ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ

Author : ಶಾಂತಾ ಜಯಾನಂದ್

Pages 86

₹ 200.00




Year of Publication: 2021
Published by: ಕಾಜಾಣ ಪ್ರಕಾಶನ
Address: # 216, 5ನೇ ಮುಖ್ಯರಸ್ತೆ, ಕೆನರಾ ಬ್ಯಾಂಕ್ ಬಡಾವಣೆ, ಕೊಡಗೇಹಳ್ಳಿ, ವಿದ್ಯಾರಣ್ಯಪುರ, ಬೆಂಗಳೂರು-560097
Phone: 9483793275

Synopsys

‘ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ’ ಕೃತಿಯು ಶಾಂತಾ ಜಯಾನಂದ್ ಅವರ ಕವನಸಂಕಲನ. ಕೃತಿಗೆ ಮುನ್ನುಡಿ ಬರೆದಿರುವ ಖ್ಯಾತ ವಿಮರ್ಶಕ ಡಾ. ಟಿ. ಪಿ ಅಶೋಕ ‘ಶಾಂತಾ ಅವರ ಕವಿತೆಗಳಲ್ಲಿ ಹದಿಹರೆಯದ ಕವಿಯ ರಭಸ ಇಲ್ಲ ಬದಲಿಗೆ ಅಲ್ಲಿ ಜೀವನಾನುಭವದಿಂದ ಮಾಗಿದ ಗೃಹಿಣಿಯೊಬ್ಬಳ ಆತ್ಮಾವಲೋಕನವಿದೆ. ತನ್ನ ಇದುವರೆಗಿನ ಬದುಕನ್ನು ಕುರಿತ ಧ್ಯಾನವಿದೆ. ಹಾಗೆಯೇ ಕಾವ್ಯವೆಂದರೆ ಏನು ಎನ್ನುವ ಹುಡುಕಾಟವೂ ಇದೆ. ಸನ್ಮಾನ, ಕೀರ್ತಿಪತಾಕೆ, ಹಾರತುರಾಯಿಗಳಿಂದ ಯಾರೂ ಕವಿಗಳಾಗಿ ಬಿಡುವುದಿಲ್ಲ ಎಂಬ ಎಚ್ಚರ ಇದೆ. ಅಭಿವ್ಯಕ್ತಿಗೆ ಇಡೀ ಬದುಕಿದೆ' ಎಂಬ ಆತ್ಮವಿಶ್ವಾಸವಿದೆ. ಎಲ್ಲರಿಂದ, ಎಲ್ಲದರಿಂದ ಕಲಿಯುವ ವಿನಯವೂ ಇದೆ ಎಂದಿದ್ದಾರೆ. ಇಲ್ಲಿನ ಒಂದು ಕವಿತೆಯಲ್ಲಿ ಕವಿಯಾಗಲು ಪ್ರಯತ್ನಿಸುತ್ತಿರುವ ತಾಯಿ ಹೇಳುತ್ತಾಳೆ, ಪರ್ಯಾಯವಾಗಿ ಇದು ಶಾಂತಾ ಅವರ ಜೀವನದೃಷ್ಟಿ-ದರ್ಶನಗಳನ್ನೇ ಸೂಚಿಸುವ ಸಾಲುಗಳು ಎಂದು ಊಹಿಸಬಹುದಾಗಿದೆ. ಈ ಊಹೆಯನ್ನು ಸ್ಥಿರೀಕರಿಸುವ ಹಲವು ಸಾಲುಗಳು ಇಲ್ಲಿನ ಅನೇಕ ಕವಿತೆಗಳಲ್ಲಿ ಬೇರೆಬೇರೆ ಬಗೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹುಟ್ಟು-ಸಾವಿನ ನಡುವೆ, ಮಾತು-ಮೌನಗಳ ನಡುವೆ ಇರುವ ಹಲವು ವರ್ಣಗಳನ್ನು ಗುರುತಿಸಿ ಧ್ಯಾನಿಸುವುದು ಕವಿಯ ಮುಖ್ಯ ಬಯಕೆ-ಆಶಯ ಎನಿಸುತ್ತದೆ. `ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ' ಎಂಬ ಶೀರ್ಷಿಕೆಯೇ ಶಾಂತಾ ಅವರ ದೃಷ್ಟಿಯಲ್ಲಿ ಕವಿತೆ ಎಂದರೆ ಏನು ಎಂಬುದನ್ನು ಸೂಚಿಸುತ್ತದೆ. ಶಿವನ ಡಮರುಗ, ಗಂಗೆಯ ಹರಿವು, ಅಗ್ನಿಪರ್ವತದ ಸ್ಫೋಟ, ಹಿಮಾಲಯದ ಮೌನ ಇವುಗಳಲ್ಲಿ ಅವರು ಕಾವ್ಯವನ್ನು ಕಲ್ಪಿಸಿಕೊಂಡಿದ್ದಾರೆ. ಸ್ವತಃ ಅವರ ಕೆಲವು ಕವಿತೆಗಳಲ್ಲಿ ಈ ಛಾಯೆ ಸುಳಿಯುವುದು ಕಾಕತಾಳೀಯವಲ್ಲ. ಕವಿತೆಯೆಂದರೆ ಕೇವಲ ಪ್ರತಿಕ್ರಿಯಿಸುವುದಲ್ಲ ಎಂದು ಈ ಕವಿಗೆ ಗೊತ್ತಿದೆ. ಕವಿ ಮಾತಾಡಬಾರದು, ಕವಿತೆಯೇ ಮಾತಾಡಬೇಕು ಎಂಬ ಹಂಬಲವಿದೆ. ಮೋಡಗಳು ಮಳೆ ಸುರಿಸಿದಂತೆ, ಗಿಡಗಳಲ್ಲಿ ಹೂಗಳು ಅರಳುವಂತೆ ಸಹಜವಾಗಿರಬೇಕು ಎಂಬುದು ಕವಿಯ ಆಶಯವಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಶಾಂತಾ ಜಯಾನಂದ್

ಕವಯತ್ರಿ ಶಾಂತಾ ಜಯಾನಂದ್ ಅವರು ಮೂಲತಃ ಚಿಕ್ಕಮಗಳೂರು . ಜಿಲ್ಲೆಯ ತರೀಕೆರೆಯವರು. ಶಿವಮೊಗ್ಗದಲ್ಲಿಯೇ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪೂರೈಸಿದರು. ಬಾಲ್ಯದಿಂದಲೇ ಸಾಹಿತ್ಯ, ಕ್ರೀಡೆ, ನಾಟಕ ಮತ್ತು ಗಾಯನದಲ್ಲಿ ಆಸಕ್ತಿ. ಕಾಲೇಜು ದಿನಗಳಲ್ಲಿಯೇ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದ ಶಾಂತಾ ಜಯಾನಂದ್ ಅವರು ಸಾಹಿತ್ಯಿಕ ಚರ್ಚೆ, ಸಂಗೀತ, ಕಾವ್ಯರಚನೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಸಮಾಜಶಾಸ್ತ್ರ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ. ಎ ಪದವೀಧರರು. ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಎಂ. ಫಿಲ್ ಪದವಿ ಪೂರೈಸಿದ್ದಾರೆ. ದೂರದರ್ಶನದ ಚಂದನವಾಹಿನಿಯಲ್ಲಿ ನಿರೂಪಕಿಯಾಗಿ ಹಾಗೂ  ಡಾಕ್ಯುಮೆಂಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಎಂ.ಎಸ್ ರಾಮಯ್ಯ ಕಾನೂನು ಮತ್ತು ಮ್ಯಾನೇಜ್ ಮೆಂಟ್ ಕಾಲೇಜು ಹಾಗೂ ಇಂಡಿಯನ್ ...

READ MORE

Conversation

Related Books