'ಅರಳಿದ ಮೊಗ್ಗು’ ಕೃತಿಯು ಲಲಿತಾ ಮಹಾಂತೇಶ ಅರಳಿ ಅವರ ಕವನಸಂಕಲನವಾಗಿದೆ. ಕವಿಯ ಮನಸ್ಸಿಗೆ ಬರೆಯುವ ತುಡಿತ, ಹೃದಯದ ಬಡಿತ ಇದ್ದರಷ್ಟೇ ಸಾಲದು. ಜೊತೆಗೆ ಭಾಷೆಯ ಹಿಡಿತ, ಒಂದೆಳೆಯ ಹಿಡಿದು ಹಂದರವ ಸುಂದರವಾಗಿ ರಚಿಸುವ ಕೌಶಲ ಇರಬೇಕಾದುದು ತಂಬಾ ಅವಶ್ಯಕ. ಇಲ್ಲಿ ಅಂತಹ ಅರ್ಥಪೂರ್ಣ, ಭಾವಪೂರ್ಣ ಕವನಗಳನ್ನು ಕಾಣಬಹುದಾಗಿದೆ. ಕವಯಿತ್ರಿ ಪರಿಸರದ ಸೌಂದರ್ಯವನ್ನು ವರ್ಣಿಸಿರುವ ರೀತಿಯೇ ಭಿನ್ನವಾಗಿದೆ. ಒಟ್ಟಾರೆಯಾಗಿ ಇಲ್ಲಿನ ಕವನಗಳು ಭಾವಗಳ ಗುಚ್ಛದಿಂದ ಅರಳಿರುವುದನ್ನು ಕಾಣಬಹುದು.
ಲಲಿತಾ ಮಹಾಂತೇಶ ಅರಳಿ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ತಂದೆ ಶಿವಪ್ಪ, ತಾಯಿ ಕಾಶಮ್ಮ. ಉಮಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ, ಮುಗಿಸಿ ಅದೇ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪಡೆದರು. ಉರ್ದು ಮೂಲದ ಹಲವಾರು ಗಝಲ್ ಗಳಿಗೆ ಕನ್ನಡದ ಸ್ವಾದವನ್ನು ನೀಡಿರುತ್ತಾರೆ. ಕೃತಿಗಳು: ಅಮೃತಧಾರೆ ...
READ MORE