‘ಅಕ್ಕ ಸೀತಾ ನಿನ್ನಂತೆ ನಾನು ಶಂಕಿತ’ ಕವಿ, ಲೇಖಕ ಬಿ. ಪೀರ್ ಬಾಷ ಅವರ ಕವನ ಸಂಕಲನ. ‘ನನ್ನನ್ನು ದೇಶದ್ರೋಹಿ ಎಂದು ಕರೆದರೆ ನಾನು ವಿಷಾದಿಸುವುದಿಲ್ಲ. ಏಕೆಂದರೆ ನಮ್ಮನ್ನು ದೇಶದ್ರೋಹಿಗಳನ್ನಾಗಿ ಮಾಡಿದ ಹೊಣೆ ಈ ನಾಡಿನದು. ನೀವು ಹೇಳಿದಂತೆ ನಾನೇನಾದರೂ ದೇಶಸೇವೆಯ ಕೆಲಸ ಮಾಡಿದ್ದರೆ ಅದು ದೇಶಭಕ್ತಿಯ ಭಾವನೆಯಿಂದ ಮಾಡಿದ್ದಲ್ಲ. ನನ್ನ ಶುದ್ಧಾಂತಃಕರಣದಿಂದ ಪ್ರೇರಿತನಾಗಿ ಮಾಡಿದ್ದು’. ಎಂಬ ಅಂಬೇಡ್ಕರ್ ಮಾತನ್ನು ನೆನಪಿಸುವ ಕವಿ ಪೀರ್ ಬಾಷ, ಈ ಹೊತ್ತು ಇವು ತಮ್ಮ ಮಾತುಗಳೂ ಆಗಿವೆ ಎನ್ನುತ್ತಾರೆ.
ಯಾವ ಸಂಕಟದಿಂದ ಅಂಬೇಡ್ಕರ್ ಈ ಮಾತುಗಳನ್ನು ನುಡಿದರೋ ಅಂತಹುದೇ ಸಂಕಟದ ಸಮೇತ ಈ ಕೊನೆಯ ವಾಕ್ಯಗಳನ್ನು ನಾನು ನುಂಗಿಕೊಳ್ಳುತ್ತೇನೆ. ಈ ಬಗೆಯ ಮಾತು-ಸಂಕಟಗಳನ್ನು ಏಕಕಾಲಕ್ಕೆ ನುಂಗಿದ ಸ್ಥಿತಿಯಿಂದ ನನ್ನ ಈ ಕವಿತೆಗಳು ರಚನೆಗಳು ಹೊರಹೊಮ್ಮಿವೆ ಎನ್ನುತ್ತಾರೆ ಕವಿ ಪೀರ್ ಬಾಷ.
‘ಗಡಿಗಳಿಲ್ಲದ ಜಗತ್ತಿನ ಕನಸುಗಾರರ ಸಾಲಿನಲ್ಲಿ ನಾನು ಕೊನೆಯವನೇನಲ್ಲ ಎಂಬ ವಿಶ್ವಾಸವೇ ನನಗೆ ಚರಿತ್ರೆ, ವರ್ತಮಾನಗಳ ಮೂಲಕ ಅಸಂಖ್ಯ ಜೊತೆಗಾರರನ್ನು ಕರುಣಿಸಿ ನನ್ನ ಪಯಣವನ್ನು ಜಾರಿಯಲ್ಲಿಟ್ಟಿದೆ’ ಎನ್ನುವ ಅವರು, ತಮ್ಮ ಕವಿತೆಗಳಿಗೆ ನೋವನ್ನು ತೀಡಿ ಜೀವಂತಿಕೆ ನೀಡಿದ್ದಾರೆ. ಸಮತೆಯನ್ನು ಕನಸುವ ಅವರ ಕವಿತೆಗಳು ಸಮಾನತೆಯ ಕನಸುಗಳನ್ನು ಬಿತ್ತುತ್ತವೆ.
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಬಿ. ಪೀರ್ ಬಾಷ ಅವರು ಹುಟ್ಟಿದ್ದು 1972 ರ ಮೇ 1 ರಂದು. ತಂದೆ- ಬಿ.ಬಾಷಾ ಸಾಹೇಬ್ ಹಾಗೂ ತಾಯಿ- ಹಯಾತ್ ಬಿ. ಸದ್ಯ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಾರಟಗಿಯಲ್ಲಿ ವಾಸ. ಸಾಮಾಜಿಕ ಚಟುವಟಿಕೆಯೊಂದಿಗೆ ಬರವಣಿಗೆ ರೂಢಿಸಿಕೊಂಡಿರುವ ಪೀರ್ ಬಾಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಸದಸ್ಯರು. ಕವನ ಸಂಕಲನಗಳು : ಜೀವ ಬಂತು ಹಾದಿಗೆ, ಜಾಲಿ ಹೂಗಳ ನಡುವೆ, ಅಕ್ಕಸೀತಾ ನಿನ್ನಂತೆ ನಾನೂ, ದೇವರು ಮನುಷ್ಯರಾದ ದಿನ, ಸಮಾಜವಾದಿ ಹೋರಾಟಗಾರರ ಸಂದರ್ಶನ ಮಾಡಿದ ಕೃತಿಗಳನ್ನು ಹಂಪಿಯ ಕನ್ನಡ ವಿ.ವಿ.ಪ್ರಕಟಿಸಿದೆ. ಸಮಾಜವಾದಿ ನೀಲಗಂಗಯ್ಯ ಪೂಜಾರ್ ಕುರಿತು ವ್ಯಕ್ತಿ ಚಿತ್ರಣ, ಸಂಪಾದಿತ ಕೃತಿ: ಶಿಲವೇರಿ ಶಿವಪ್ಪ ಸಂ (ತತ್ವಪದಗಳು), ...
READ MORE