ಈಶ್ವರ ಮಮದಾಪೂರ ಅವರ ಮೊದಲ ಹೈಕು ಸಂಕಲನ " ದಿಗಂತದ ಅಪ್ಪುಗೆ ". ಹಚ್ಚು ಹಸಿರಿನ ನಿಸರ್ಗ ಭೂಮಿ ದಿಗಂತದಲ್ಲಿ ಬಾನುದೊಂದಿಗೆ ಬೆಸೆದುಕೊಂಡಿದೆ. ದಿಗಂತದಲ್ಲಿಯ ಸೂರ್ಯ ನೋಟ, ದಿಗಂತದತ್ತ ಆಕಾಶದೆಡೆ ಹಾರುತ್ತಿರುವ ಹಕ್ಕಿಗಳು ತುಂಬಾ ಸೊಗಸಾಗಿ ಮೂಡಿ ಬಂದಿದೆ. ಈ ಕೃತಿಯಲ್ಲಿಯ ಹೈಕುಗಳು ತುಂಬಾ ಸೊಗಸಾಗಿ ಮೂಡಿ ಬಂದಿದ್ದು ಪ್ರೀತಿ , ಪ್ರೇಮ , ವಿರಹ , ನಿಸರ್ಗ , ವೈಚಾರಿಕತೆ , ಸಾಮಾಜಿಕ ಕಾಳಜಿ ಎಲ್ಲವನ್ನೂ ಒಳಗೊಂಡಿದ್ದು ವಿಶೇಷ. ಮೂಲತಃ ಜಪಾನ್ ಮೂಲದ ಈ ಪ್ರಕಾರ ಇಂದು ಕನ್ನಡದಲ್ಲಿ 5 + 7 + 5 = 17. ಮಾದರಿಯಲ್ಲಿ ಬಳಕೆಯಾಗುತ್ತಿದೆ. ನಾಡಿನ ಬಹುತೇಕ ಕವಿಗಳು ಈ ಹೈಕುಗಳನ್ನು ಬರೆಯುತ್ತಿದ್ದು ಅನೇಕರು ಹೈಕು ಕೃತಿಗಳನ್ನು ಹೊರತಂದಿದ್ದಾರೆ. ಇಲ್ಲಿ ಅಕ್ಷರಗಳ ಕಸರತ್ತು ಮತ್ತು ಅದರ ಭಾವ, ಅರ್ಥ ಮುಖ್ಯ ಎಂಬುದನ್ನು ಮರೆಯುವಂತಿಲ್ಲ. ಖ್ಯಾತ ಗಜಲ್ ಕವಯತ್ರಿ , ಹೈಕು ಬರಹಗಾರ್ತಿ ಕೊಪ್ಪಳದ ಶ್ರೀಮತಿ ಅರುಣ ನರೇಂದ್ರ ಇವರು ಈ " ದಿಗಂತದ ಅಪ್ಪುಗೆ " ಕುರಿತು ಕೃತಿಯಲ್ಲಿ ಮುನ್ನುಡಿಯನ್ನು ಬರೆದಿದ್ದು, ಇಲ್ಲಿನ ಹಾಯ್ಕುಗಳು ತನ್ನದೇ ಆದ ಚೌಕಟ್ಟಿನಲ್ಲಿವೆ. ಬಳಸಿದ ಭಾಷೆ, ಭಾವ, ವಸ್ತು, ಶೈಲಿ ಗಮನಾರ್ಹವಾಗಿ ಓದುಗನನ್ನು ಸೆರೆಹಿಡಿದು ಚಿಂತನೆಗೆ ಹಚ್ಚುತ್ತವೆ.ವೈವಿಧ್ಯಮಯ ವಿಷಯ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಪ್ರಯೋಗಾತ್ಮಕವಾಗಿ ಹಾಯಿಕು ಬರೆದಿದ್ದಾರೆ ಎಂದಿದ್ದಾರೆ.
ರತ್ನಾ ಕೃಷ್ಣ ಭಟ್ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಜಪಾನ್ ಶೈಲಯ ಹಾಯ್ಕು ಬರಹದ ಮೂಲಕ ತನ್ನದೇ ಸಾಹಿತ್ಯ ಪ್ರಕಾರದ ಪುಸ್ತಕವೊಂದನ್ನು ಹೊರತರಲು ಹೊರಟಿರುವುದು ಅತ್ಯಂತ ಸಂತಸದ ವಿಚಾರವೇ ಆಗಿದೆ. ಶ್ರೀಯುತರ ಬಹಳಷ್ಟು ಹಾಯ್ಕು ರಚನೆಗಳನ್ನು ಅಂತರ್ಜಾಲ ಜಾಲತಾಣಗಳಲ್ಲಿ ನಾನು ಓದಿರುವೆನು. ಸಮಾಜದ ಓರೆಕೋರೆಗಳ ವಿವಿಧ ಸ್ತರಗಳಲ್ಲಿ ಬರೆದ ಹಾಯ್ದುಗಳು ಭಾಷಾಶೈಲಿ, ವಾಸ್ತವದ ಹಿಡಿತ, ಅಗಿತವಿದ್ದು ಜನಮಾನಸದಲ್ಲಿ ಅಷ್ಟೊತ್ತುವುದರಲ್ಲಿ ಎರಡು ಮಾತಿಲ್ಲ. ಸೃಜನಶೀಲತೆಯ ಸಾಹಿತ್ಯ ಕೃಷಿ ಇವರದು. ಸಂವೇದನಶೀಲ ಸಾಹಿತ್ಯ ಲೇಖನಿಯಿಂದ ಹೊರಹೊಮ್ಮಿ, ಬದುಕಿನ ಚಿತ್ರಣಕ್ಕೆ ತೆರೆದು ಕೊಂಡು, ಇನ್ನಷ್ಟು, ಸಾಹಿತ್ಯ ಪ್ರಕಾರಗಳು, ಕೃತಿಯಾಗಿ ಬತ್ತಳಿಕೆಯಿಂದ ಹೊರಬರಲೆಂದು ಹಾರೈಸುವೆ. ಎತ್ತಣ ಮಾಮರ ಎತ್ತಣ ಕೋಗಿಲೆ ಅನಿಸದಿರದು ಎಂದಿದ್ದಾರೆ.
ಕವಿ, ಲೇಖಕ ಈಶ್ವರ ಮಮದಾಪೂರ ಅವರು ಬೆಳಗಾವಿ (ಜನನ: 01-07-1968) ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದವರು. ತಂದೆ- ವಿರೂಪಾಕ್ಷಪ್ಪ, ತಾಯಿ- ರತ್ನವ್ವ. ಕರ್ನಾಟಕ ಮಹಿಳಾ ಹಿಂದಿ ಸೇವಾ ಸಮಿತಿಯಿಂದ ಹಿಂದಿಯಲ್ಲಿ ಬಿ.ಎ ಪದವಿ ಪಡೆದಿದ್ದು, ಬೆಳಗಾವಿಯ ಕೆಎಲ್ ಇ ಶಿಕ್ಷಣ ಸಂಸ್ಥೆಯಿಂದ ಟಿಸಿಎಚ್ ಪೂರೈಸಿದ್ದಾರೆ. ಸದ್ಯ, ಗೋಕಾಕ್ ನ ಸರಕಾರಿ ಅನುದಾನಿತ ಶಾಲೆಯಲ್ಲಿ ಮುಖ್ಯಗುರುಗಳಾಗಿದ್ದಾರೆ. ಇವರ ಮೊದಲ ಗಜಲ್ ಕೃತಿ ‘ಗೋರಿಯೊಳಗಿನ ಉಸಿರು’ ಪ್ರಕಟಗೊಂಡಿದೆ. ಮಮದಾಪೂರ ಚುಟುಕುಗಳು, ಮಮದಾಪೂರ ಹನಿಗವಿತೆಗಳು, ಕಾವ್ಯಯಾನ(ಕವನ ಸಂಕಲನ ಸಂಪಾದನೆ) ಪ್ರಕಟವಾಗಿವೆ. ಗೋಕಾಕದ ಸಾಹಿತ್ಯ ಚಿಂತನ ಕಮ್ಮಟದ ಸ್ಥಾಪಕ ಸಂಚಾಲಕರು. ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ...
READ MORE