‘ಬೇಲಿ ಮ್ಯಾಗಳ ಹೂವು’ ಜಾನಪದ ತಜ್ಞ, ಲೇಖಕ ಕುರುವ ಬಸವರಾಜ್ ಅವರ ಕವನ ಸಂಕಲನ. ಈ ಕೃತಿಗೆ ಡಾ.ಜಿ.ಎಸ್. ಶಿವರುದ್ರಪ್ಪ ಹಾಗೂ ಎಚ್.ಎಸ್.ಶಿವಪ್ರಕಾಶ ಅವರ ಬೆನ್ನುಡಿ ಇದೆ. ಕೃತಿಯ ಕುರಿತು ಬರೆಯುತ್ತಾ ‘ಈ ವೊತ್ತಿನ ಕನ್ನಡ ಕಾವ್ಯ ಸಂದರ್ಭದಲ್ಲಿ ಒಂದು ವಿಭಿನ್ನ ಪುಸ್ತಕ ಇದು. ಜಾನಪದ ಲೋಕದ ಬಸವರಾಜ್ ಮತ್ತೊಂದು ಜಾನಪದ ಲೋಕವನ್ನು ನಮ್ಮೆದುರಿಗೆ ತೆರೆದಿಟ್ಟಿದ್ದಾರೆ’ ಎಂದಿದ್ದಾರೆ ಜಿ.ಎಸ್. ಶಿವರುದ್ರಪ್ಪ. ಜೊತೆಗೆ ಈ ಸಂಕಲನ ತನ್ನ ವಸ್ತು ಹಾಗೂ ಭಾಷೆಯಿಂದ ಅಪ್ಪಟ ಜಾನಪದೀಯವಾದದ್ದು, ಅಷ್ಟೇ ಅಲ್ಲ ಬಹುಮಟ್ಟಿಗೆ ಎಲ್ಲ ಕವಿತೆಗಳೂ ಹೆಣ್ಣಿನ ಸ್ವಗತಗಳಾಗಿವೆ. ಈ ಕವಿತೆಯ ಕೇಂದ್ರ ವ್ಯಕ್ತಿಗಳೆಲ್ಲಾ ತಮ್ಮ ಪಾಡಿಗೆ ತಾವು ತಮ್ಮೊಳಗಿನ ದುಃಖವನ್ನು ಕುರಿತು ತಮಗೆ ತಾವೇ ಮಾತಾಡಿಕೊಳ್ಳುತ್ತವೆ. ನಾವು ಅದನ್ನು ಕೇಳಿಸಿಕೊಳ್ಳುತ್ತೇವೆ. ಇಂದಿನ ಕಾವ್ಯ ಸಂದರ್ಭದಲ್ಲಿ ತೀರಬೇರೆಯಾದ ಲಕ್ಷಣವನ್ನು ಪಡೆದುಕೊಂಡಿರುವ ಜನಪದ ಭಾಷೆಯನ್ನು ಮಾತನಾಡಿದಂತಿರುವ ಮುಕ್ತ ಛಂದಸ್ಸಿಗೆ ತಂದು. ಒಂದು ಅನುಭವ ಪ್ರಪಂಚವನ್ನು ಸಮರ್ಥವಾಗಿ ಕಟ್ಟಿಕೊಡುತ್ತಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...
READ MORE