ಲೇಖಕ ಟಿ. ಎಸ್. ಗೊರವರ ಅವರ ‘ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ’ - ಗದ್ಯ ರೂಪದ ಕವಿತೆಗಳು. ಕೃತಿಗೆ ಬೆನ್ನುಡಿ ಬರೆದಿರುವ ಮನು ವಿ. ದೇವದೇವನ್ ಅವರು “ಇಲ್ಲಿನ ಗದ್ಯಕವಿತೆಗಳು ಈ ಸಂದಿಗ್ಧದ ಆವಿಷ್ಕರಣೆಯನ್ನು ಅವರ ಕಾದಂಬರಿ, ಕಥೆಗಳಲ್ಲಿ ಕಾಣುವುದಕ್ಕಿಂತ ತೀವ್ರವಾಗಿ ನಡೆಸಿವೆ. ಹೊಸ ಭಾವನಿರ್ಮಿತಿಗೆ ಹೊಸ ರೂಪನಿರ್ಮಿತೆ ಏಕೆ ಮುಖ್ಯ ಎಂಬುದು ಗೊರವರ ಅವರ ಈವರೆಗಿನ ಕೃತಿಯನ್ನು ಈ ಹೊತ್ತಿಗೆಯ ಗದ್ಯಕವಿತೆಗಳೊಂದಿಗೆ ಹೋಲಿಸಿದಾಗ ಸ್ಪಷ್ಟವಾಗುತ್ತದೆ. ಬರಲಿರುವ ದಿನಗಳ ತಮ್ಮ ಸಾಹಿತ್ಯದಲ್ಲಿ ಗೊರವರ ಅವರು ಹೊಸ ರೂಪನಿರ್ಮಿತಿಯ ಈ ಕಾರ್ಯವನ್ನು ಮುಂದುವರೆಸಬೇಕೆಂಬುದು ನನ್ನ ಒತ್ತಾಯ” ಎಂದು ಈ ಗದ್ಯಕವಿತೆಗಳನ್ನು ಶ್ಲಾಘಿಸಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದ ಟಿ.ಎಸ್. ಗೊರವರ, 1984 ಜೂನ್ 10 ರಂದು ಜನಿಸಿದರು. ರಾಜೂರು, ಗಜೇಂದ್ರಗಡದಲ್ಲಿ ವಿದ್ಯಾಭ್ಯಾಸ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಪ್ರಕಟಿತ ಕೃತಿಗಳು. ತನ್ನ ಎದೆಯ ಮೆದುವನ್ನೇ ನಾದಿ ನಾದಿ ಮಿದ್ದು ಒಂದು ಹದದಲ್ಲಿ ಕೆತ್ತಿದಂತಿರುವ ಇವರ ...
READ MORE