಲಿ ಶ್ರೇಷ್ಠ ಹಾಗೂ ಮನುಕುಲಕ್ಕೆ ಹಿತವೆನಿಸಬಹುದಾದ ಮತ್ತು ಎಲ್ಲ ಕವಿಗಳಿಗೆ ಪ್ರಿಯವಾದ ವಸಂತ ಋತುವನ್ನು ಸ್ವಾಗತಿಸದವರು ಜಗತ್ತಿನಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ವಸಂತ ಋತುವಿನಲ್ಲಿ ಇಡೀ ಪ್ರಕೃತಿಯು ಚೆಲುವೆಲ್ಲ ಹೊತ್ತು ಸಂಭ್ರಮಿಸುತ್ತಿರುತ್ತದೆ. ಜೀವ ಜಂತುಗಳಿಗೆ ಎಲ್ಲೆಡೆಯೂ ಅನ್ನದ ಕಣಜವಿರುತ್ತದೆ. ಕೆರೆ-ಹೊಳೆ-ನದಿಗಳು ತುಂಬಿ ತುಳುಕುತ್ತಿರುತ್ತವೆ. ಇಂತಹ ಹವಾಮಾನವನ್ನು ಕಂಡು ಕವಿಗಳು ಪ್ರಶಂಸಿಸುವುದು ಸಹಜವೇ ಆಗಿದೆ. ಈ ನಿಟ್ಟಿನಲ್ಲಿ, ಇಲ್ಲಿಯ ಕವಿತೆಗಳಿವೆ.
ಹಿರಿಯ ಲೇಖಕ ಜಿ.ಕೆ. ಕುಲಕರ್ಣಿ ಅವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದವರು. ತುಮಕೂರು ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾಗಿ ನಿವೃತ್ತರು. ಸದ್ಯ ತುಮಕೂರಿನಲ್ಲಿ ವಾಸವಿದ್ದಾರೆ. ಎಚ್ ಐವಿ, ಏಡ್ಸ್ ಸೇರಿದಂತೆ ಸಾಂಕ್ರಾಮಿಕ ರೋಗಗಳ ಕುರಿತು ಜನಜಾಗೃತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಧಾರವಾಡ, ಹೊಸಪೇಟೆ ಸೇರಿದಂತೆ ರಾಜ್ಯದ ವಿವಿಧ ಆಕಾಶವಾಣಿ ಕೇಂದ್ರಗಳಿಂದ ಇವರ ಕವನ-ಬರಹಗಳು ಪ್ರಸಾರಗೊಂಡಿವೆ. ಕತ್ತಲೆ ಕರಗಿತು ಎಂಬ ರೇಡಿಯೋ ನಾಟಕವು ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಪ್ರಸಾರಗೊಂಡಿದೆ. ನಗೆ ಮಲ್ಲಿಗೆ, ಹಾಸ್ಯಸಿಂಚನ ಹಾಗೂ ಹಾಸ್ಯಲೋಕ ಹೀಗೆ ವಿವಿಧ ವೇದಿಕೆಗಳಲ್ಲಿ ಹಾಸ್ಯ ಕಾರ್ಯಕ್ರಮ ನೀಡಿದ್ದಾರೆ. ಅಧ್ಯಾತ್ಮಿಕ ಉಪನ್ಯಾಸ, ಜೀವನ ...
READ MORE