ದೇಶದ ಸ್ವಾತಂತ್ರ್ಯ ನಂತರದ ಪರಿಸ್ಥಿತಿಯಲ್ಲಿಯೂ ದೇಶದ ಪ್ರಜೆಗಳ ಕನಸುಗಳು ಸಾಕಾರಗೊಳ್ಳಲಿಲ್ಲ. ಅವುಗಳ ಹುಡುಕಾಟದ ತವಕಗಳು ಇಲ್ಲಿ ಕಾವ್ಯಾಂಶಗಳಾಗಿವೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹೀಗೆ ಪ್ರತಿ ಕ್ಷೇತ್ರವೂ ಕವಿಗಳು ತಮ್ಳಮ ಕ್ಷಕಿರಣ ಬೀರಿ ಕವನಗಳ ಮೂಲಕ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ಶ್ರೀಧರ ಪಿಸ್ಸೆ ಅವರು 1959ರ ಏಪ್ರಿಲ್ 24 ರಂದು ಕನಕಪುರದಲ್ಲಿ ಜನಿಸಿದರು. ‘ಕನ್ನಡ ದಾಸ ಸಾಹಿತ್ಯ ಮತ್ತು ಸಾಂಸ್ಕೃತಿಕ ಪಲ್ಲಟ’ ಅಧ್ಯಯನಕ್ಕೆ ಪಿಎಚ್ ಡಿ. ಲಭಿಸಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಖಾಸಗಿ ವಲಯದಲ್ಲಿ ವೃತ್ತಿ ಆರಂಭಿಸಿದ ಅವರು ಹಂಪಿ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ 21 ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಹಸಿರು ನಿಶಾನೆ’ ಅವರ ಅನುವಾದಿತ ಕಥಾ ಗುಚ್ಛ. ...
READ MORE