ಯು.ಆರ್. ಅನಂತಮೂರ್ತಿ ‘ಸಮಸ್ತ ಕಾವ್ಯ’ ಆರು ದಶಕಗಳ ಕಾಲ ಅವರು ಬರೆದ ಕವಿತೆಗಳ ಸಂಕಲನ. 2011ರ ವರೆಗೆ ಅನಂತಮೂರ್ತಿಯವರು ಬರೆದ ಎಲ್ಲ ಕವಿತೆಗಳು ಈ ಸಂಕಲನದಲ್ಲಿವೆ. ಒಂದೆರಡು ಪದ್ಯಗಳು ಅವರು ಮಹಾರಾಜಾ ಕಾಲೇಜಿನಲ್ಲಿ ಎಂ.ಎ. ಓದುತ್ತಿದ್ದಾಗ ಬರೆದವು, ಹಾಸನದ ಇಂಟರ್ ಮೀಡಿಯಟ್ ಕಾಲೇಜಿನಲ್ಲೂ, ಶಿವಮೊಗ್ಗದ ಈಗಿನ ಸಹ್ಯಾದ್ರಿ ಕಾಲೇಜಿನಲ್ಲೂ ಪಾಠ ಮಾಡುತ್ತಿದ್ದಾಗ ಐವತ್ತರ ದಶಕದಲ್ಲಿ ಬರೆದ ಪದ್ಯಗಳೂ ಸೇರಿವೆ. ಅಳುಕಿನಲ್ಲಿ ಅಸ್ಮಿತೆಯ ಹುಡುಕಾಟವಾಗಿ ಬರೆದ ಅನಂತಮೂರ್ತಿ ಅವರ ಕೆಲವು ಕಥೆಗಳೂ, ಪದ್ಯಗಳೂ ಇವೆ.
‘ಜೀವನ, ವೈಚಾರಿಕತೆ-ಎರಡೂ ಒಟ್ಟಾಗಿ ಕವಿತೆಗಳಲ್ಲಿ ಶೋಧವಾಗಬೇಕೆಂಬುದು ನನ್ನ ಆಸೆ’ ಎನ್ನುತ್ತಾರೆ ಅನಂತಮೂರ್ತಿ. ಅವರು ಅನುವಾದಿಸಿದ ಯೇಟ್ಸ್, ರಿಲ್ಕ್, ಬ್ರೇಕ್ಟ್, ದಾವ್ ದ ಜಿಂಗ್ ಅನುವಾದಗಳೂ ಈ ಶೋಧದ ಫಲವಾಗಿಯೇ ಬಂದಿವೆ ಎನ್ನುತ್ತಾರೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE