ಭೂಮಿ ಪುಟ್ಟಿ ಶೋಭಾ ಹರಿಪ್ರಸಾದ್ ಅವರ ಕಾವ್ಯ ಗ್ರಂಥವಾಗಿದೆ. ಭೂಮಿ ಪುಟ್ಟಿ – ತನ್ನ ಹುಟ್ಟನ್ನೂ ತಾನು ಅನುಭವಿಸಿದಂತೆ ! ಪರಿಚಯಿಸುವ ಪ್ರಾರಂಭವು ತಾಯಿಯ ಪುಣ್ಯಗರ್ಭದಿಂದಲೇ ಹೇಳಿಕೊಳ್ಳುವ ಆಶಯ ಹೊಂದಿದಂತೆ ಕಾಣುತ್ತದೆ. ಒಂದು ಹೆಣ್ಣು ತಾನೊಂದು ಜೀವವನ್ನು ನಂಬಿ, ಅದರಿಂದ ದೇವರನ್ನು ತನ್ನಲ್ಲಿ ಮಗುವಾಗಿ ಅನುಭವಿಸಿ ಅದೊಂದು ಸಾಕ್ಷಾತ್ ಅವನೇ(ಳೇ) ಆಗಿ ಮಡಿಲು ಹಾಡಲು ತೊಡಗಿದಾಗ ಈ ತಾಯಿಯಾದ ಹೆಣ್ಣೆ ನಾನೂ ಕೂಡ ಹೀಗೊಂದು ಜೀವವಾಗಿದ್ದೆ ಎನ್ನುವುದನ್ನು ತೋರಿಸುವಲ್ಲಿ ಮಾಡಿದ ಅಮೋಘವಾದದ್ದು. ಈ ಕಾವ್ಯದ ಕುಶಲ ಕುಲುಕಾಟ ಒಂದು ತಂದೆ-ತಾಯಿ ಜೋಡಿ, ಆ ಜೋಡಿಗೊಂದು ಮಗು, ಈ ಸಂಬಂಧದ ಮನಸ್ಸಿಗೊಂದು ಮನೆ…. ಇಲ್ಲಿ ಮಾತಾಪಿತೃಗಳು ವಿಶಾಲವಾದ ವೃಕ್ಷಗಳಾಗುತ್ತಾ ಅಜ್ಜ, ಅಜ್ಜಿ, ಮಾಮಿ, ಅಣ್ಣ, ಮಾಮ, ಸ್ನೇಹಿತೆ, ಹೀಗೆ ಎಸ್ಟತವಾಗಿ ಗುರುತಿಸಲ್ಪಡುತ್ತ ಆ ಬಾಲ್ಯಾವಸ್ಥೆಯ ಹಂತಗಳು ರುಚಿಕಟ್ಟಾಗಿ ಸಾಗುತ್ತವೆ. ಜೀವ ಸಾನಿಧ್ಯ ಯಾವುದನ್ನೂ ಬಿಟ್ಟು ಬೆಳೆಯುವುದಿಲ್ಲ. ಎಲ್ಲವುಗಳೊಂದಿಗೆ ಸೇರಿ ಎಲ್ಲವೂ ತಾನಾಗುತ್ತಾ ಹೋಗುತ್ತದೆ. ಭಾಮಿ ಪುಟ್ಟ ಒಂದು ಸ್ವಗತ ಕಾವ್ಯ, ಭಾಮಿನಿ ಷಟ್ಟದಿಯಲ್ಲಿ ಅತ್ಯಂತ ಮನೋಜವಾಗಿ ಮೂಡಿದೆ. ಒಂದು ಮಗುವಿಗೆ ಹುಟ್ಟುವ ಮುಂಚೆ ಮತ್ತು ಹುಟ್ಟಿದಲ್ಲಿಂದಲೂ ಒಂದು ಚರಿತ್ರೆ ನಿರ್ಮಾಣ ಆಗುತ್ತಾ ಹೋಗುತ್ತದೆ. ಈ ಕಾವ್ಯ ಗ್ರಂಥಕ್ಕೆ ಮುನ್ನುಡಿಯೋ ಹೊನ್ನುಡಿಯೋ ಬರೆಯಲು ನಾನೇನು ದೊಡ್ಡ ಬರಹಗಾರನಲ್ಲ. ಆದರೆ ಬರೆದು ಕೊಡಬೇಕು ಅಂತ ಶೋಭಾರವರು ಕೇಳಿದಾಗ ಒಪ್ಪಿದೆ, ನನಗಿದು ಒಂದು ದೊಡ್ಡ ಭಾಗ್ಯ. ಶೋಭಾ ಹರಿಪ್ರಸಾದರಿಂದ ನೂರಾರು ಪುಸ್ತಕಗಳು ಬರಲಿ, ಅವರು ಸಾರಸ್ವತ ಲೋಕದಲ್ಲಿ ಒಬ್ಬ ಮೇರು ಸಾಹಿತಿಯಾಗಿ ಕನ್ನಡದ ಮನಸಲ್ಲಿ ಮರೆಯಬಾರದ ಕವಿಯಾಗಲಿ ಎನ್ನುವ ಹಾರೈಕೆ ನನ್ನದು ಎಂದು ಸಚ್ಚಿದಾನಂದ ವಿ. ನಾಯಕ್ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಶೋಭಾ ಹರಿಪ್ರಸಾದ್ ಮೂಲತಃ ಸಾಲಿಕೇರಿಯವರು. ತಾಯಿ ಲಲಿತಾ ಶೆಟ್ಟಿಗಾರ್ ತಂದೆ ನಾರಾಯಣ ಶೆಟ್ಟಿಗಾರ್. ಪ್ರಾಥಮಿಕ ವಿದ್ಯಾಭ್ಯಾಸವನ್ನು ವಿದ್ಯಾಮಂದಿರದ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ಪೂರ್ಣಗೊಳಿಸಿ ಹೈಸ್ಕೂಲ್ ಮತ್ತು ಬಿ. ಎ ಪದವಿಯನ್ನು ಎಸ್ ಎಮ್ ಎಸ್ ಬ್ರಹ್ಮಾವರ ಕಾಲೇಜಿನಲ್ಲಿ ಪೂರ್ಣ ಗೊಳಿಸಿದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಬಿ.ಎಡ್. ಅನ್ನು ಪೂರ್ಣಗೊಳಿಸಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ವರ್ಷದಿಂದ ತೊಡಗಿಸಿ ಕೊಂಡಿದ್ದಾರೆ. ಇವರು ಮೊದಲು ಬರೆದದ್ದು ಬೆರಳೆಣಿಕೆಯಷ್ಟು ಹನಿಗವನ ಮತ್ತು ಕತೆ. ರಾಜ್ಯ ಕವಿ ವೃಕ್ಷ ಪ್ರಶಸ್ತಿ, ವ್ಯಾಕರಣ ಚೂಡಾಮಣಿ ಪ್ರಶಸ್ತಿ ಅವರಿಗೆ ದೊರೆತ ಪ್ರಶಸ್ತಿಗಳಾಗಿವೆ. ಕೃತಿಗಳು : ಚಿಣ್ಣರ ಕನಸಿನ ಬಣ್ಣದ ಲೋಕ ,ಬೇವು ...
READ MORE