ನಾರಿಪದ್ಯ

Author : ಸಾವಿತ್ರಿ ಮುಜುಮದಾರ

Pages 80

₹ 100.00




Year of Publication: 2021
Published by: ಭವಾನಿ ಪ್ರಕಾಶನ
Address: ಅತ್ತಿಹಳ್ಳಿ, ಶಂಕ ಅಂಚೆ, ಹಾಸನ ತಾಲ್ಲೂಕು, ಹಾಸನ ಜಿಲ್ಲೆ.
Phone: 9964180600

Synopsys

`ನಾರಿಪದ್ಯ’ ಸಾವಿತ್ರಿ ಮುಜುಮದಾರ ಅವರ ಕವನ ಸಂಕಲನವಾಗಿದೆ. ಇದಕ್ಕೆ ಬರಗೂರು ರಾಮಚಂದ್ರಪ್ಪ ಅವರ ಬೆನ್ನುಡಿ ಬರಹವಿದೆ; 'ನಾರಿಪದ್ಯ' ಸಂಕಲನವು ಸ್ತ್ರೀ ಪುರುಷ ಸಮಾನತೆಯ ಸಂವೇದನೆಯನ್ನು ಒಳಗೊಂಡ ಪ್ರತಿಕ್ರಿಯಾತ್ಮಕ ಪ್ರತಿಮಾ ಕೃತಿಯಾಗಿದೆ. ಕಾವ್ಯದಲ್ಲಿ ಸ್ತ್ರೀ ಸಂವೇದನೆಗೆ ಸಿಗಬೇಕಾದ ಸ್ಥಾನ ಕುರಿತು ತೀವ್ರವಾಗಿ ತುಡಿಯುತ್ತದೆ. ಇವರ ಪ್ರಧಾನ ದೃಷ್ಟಿ ಇರುವುದು ಬೆಳಕು ಕಾಣುವ, ಬೆಳಕು ಕಾಣಿಸುವ, ಬೆಳಕಾಗುವ ಹಂಬಲದಲ್ಲಿ ಎಂಬ ಅಂಶ ಗಮನೀಯವಾದುದು. ಪುರುಷ ಮತ್ತು ಸ್ತ್ರೀ ಸಂಬಂಧವನ್ನು ನಿಸರ್ಗ ರೂಪ ಮತ್ತು ರೂಪಕಗಳ ಮೂಲಕ ಸಮರ್ಥವಾಗಿ ನಿರೂಪಿಸಿ ಸಮತೆಯ ಆಶಯವನ್ನು ಅಭಿವ್ಯಕ್ತಿಸಿದೆ. ಇಲ್ಲಿ ಪುರುಷನ ಜೊತೆಯನ್ನು ನಿರಾಕರಿಸದೆ ಜೊತೆಗಿದ್ದು ತನ್ನತನವನ್ನು ಸಂರಕ್ಷಿಸಿಕೊಳ್ಳುವ ನಿರ್ಧಾರವಿದೆ. ಗಂಡು ಇಲ್ಲದಿದ್ದರೆ 'ಏಕಾಂಗಿ' ಎಂಬ ಭಾವನೆಗೆ ಬದಲಾಗಿ ಗಂಡಿನ ಜಾಗದಲ್ಲಿ ತನ್ನತನದ ಸ್ವಾಯತ್ತತೆಯನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಸಾವಿತ್ರಿಯವರ ಕವಿತೆಗಳಲ್ಲಿ 'ಬೆಳಕು' ಪಡೆದ ಪ್ರಾಮುಖ್ಯತೆಯನ್ನೇ 'ಬಯಲು' ಎಂಬ ಪರಿಕಲ್ಪನೆಯೂ ಪಡೆದಿದೆ. ಹೆಣ್ಣು ಪುರುಷ ದೃಷ್ಟಿಕೋನದ ಕಟ್ಟುಪಾಡುಗಳನ್ನು ಕಳಚಿ ತನ್ನದೆ ನೈತಿಕತೆಯನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯನ್ನು ಬಯಲೆಂಬ ಸ್ವಾತಂತ್ರ್ಯದ ರೂಪಕದಲ್ಲಿ ಕಾಣಿಸುತ್ತದೆ. ಇದು ಗಂಡನ್ನು ತ್ಯಜಿಸುವ ಅಪೇಕ್ಷೆಯಲ್ಲ. ಗಂಡಿನ ಅಧಿಕಾರಶಾಹಿ ಪ್ರವೃತ್ತಿಯನ್ನು ಪ್ರತಿರೋಧಿಸಿ ಹೊರಡುವ ದಿಟ್ಟ ದನಿ. ಇಲ್ಲಿ ಪ್ರತಿರೋಧವಿದೆ, ಪೂರ್ಣ ಪರಿತ್ಯಾಗ ಇಲ್ಲ. ಇಲ್ಲಿ ಗಂಡು ಹೆಣ್ಣಿನ ನಡುವೆ ಸುಳಿವ ಆತ್ಮ ಒಂದಾದ ನಾದದ ಪ್ರಸ್ತಾಪವಿದೆ. ಅಂದರೆ ಸಹಪಯಣದ ಆಶಯವನ್ನು ಗುರುತಿಸಬಹುದು. ಪುರುಷನು ನಿಜವಾಗಿ ಆತ್ಮಸಂಗಾತಿಯಾಗಬೇಕೆಂಬ ಹಂಬಲವನ್ನು ಬಿಂಬಿಸುತ್ತದೆ. ಪುರುಷ ಪ್ರಧಾನ ಅಹಮಿಕೆಗೆ ಒಡ್ಡಬೇಕಾದ ಪ್ರತಿರೋಧವನ್ನು ಸೂಚ್ಯವಾಗಿ ಹೇಳುತ್ತಲೇ ಅಹಮಿಕೆಯನ್ನು ಬಿಟ್ಟು ಒಂದಾಗಿ ಬದುಕುವ ಅಪೇಕ್ಷೆಯನ್ನು ವ್ಯಕ್ತಪಡಿಸಿದೆ ಎಂಬುವುದನ್ನು ಈ ಕವನ ಸಂಕಲನದಲ್ಲಿ ನೋಡಬಹುದು.

About the Author

ಸಾವಿತ್ರಿ ಮುಜುಮದಾರ

ಸಾವಿತ್ರಿ ಮುಜುಮದಾರ ಅವರು ಮೂಲತಃ ಕೊಪ್ಪಳ ಜಿಲ್ಲೆಯವರು. ಚಿಂತಕಿ, ಲೇಖಕಿ, ಕವಯತ್ರಿ ಹಾಗೂ ಸಮಾಜಿಕ ಹೋರಾಟಗಾರ್ತಿಯಾಗಿ ಹೆಸರಾದವರು. ಇವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಸಿಂಡಿಕೇಟ್‌ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವ ಹವ್ಯಾಸ ಇವರದು. ʻಹೆಣ್ಣು ಹೆಜ್ಜೆʼ ಅಂಕಣ ಬರಹಕ್ಕೆ 6ನೇ ದಲಿತ ಸಾಹಿತ್ಯ ಸಮ್ಮೇಳನದ ʻಪುಸ್ತಕ ಪ್ರಶಸ್ತಿʼ ಲಭಿಸಿದೆ. ಕೃತಿಗಳು: ʻಹೆಣ್ಣು ಹೆಜ್ಜೆʼ (ಅಂಕಣ ಬರಹ), ನಾರಿಪದ್ಯ (ಕವನ ಸಂಕಲನ) ...

READ MORE

Related Books