ಪ್ರೇಮಾಂಕುರ

Author : ಶಿವಮನ್ಯು ಪಾಟೀಲ

Pages 52

₹ 80.00




Year of Publication: 2020
Published by: ಶಿವಮನ್ಯು ಪಾಟೀಲ
Address: ಮುದ್ದೇಬಿಹಾಳ - 586212, ವಿಜಯಪುರ ಜಿಲ್ಲೆ
Phone: 08884871693

Synopsys

ಪ್ರೇಮಾಂಕುರ-ಕವಿ ಶಿವಮನ್ಯು ಪಾಟೀಲ ಅವರ ಕವನ ಸಂಕಲನ. ಕವಿ ಹೇಳುವಂತೆ ‘ಪ್ರೀತಿಯು ಅನಾದಿ ಕಾಲದಿಂದಲೂ ಪ್ರತಿಕ್ಷಣವು ನವನವೀನವಾಗಿ ನವಿರಾಗಿ, ಪ್ರತಿ ಮನದಲ್ಲು ಹೊಸ ಹುಟ್ಟು ಪಡೆಯುತ್ತದೆ. ಹೊಸ ಭಾವ ಹುಟ್ಟಿಸಿ, ಹೊಸ ಕಲ್ಪನೆಯಲ್ಲಿ ತೇಲಿಸಿ, ಹೊಸ ಜಗವ ಸೃಷ್ಟಿಸಿ ವರ್ಣಿಸಲಾಗದಂಥ ಅನುಭವ ನೀಡುತ್ತದೆ. ಈ ಜಗತ್ತಿನಲಿ ಪ್ರೀತಿ ಬಯಸದ, ಪ್ರೀತಿಗೆ ಸೋಲದ ಜೀವಸಂಕುಲವೇ ಇಲ್ಲ. ಅದಕ್ಕೆ ಪ್ರೀತಿಯನ್ನು ಅಗಾಧವಾದ ಅಪರಿಮಿತವಾದ ಸಾಗರಕ್ಕೆ, ಆಗಸಕ್ಕೆ, ಭೂಮಿಗೆ ಹೋಲಿಸುತ್ತೇವೆ. ಈ ಪ್ರೀತಿಗೆ ಅಂತ್ಯ ಎಂಬುದಿಲ್ಲ. ಪ್ರತಿಕ್ಷಣವು ಈ ಸೃಷ್ಟಿಯಲಿ ಪ್ರೀತಿಯನ್ನು ಕಾಣುತ್ತೇವೆ. ಆ ಪ್ರೀತಿಯ ಮಡಿಲಲ್ಲೆ ಮಗುವಾಗಿ ಆಶ್ರಯ ಪಡೆಯುತ್ತೇವೆ. ಪ್ರೀತಿಯು ಕವಿಗಳಿಗೆ ಸದಾ ಸ್ಪೂರ್ತಿಯ ಚಿಲುಮೆಯನ್ನು ಉಕ್ಕಿಸಿ, ಪದಗಳಲ್ಲಿ ಝೇಂಕರಿಸಿ ಪ್ರೇಮಕಾವ್ಯಗಳಲ್ಲಿ ಸುಳಿದಾಡುತ್ತದೆ.  ಒಂದು ವೇಳೆ, ಪ್ರೀತಿ ಜಗದಲ್ಲಿ ಇರದಿದ್ದರೆ ಜಗತ್ತು ಇಷ್ಟು ಸುಂದರವಾಗಿ ಕಾಣುತ್ತಿತ್ತೇನು? ಜಗದ ಸಕಲ ಚರಾಚರ ಜೀವಿಗಳಲ್ಲಿಯೂ ಪ್ರೀತಿ ತುಂಬಿದೆ. ಪ್ರೀತಿಯಿಂದಲೇ ಜಗವೂ ರೂಪ ತಳೆದಿದೆ ಎಂದರೆ ಅತಿಶಯೋಕ್ತಿಯಲ್ಲ. ಹರೆಯದ ಹೊಸ್ತಿಲಲ್ಲಿ ಕಾಲಿಡುವ ಆ ಗಳಿಗೆಯಲ್ಲಿ ಈ ಹೃದಯ ಹೊಸ ಭಾವದ ಮಿಡಿತಕ್ಕೆ ಆಕರ್ಷಿತವಾಗುತ್ತದೆ. ಆ ನವರೂಪಿ ಸುಂದರ ಆಗ ಮೂಡುವ ಭಾವಗಳೇ ಮಧುರ. ಹಾಗಂಥ ಪ್ರೀತಿ ಬರೀ ಹರೆಯದ ಹೃದಯಗಳಲ್ಲಿ ನೆಲೆಯೂರದೆ ಅದು ಎಲ್ಲ ಎಲ್ಲೆಯನ್ನು ದಾಟಿದೆ. ಅದಕ್ಕಾವ ವಯಸ್ಸಿನ ಹಂಗಿಲ್ಲ. ಹರೆಯದಿಂದ ಇಳಿಯವರೆಗೂ ಪ್ರೀತಿಯನ್ನೂ ಹಂಬಲಿಸುತ್ತಲೇ ಇರುತ್ತದೆ ಈ ಹೃದಯ. ಪ್ರೀತಿ ಬದುಕಿಗೆ ಸ್ಪೂರ್ತಿಯನ್ನು ಹೊಸ ಚೈತನ್ಯವನ್ನು ನೀಡಬೇಕು. ಈ ನವಿರಾದ ಪ್ರೀತಿಯ ಬಗ್ಗೆ ನನ್ನ ಆಂತರ್ಯದಲ್ಲಿ ಮೂಡಿರುವ ಭಾವನೆಗಳಿಗೆ ಮತ್ತು ನನ್ನ ಕಲ್ಪನೆಯಲ್ಲಿ ಬೆಸೆದುಕೊಂಡಿರುವ ಹಾಗೂ ಹುಟ್ಟುತ್ತಿರುವ ಭಾವನೆಗಳನ್ನು ಜೋಡಿಸಿ ಕವನಗಳನ್ನು ಬರೆದೆ’ ಎಂದು ಹೇಳಿಕೊಂಡಿದ್ದಾರೆ. 

 

About the Author

ಶಿವಮನ್ಯು ಪಾಟೀಲ

ಲೇಖಕ ಶಿವಮನ್ಯು ಪಾಟೀಲರು ಅವರು ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದವರು.  ಎಂಜಿನಿಯರಂಗ್ (ಸಿವಿಲ್) ಪದವೀಧರರು.‘ ಸ್ಕೈ’  ಎಂಜಿನಿಯರ್‍ಸ್ ಕಂಪನಿಯ ಪ್ರಧಾನ ವ್ಯವಸ್ಥಾಪಕರು. ಸಾಹಿತ್ಯಕವಾಗಿಯೂ ತೊಡಗಿಸಿಕೊಂಡಿದ್ದಾರೆ.   ಕೃತಿಗಳು : ಪ್ರೇಮಾಂಕುರ ( ಕವನ ಸಂಕಲನ ), ಭಾವಾಂಕುರ ( ಕವನ ಸಂಕಲನ ), ನಾಟಕಗಳು: ದ್ರೋಹದ ದೊರೆ, ಆಗಸ್ಥಿಕೆ, ವೇದಾಂತ - ಸಿದ್ದಾಂತ  ಕನ್ನಡ ಹುಲಿ. ಪ್ರಶಸ್ತಿ-ಪುರಸ್ಕಾರಗಳು:  ದ್ರೋಹದ ದೊರೆ  ನಾಟಕಕ್ಕೆ ಮುಂಬಯಿ ಕನ್ನಡ ಸಂಘದಿಂದ ಮೊದಲ ಪ್ರಶಸ್ತಿ., ಆಗಸ್ಥಿಕೆ ನಾಟಕಕ್ಕೆ ರಂಗಾಂತರಂಗದವರಿಂದ ಉತ್ತಮ ನಾಟಕ ಪ್ರಶಸ್ತಿ., ಬೆಳಕು ಮಾರುವವರು ಕಥೆಗೆ ಕುವೆಂಪು ಕಲಾವೇದಿಕೆ ಮೈಸೂರು ಇವರಿಂದ ಪ್ರಶಸ್ತಿ, ಉಡುಗೊರೆ ಎಂಬ ಕಥೆಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ ಉತ್ತಮ ಕಥೆಯ ಪ್ರಂಶಸೆ, ಅಲೆಮಾರಿಯ ಬದುಕು ಎಂಬ ಕವನವು ...

READ MORE

Related Books