ಕವಿ ರವಿಕುಮಾರ ಜಾಧವ ಅವರ ಕವನ ಸಂಕಲನ-“ಒಳಿತು ಕಡುಕುಗಳ ‘ಸಂತೆ’ ಮಾಲ್ ಗಳಲ್ಲಿ ಮಾರಾಟಕ್ಕಿದೆ’’. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ಅರುಣ ಜೋಳದ ಕೂಡ್ಲಿಗಿ ‘ತಮ್ಮ ಕಣ್ಣೆದುರಿನ ವ್ಯವಸ್ಥೆಯ ಬಗ್ಗೆ ಇರುವ ಸಾತ್ವಿಕ ಸಿಟ್ಟುಚೂರು ವಾಚ್ಯವಾಗಿ ಇಡೀ ಕವಿತೆಗಳಲ್ಲಿ ಒಂದೆಳೆಯಾಗಿ ಪೋಣಿಸಿದೆ. ಸಂತೆಯೇ ಮಾಲ್ ನಲ್ಲಿ ಮಾರಾಟಕ್ಕಿರುವ ಈ ಹೊತ್ತಿನ ಬಿಕ್ಕಟ್ಟು ಕವಿಯನ್ನು ಗಾಢವಾಗಿ ಕಾಡಿದಂತಿದೆ. ಇದುವೆ ಕವಿಯ ಬಗೆಗಿನ ಭರವಸೆ. ಪದವಿ ಹಂತದಲ್ಲಿ ಬರೆದ ಕವಿತೆಗಳಿರುವ ಕಾರಣ ಇನ್ನೂ ಮಾಗಬೇಕಾದ ಕವಿತೆಗಳ ಸಂಖ್ಯೆಯೂ ಹೆಚ್ಚಿದೆ’ ಎಂದು ಇಲ್ಲಿಯ ಕವನಗಳನ್ನು ವಿಶ್ಲೇಷಿಸಿದ್ದಾರೆ.
ಲೇಖಕ ರವಿಕುಮಾರ ಜಾಧವ (ಸೋನೆ) ಅವರು ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿ ಸಾಲವಾಡಗಿ ಗ್ರಾಮದವರು (ಜನನ: 25.07.1994) ತಾಳಿಕೋಟೆಯಲ್ಲಿ ಪಿಯುಸಿ, ಎಸ್. ಕೆ. ಕಲಾ ಮತ್ತು ವಾಣಿಜ್ಯ ಕಾಲೇಜು, ಬಿಎ ಪದವಿ, ಕನ್ನಡ ವಿ.ವಿ.ಯಿಂದ ಎಂಎ (ಕನ್ನಡ) ಪದವಿ ಪಡೆದರು. ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ವಿಮರ್ಶೆ ಕ್ಷೇತ್ರದಲ್ಲಿ 'ಕಾವ್ಯ ಕಣ್ಮಣಿ' ಮತ್ತು 'ಕಾವ್ಯಸಿರಿ' ಪ್ರಶಸ್ತಿ ಪುರಸ್ಕೃತರು. ರಾಷ್ಟ್ರ ಯುವ ಬರಹಗಾರರ ಒಕ್ಕೂಟ ರಾಣಿಬೆನ್ನೂರ ವತಿಯಿಂದ ಆಯೋಜಿಸಲ್ಪಟ್ಟ ಸ್ಪರ್ಧೆಯಲ್ಲಿ "ದುಡಿದು ತಿನ್ನುವ ಕೈಗಳು" ಕವಿತೆಗೆ ಪ್ರಥಮ ಸ್ಥಾನ ಬಂದಿದೆ. ‘ಅವಿಜ್ಞಾನಿ ...
READ MORE