ದುರಿತಕಾಲದ ದನಿ ಕೃತಿಯಲ್ಲಿ ಒಟ್ಟು 57 ಕವಿತೆಗಳಿವೆ. ಸಾಮಾಜಿಕ ಮತ್ತು ಸಮುದಾಯದ ಸೂಕ್ಷ್ಮತೆಯನ್ನು ಸರಳವಾಗಿ ಎಲ್ಲ ಸ್ಥರದ ಜನರನ್ನು ಮುಟ್ಟುವ ಕವಿತೆಗಳಿವು. ಒಂದು ಕಡೆ ಜಾಗತೀಕರಣವು ನಮ್ಮ ಸ್ಥಳೀಯ ಸಂಸ್ಕೃತಿಯನ್ನು ನಾಶಪಡಿಸುತ್ತ ನಡೆದಿದ್ದರೆ, ಇನ್ನೊಂದೆಡೆ ಮತೀಯ ಮೂಲಭೂತವಾದ ನಮ್ಮ ಬಹುಸಂಸ್ಕೃತಿಯ ಪರಂಪರೆಯ ಮನೆಯ ಹಂದರವನ್ನು ಕೆಡವಲು ಹೊಂಚು ಹಾಕುತ್ತಿದೆ. ಪ್ರಭುತ್ವ ಧರ್ಮದ ಆಸರೆಯೊಂದಿಗೆ ಅಧಿಕಾರ ಚಲಾಯಿಸುವ ಮಾತಾಡುತ್ತಿದೆ. ಹೀಗೆ ಬಂಡವಾಳಶಾಹಿ, ಧರ್ಮ, ಪ್ರಭುತ್ವಗಳು ಒಟ್ಟಾಗಿ ಛಿದ್ರಗೊಳಿಸಲು ಹೊರಟಿರುವ ಒಂದು ಸಮಾಜವನ್ನು ಎಚ್ಚರಿಕೆಯ ಸ್ಥಿತಿಯಲ್ಲಿಡಲು ಅಗತ್ಯವಾದ ಕವಿತೆಗಳು ಇಲ್ಲಿವೆ.
ಕವಿ,ಕತೆಗಾರ, ರಾಜಕೀಯ ವಿಶ್ಲೇಷಕ ಕು.ಸ.ಮಧುಸೂದನ ಅವರು 1963ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು. ಮಾತೃಭಾಷೆ ಮಲೆಯಾಳಂ. ಆದರೂ, ಓದಿದ್ದು ಬರೆದಿದ್ದು ಮಾತ್ರ ಕನ್ನಡದಲ್ಲಿಯೇ. ಸರ್ಕಾರಿ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಕರಾಗಿ 30 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ಇದೀಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ರಂಗೇನಹಳ್ಳಿ(ಮುಡುಗೋಡು) ಗ್ರಾಮದಲ್ಲಿನೆಲೆಸಿದ್ದಾರೆ. ’ಅಸಹಾಯಕ ಆತ್ಮಗಳು’ ಕಥಾ ಸಂಕಲನ ರಚಿಸಿದ್ದು, ’ದುರಿತ ಕಾಲದ ದನಿ” ಅವರ ಕವನ ಸಂಕಲನ. ಸಮಕಾಲೀನ ರಾಜಕೀಯ ವಿದ್ಮಮಾನಗಳ ವಿಶ್ಲೇಷಣೆ ಒಳಗೊಂಡ ’ಮಣ್ಣಿನ ಕಣ್ಣು ಭಾಗ - 1 ಮತ್ತು 2' ನ್ನು ಪ್ರಕಟಿಸಿದ್ದಾರೆ ...
READ MORE