ಲೇಖಕ ಸಿದ್ದಾಪುರ ಶಿವಕುಮಾರ್ ಅವರ ಕುಂಚ ಹನಿಗವಿತೆಗಳು ‘ಭಾವ ರೇಖೆಗಳ ನಡುವೆ’.ಇಲ್ಲಿನ ಕವಿತೆಗಳು ಸಾಕಷ್ಟು ವಸ್ತುವೈವಿಧ್ಯತೆಯಿಂದ ಕೂಡಿವೆ. ಪರಿಸರ, ಸಮಾಜದ ಶೋಷಣೆ, ದಬ್ಬಾಳಿಕೆ, ವ್ಯಕ್ತಿಗಳ ಸ್ವಾರ್ಥ ಕುರಿತು ವ್ಯಂಗ್ಯ ವಿಡಂಬನಾತ್ಮಕವಾಗಿ ನೀವು ಬರೆದಿರುವ ಹನಿಗವಿತೆಗಳು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಚಿತ್ರ ಸಾಹಿತಿ, ಚಲನಚಿತ್ರ ನಿರ್ದೇಶಕರು ವಿ.ನಾಗೇಂದ್ರಪ್ರಸಾದ್ ಅವರು ಈ ಕೃಇಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಪ್ರೀತಿ, ಪ್ರೇಮ, ದಾಂಪತ್ಯ, ನೋವು-ನಲಿವು, ಸಮಾಜ ಮುಂತಾದ ಹಲವು ಸಂಗತಿಗಳು ಶಿವಕುಮಾರ್ ಅವರೊಳಗೆ ಹನಿಗವಿತೆ ಬರೆಸಿವೆ. ಸರಳ ಪದಗಳಲ್ಲಿ ಚೆಂದದ ಪ್ರಾಸಗಳಲ್ಲಿ ಭಾವ ರೇಖೆಗಳ ನಡುವೆ' ಕೃತಿಯನ್ನು ತಮ್ಮ ಕವಿಭಾವಕ್ಕೆ ರೇಖೆಗಳಿಂದ ಅಲಂಕರಿಸಿದ್ದಾರೆ. ತಮ್ಮ ಸುತ್ತಲಿನ ಜಗತ್ತನ್ನು ವಿಭಿನ್ನವಾಗಿ ಸ್ವೀಕರಿಸುವ ಶಿವಕುಮಾರ್, ತಮ್ಮೊಳಗಿನ ಕವಿಯನ್ನು ಜೀವಂತವಾಗಿರಿಸಿದ್ದಾರೆ. ಹಲವು ಮಗ್ಗಲುಗಳನ್ನು ನೋಡಿರುವ ಅನುಭವಿಯೊಬ್ಬನ ಅಂತರಂಗ ಬರಹಕ್ಕೆ ತೊಡಗಿದ್ದಾಗ ಇಂತಹ ಚೆಂದದ ಹನಿಗಳು ಪದ್ಯವಾಗುತ್ತವೆ ಹೃದ್ಯವಾಗುತ್ತವೆ. ಈ ಸಂಕಲನದ ಪ್ರತೀ ಹನಿಯೂ ಓದುಗನಿಗೆ ಹೊಸಹೊಸ ರುಚಿಗಳ ಪರಿಚಯ ಮಾಡಿಸಬಲ್ಲದು. ಇಂತಹ ರುಚಿಕರ ಹನಿಗವಿತೆಗಳ ಮತ್ತು ಹೊಸ ಭಾವಗಳನ್ನು ಹುಟ್ಟಿಸಬಲ್ಲ ರೇಖಾಚಿತ್ರಗಳ ಗಣಿಯ ಮಾಲೀಕ ಶಿವಕುಮಾರ್ ಅವರಿಗೆ ಶುಭವಾಗಲಿ ಎಂದಿದ್ದಾರೆ.
ಪುಟ ತೆರೆದಂತೆ 108 ಶೀರ್ಷಿಕೆಗಳಿದ್ದು, ಆತ್ಮಾವಲೋಕನ, ಬದುಕು, ಪ್ರತಿಫಲ, ಹಕ್ಕಿ ಹೆಕ್ಕಿ, ಋಣಿ, ನಿತ್ಯಸತ್ಯ, ಮುದ, ನಿಸ್ವರ್ಥ, ಅಮ್ಮ, ಗಿಡ ನಕ್ಕಿತು, ಭೂಮಿ ಸೆರಗು ಸೇರಿದಂತೆ ಅನೇಕ ಶೀರ್ಷಿಕೆಗಳಿವೆ.
ಶಿವಕುಮಾರ್ ಕಲಾವಿದರಾಗಿ ಅಷ್ಟೇ ಅಲ್ಲ: ವಿವಿಧ ಪತ್ರಿಕೆಗಳಿಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಹಲವು ಚಿತ್ರಗಳನ್ನು ಕವಿಕೆ, ಕಥೆಗಳಿಗೆ ಬಿಡಿಸಿದ್ದಾರೆ. ಬಹಳಷ್ಟು ಪುಸ್ತಕಗಳಿಗೆ ಮುಖಪುಟ ಪುಟ ಚಿತ್ರಗಳನ್ನು ಬರೆದಿದ್ದಾರೆ. ಕಲಾವಿದ, ಹವ್ಯಾಸಿ ಪತ್ರಕರ್ತರೂ ಹೌದು. ಕೃತಿ: 'ಭಾವ ರೇಖೆಗಳ ನಡುವೆ’ (ಹನಿಗವಿತೆ ಸಂಕಲನ) ...
READ MORE