ಜ್ಹೀರೋ ಬ್ಯಾಲೆನ್ಸ್

Author : ಶ್ರುತಿ ಬಿ. ಆರ್.

Pages 88

₹ 100.00




Year of Publication: 2020
Published by: ಅರ್ನವ ಪ್ರಕಾಶನ
Address: ಶ್ರೀಮತಿ. ವೀಣಾ ಶಿವಮೂರ್ತಿ, ಹೇಮಗಿರಿ ನಿಲಯ, ಮಿನಿ ವಿಧಾನಸೌಧದ ಹಿಂದೆ, ಅರಸಿಕೆರೆ- 573103

Synopsys

‘ಜ್ಹೀರೋ ಬ್ಯಾಲೆನ್ಸ್’ ಕವಿ ಶ್ರುತಿ ಬಿ.ಆರ್ ಅವರ ಕವನ ಸಂಕಲನ. ಇದು ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಧನ ಸಹಾಯ ಪಡೆದ ಕೃತಿ. ಹಿರಿಯ ಕವಿ ಡಾ.ಎಚ್.ಎಲ್. ಪುಷ್ಪಾ ಅವರು ಬೆನ್ನುಡಿ ಬರೆದು‘ ಶ್ರುತಿ ಬಿ.ಆರ್. ವೃತ್ತಿಯಿಂದ ವಾಣಿಜ್ಯ ತೆರಿಗೆ ಅಧಿಕಾರಿ, ಪ್ರವೃತ್ತಿಯಿಂದ ಅಪ್ಪಟ ಕವಿ. ವೃತ್ತಿ ಪ್ರವೃತ್ತಿ ಎರಡೂ ಕೂಡಾ ಯಶಸ್ವಿ ಬದುಕಿನಲ್ಲಿ ಗೆಲ್ಲಲೇಬೇಕಾದ ಸಾಧ್ಯತೆಗಳು. ಕವಿತೆಗಳ ಕ್ಷೇತ್ರವನ್ನು ಕವಯತ್ರಿ ಗಂಭೀರವಾಗಿ ಅರಸಿಕೊಂಡಿದ್ದಾರೆ ಎನ್ನುವುದಕ್ಕೆ ಇಲ್ಲಿನ ಕವಿತೆಗಳು ಸಾಕ್ಷಿ. ಹೂವಿನ ಚೆಂದವನ್ನು ಧನ್ಯತೆಯಲ್ಲಿ ಬೀಗಿ ವರ್ಣಿಸುವ ಕವಿ ಬೆರಳಿಗೆ ಮುಳ್ಳು ಚುಚ್ಚಿ ಅದು ಚೆಲ್ಲುವ ಒಂದು ಹನಿ ಮುತ್ತಿನಂತಹ ರಕ್ತಬಿಂದುವನ್ನೂ ಸಹ ಗಮನಿಸಬೇಕು. ಆ ರಕ್ತದ ಬಿಂದು ವಿವಿಧ ವರ್ಗ, ವರ್ಣ, ಲಿಂಗಗಳಲ್ಲಿನ ಶರೀರದಲ್ಲಿ ಅಡಗಿರುವ ಕ್ರಮ, ದುಮದುಮನೆ ಒಳಗೇ ಕುದಿಯುವ ಕ್ರಮವನ್ನೂ ಸಹ ಅರಿತಿರಬೇಕು. ಹುಟ್ಟಿನ ಕಾರಣಕ್ಕೆ ಜಾತಿ, ಸಾಮಾಜಿಕ ಸ್ಥಾನ ಲಭ್ಯವಾಗಿರುವ ಚರಿತ್ರೆಯನ್ನೂ ಅರಿತಿರಬೇಕು. ಈ ಎಲ್ಲ ಚಲನವಲನವನ್ನು ಶ್ರುತಿಯವರ ಕಾವ್ಯ ದಾಖಲಿಸುತ್ತದೆ ಎನ್ನುತ್ತಾರೆ ಎಚ್.ಎಲ್. ಪುಷ್ಪಾ. ಶ್ರುತಿ. ಅವರ ಕಾವ್ಯದಲ್ಲಿ ವೇಗವಾಗಿ ಪ್ರವಹಿಸಿ ಎಲ್ಲವನ್ನೂ ತಲುಪಿ ಮೆಚ್ಚಿಸಬೇಕೆಂಬ ಹಠವಿಲ್ಲ. ತಾನು ನಿಂತ ವರ್ತಮಾನ ಹಾಗೂ ಭವಿಷ್ಯವನ್ನು ಕಾಣಬಲ್ಲ ಮುನ್ಸೂಚಿ ನೋಟಗಳಿವೆ ಎಂದೂ ಪ್ರಶಂಸಿಸಿದ್ದಾರೆ.

About the Author

ಶ್ರುತಿ ಬಿ. ಆರ್.

ಕವಿ ಮನಸ್ಸಿನ ಯುವ ಪ್ರತಿಭೆ ಶ್ರುತಿ ಬಿ. ಆರ್. ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಕೆ.ಎ.ಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನಸ ಗಂಗೋತ್ರಿಯ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ರ್‍ಯಾಂಕ್‌ ಮತ್ತು ಐದು ಚಿನ್ನದ ಪದಕಗಳೊಂದಿಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, 2017 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿದ್ದಾರೆ. ಅವರ ಹಲವಾರು ಲೇಖನಗಳು, ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2008ರಲ್ಲಿ ಪ್ರಜಾವಣಿ ದೀಪಾವಳಿ ವಿಶೇಷಾಂಕದ ಕವನ ಸ್ಪರ್ಧೆಯ ವಿದ್ಯಾರ್ಥಿ ವಿಭಾಗದ ಬಹುಮಾನ ದೊರೆತಿದೆ. ...

READ MORE

Related Books