ಕನ್ನಡ ನವ್ಯಕಾವ್ಯ ಪರಂಪರೆಗೆ ನಾಂದಿ ಹಾಡಿದ ಕವಿ ಗೋಪಾಲಕೃಷ್ಣ ಅಡಿಗರು. ಲೇಖಕ-ಪತ್ರಕರ್ತ ಲಂಕೇಶ್ ಅವರು ಅಡಿಗರನ್ನು”ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಬಣ್ಣಿಸಿದ್ದರು. ನವೋದಯ ಕಾವ್ಯ ಮಾರ್ಗಕ್ಕೆ ಭಿನ್ನವಾದ ನೆಲೆಯಲ್ಲಿ ಕಾವ್ಯ ರಚನೆ ಆರಂಭಿಸಿ ಮಾರ್ಗದರ್ಶಿ ಆದವರು ಅಡಿಗರು. ಅಡಿಗರ ಕವಿತೆಗಳು ಸಂವೇದನೆ ಹಾಗೂ ಅದನ್ನು ಮಂಡಿಸುವ ವಿಭಿನ್ನ ವಿಧಾನದಿಂದ ಗಮನ ಸೆಳೆಯುತ್ತವೆ. ನವೋದಯ ಕಾಲಘಟ್ಟದಲ್ಲಿ ಕವಿತೆ ಬರೆಯುವುದನ್ನು ಆರಂಭಿಸಿದ ಅಡಿಗರು ನಂತರದ ಘಟ್ಟಲ್ಲಿ ನವ್ಯಪ್ರಜ್ಞೆಯನ್ನು ತಮ್ಮ ಕವಿತೆಗಳಲ್ಲಿ ತಂದವರು. ಅಡಿಗರ ಆಯ್ದ ಮತ್ತು ಮಹತ್ವದ ಕವಿತೆಗಳನ್ನು ಈ ಸಂಕಲನದಲ್ಲಿ ಸೇರಿಸಲಾಗಿದೆ.
ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು 1918ರ ಫೆಬ್ರುವರಿ 18ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ. ಬೈಂದೂರಿನಲ್ಲಿ ಶಾಲಾ ಶಿಕ್ಷಣ, ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಆಯಿತು. ಬಿ.ಎ. ಆನರ್ಸ್ ಪದವಿ (1942) ಗಳಿಸಿದ ನಂತರ ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ್ದರು. ಆಮೇಲೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ (1947) ಗಳಿಸಿದರು. ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕ (1948-52), ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ (1952-54) ...
READ MORE