ಕವಿ ಗೋವಿಂದ ಹೆಗಡೆ ಅವರ ಕವನ ಸಂಕಲನ-'ಪೇಟೆ ಬೀದಿಯ ತೇರು'. ಕೃತಿಗೆ ಬೆನ್ನುಡಿ ಬರೆದ ಕವಿ ಚಿಂತಾಮಣಿ ಕೊಡ್ಲೆಕೆರೆ "ಕಾವ್ಯದ ಧ್ಯಾನ, ಬೆಳಕು-ನೆರಳು, ಕನಸು-ವಾಸ್ತವಗಳ ಬಾಹ್ಯ ಅಂತರವನ್ನು ಮೀರುವುದರಲ್ಲಿದೆ ಎಂದು ತೋರುತ್ತದೆ. 'ಮುಳ್ಳು ಕಂಪನ ಮತ್ತು ಎದೆಯ ಗಾಯವಿರದೇ ಹಾಡು ಹೊಮ್ಮದು' ಎನ್ನುವ ಅವರ ಕಾವ್ಯ ಜಗತ್ತಿನಲ್ಲಿ ದೃಶ್ಯ ಜಗತ್ತಿನ ಅನೇಕ ವಿಹ್ವಲ ಚಿತ್ರಣಗಳಿವೆ. ಭಾಷಿಕವಾಗಿ ಸರಳತೆಯನ್ನು ಸಾಧಿಸಲು ಬಯಸುವಂತಿರುವ ಇವರ ಕವಿತೆಗಳು ತಾತ್ವಿಕವಾಗಿ ಸಹಜವಾದದ್ದನ್ನು ಒಳಗೊಳ್ಳುತ್ತಾ ಮಹತ್ವದ ಪ್ರಶ್ನೆಗಳನ್ನು ಶೋಧಿಸುತ್ತವೆ. ಸಂಯಮ ಹಾಗೂ ಸಾವಧಾನಚಿತ್ತತೆಯ ಗುಣವು ಅವರ ಕವಿತೆಗಳಲ್ಲೂ ಎದ್ದು ಕಾಣಿಸುತ್ತದೆ. ಇಲ್ಲಿನ ಕವಿತೆಗಳನ್ನೆಲ್ಲಾ ಓದುತ್ತಾ ಹೋದಂತೆ ನಮಗರಿವಾಗುವ ಅಂಶವೆಂದರೆ, ಹೆಗಡೆಯವರ ಕವಿತೆಗಳು ರಭಸದಿಂದ ಧುಮ್ಮಿಕ್ಕುವ ಜಲಪಾತವಲ್ಲ; ಸಮಾಜ ಸುಧಾರಣೆಯ ಅಬ್ಬರವಿಲ್ಲ’ ಎಂದು ಪ್ರಶಂಸಿಸಿದ್ದಾರೆ.
ಗೋವಿಂದ ಹೆಗಡೆ ಅವರು ಎಂಬಿಬಿಎಸ್, ಡಿಎ., ಪದವೀಧರರು. ಅರಿವಳಿಕೆ ತಜ್ಞ. ಹುಬ್ಬಳ್ಳಿಯಲ್ಲಿ ಖಾಸಗಿಯಾಗಿ ವೃತ್ತಿ ನಿರ್ವಹಣೆ. ಕವನ, ಹನಿಗವನಗಳು, ಶಿಶುಗೀತೆಗಳು, ಭಾವಗೀತೆಗಳು, ಗಜಲ್, ಹಾಯ್ಕು, ಫರ್ದ್, ರುಬಾಯಿ ಮೊದಲಾದ ಕಾವ್ಯಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಮೈಸೂರು ದಸರಾ ಕವಿಗೋಷ್ಠಿ, ಧಾರವಾಡ ಉತ್ಸವ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಸಮ್ಮೇಳನ ಕವಿಗೋಷ್ಠಿಯೂ ಸೇರಿದಂತೆ ಹಲವಾರು ವೇದಿಕೆಗಳಿಂದ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದ್ದಾರೆ. ಪ್ರಾಚಾರ್ಯ ಎಚ್ಚೆಸ್ಕೆ ಅವರ ಜನ್ಮಶತಮಾನೋತ್ಸವದಲ್ಲಿ ಏರ್ಪಡಿಸಲಾಗಿದ್ದ ‘ಎಚ್ಚೆಸ್ಕೆ ಬೆಳಕು’ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಕಟಿತ ಕವನ ಸಂಕಲನ 'ಕನಸು ಕೋಳಿಯ ಕತ್ತು' ಕನ್ನಡ ಪುಸ್ತಕ ಪ್ರಾಧಿಕಾರದ ‘ಯುವ ಬರಹಗಾರರಿಗೆ ಪ್ರೋತ್ಸಾಹ' ...
READ MORE'ಪೇಟೆ ಬದಿಯ ತೇರು' ಕವಿತಾ ಸಂಕಲನದ ಕುರಿತು ಕವಿ ಗೋವಿಂದ ಹೆಗಡೆ ಅವರ ಮಾತು ಇಲ್ಲಿದೆ