ವಿ-ಕಿರಣಗಳು

Author : ಹಿಪ್ಪರಗಿ ಸಿದ್ದರಾಮ

Pages 94

₹ 110.00




Year of Publication: 2021
Published by: ಗಣಕರಂಗ ಪ್ರಕಾಶನ
Address: ಧಾರವಾಡ
Phone: 9845109480

Synopsys

‘ವಿ- ಕಿರಣಗಳು’ ಕೃತಿಯು ಹಿಪ್ಪರಗಿ ಸಿದ್ದರಾಮ ಅವರ ಕವನಸಂಕಲನವಾಗಿದೆ. ಇಲ್ಲಿಯ ಪ್ರತಿಯೊಂದು ಕವನವೂ ಕವಿಯ ಅನುಭವದ ಮೂಸೆಯಿಂದ ಮೂಡಿಬಂದಿದೆ. ಗಟ್ಟಿಗೊಂಡ ಭಾಷೆ, ಕಾವ್ಯಗಳಿಗೆ ಮೆರುಗು ನೀಡಿದೆ. ಪದಗಳ ಜೋಡಣೆ ಹಾಗೂ ಭಾಷೆಯನ್ನು ಮುರಿದುಕಟ್ಟುವ ಕಲೆ ಕರಗತವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಜಿನದತ್ತ ಹಡಗಲಿ ಅವರು, ಕಡಗೋಲಿನಿಂದ ಕಡೆದಾಗ ಮೊಸರಿನಿಂದ ಬೆಣ್ಣೆ ಬರುವ ಹಾಗೆ, ಅಂತರಂಗದಲ್ಲಿ ಗಿರ-ಗಿರನೆ ತಿರುಗಿದ ಅಕ್ಷರಗಳು ಪದಗಳಾಗಿ, ಪದಗಳು ಕಾವ್ಯರೂಪದಲ್ಲಿ ಜೋಡಣೆಗೊಂಡು ಹಾಳೆಯ ಮೇಲೆ ಮೂಡಿದಾಗ ಕವಿಯ ಮನಕ್ಕೆ ಆಗುವ ಸಂತೋಷ ಕವಿಹೃದಯವರಿಗೆ ಮಾತ್ರ ಗೊತ್ತು. ಇಲ್ಲಿಯ ಪ್ರತಿಯೊಂದು ಕವನಗಳೂ ಅವರ ಅನುಭವದಿಂದ ಮೂಡಿ ಬಂದವುಗಳಾಗಿವೆ. ಕೇವಲ ಕಲ್ಪನೆಯಿಂದ ರಚಿತಗೊಂಡ ಕಾವ್ಯಗಳು ಸಹೃದಯರ ಮನತಟ್ಟುವಲ್ಲಿ ಸೋಲುತ್ತವೆ. ಆದರೆ, ಅನುಭವಜನ್ಯದಿಂದ ಜನ್ಮ ತಾಳಿದ ಕಾವ್ಯಗಳು ಓದುಗರ ಮನವನ್ನು ತಟ್ಟಿ, ಮೆಚ್ಚುಗೆಗೆ ಪಾತವಾಗುತ್ತವೆ. ‘ಈಗಾಗಲೇ ...ಹೂ ಹಾಸಬೇಕಿದೆ' ಕವನ ಸಂಕಲನದ ಮೂಲಕ ಕಾವ್ಯ ಲೋಕವನ್ನು ಪ್ರವೇಶಿಸಿರುವ ಸಿದ್ಧರಾಮ ಹಿಪ್ಪರಗಿ ಅವರು, ತಮ್ಮ ಅನುಭವದ ಹಿನ್ನಲೆಯಲ್ಲಿ 'ವಿ-ಕಿರಣಗಳು' ಎಂಬ ಶೀರ್ಷಿಕೆಯ ಅಡಿಯಲ್ಲಿ 94 ಕವಿತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಸಾಹಿತ್ಯ, ಸಂಘಟನೆ, ಸಾಮಾಜಿಕ ಜಾಗೃತಿ, ರಂಗಭೂಮಿ, ಸಮಾಜ ಸೇವೆ ಮೊದಲಾದ ಚಲನಾತ್ಮಕ-ಕ್ರಿಯಾತ್ಮಕ ಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವ ಸಿದ್ಧರಾಮ ಹಿಪ್ಪರಗಿಯವರು, ಕೇವಲ ಒಬ್ಬ ಕವಿ ಮಾತ್ರವಾಗಿದ್ದರೆ ಇಷ್ಟೊತ್ತಿಗಾಗಲೇ ಹತ್ತೆಂಟು ಕವನ ಸಂಕಲನಗಳು ಹೊರಬರುತ್ತಿದ್ದವೇನೋ, ಆದರೆ ಅವರದು ಬಹುಮುಖ ವ್ಯಕ್ತಿತ್ವ, ಬಹುಮುಖಿ ಕಾರ್ಯಗಳು. ಹೀಗಾಗಿ ಅವರನ್ನು ನಿರ್ದಿಷ್ಟ ಕ್ಷೇತ್ರಕ್ಕೆ ಸೀಮಿತಗೊಳಿಸಲು ಆಗುವುದಿಲ್ಲ. ಪ್ರಸ್ತುತ ಸಂದರ್ಭದ ಸಾಮಾಜಿಕ ವ್ಯವಸ್ಥೆಯನ್ನು 'ವಿ-ಕಿರಣಗಳು’ ಕಾವ್ಯದ ಮೂಲಕ ತಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸಿದ್ದು ಹೀಗಿದೆ… ಅರಿವಿನ ನಡಾವಳಿಕೆಗಳಿಗೆ ಅಜ್ಞಾನಿಗಳ ನಡಾವಳಿಗಳು ! ಮರೆವಿನ ಮುಗ್ಧ ಮನಗಳಿಗೆ ಮನೆಮುರುಕರ ಮೋಸದಾಟಗಳು ಸೂಕ್ಷ್ಮಮನದ ಮನಃಸ್ಥಿತಿಗಳಿಗೆ ಕುತಂತ್ರಿಗಳಿಗೆ ಕಾರುಬಾರಿ ನಾಟಗಳು ! ಕಾವ್ಯ ಹೀಗೆಯೇ ಮುಂದುವರಿಯುತ್ತದೆ. ಇದು ಅನುಭವದ ಭಾವನೆಗಳನ್ನು ವ್ಯಕ್ತಪಡಿಸಿದ ಪರಿ, ನಿತ್ಯವೂ ಕೂಡ ಇಂತಹ ಘಟನೆಗಳನ್ನು, ವ್ಯಕ್ತಿಗಳನ್ನು ಕಂಡಿರುವ, ಕಾಣುತ್ತಿರುವ ಕವಿಯ ಮನಸ್ಸು ಕಾವ್ಯರೂಪದಲ್ಲಿ ಸೆರೆಹಿಡಿದಿದೆ. ಕೊನೆಯಲ್ಲಿ, ಬೇಕು ಸರ್ವಶೋಷಿತ ಸಮುದಾಯಗಳಿಗೆ ಕತ್ತಲ-ಬೆಳದಿಂಗಳಲಿ ಹೊರಸೂಸುವ ವಿ-ಕಿರಣಗಳು ಎಂದು ಹೇಳುವಲ್ಲಿ ಶೋಷಿತ ಜನರ ಬಗ್ಗೆ ಇರುವ ಕಳಕಳಿ ವ್ಯಕ್ತವಾಗಿದೆ.

About the Author

ಹಿಪ್ಪರಗಿ ಸಿದ್ದರಾಮ

ಲೇಖಕ,ಕವಿ ಹಿಪ್ಪರಗಿ ಸಿದ್ದರಾಮ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ  ಕೆರೂಟಗಿ ಗ್ರಾಮದವರು. ಪ್ರಸ್ತುತ ಧಾರವಾಡದಲ್ಲಿ ಗಣಕರಂಗ ಸಂಸ್ಥೆಯ ಮೂಲಕ ಸಾಹಿತ್ಯ, ರಂಗಭೂಮಿ, ಕಿರುತೆರೆ-ಹಿರಿತೆರೆ, ಸಂಘಟನೆ, ಬೀದಿನಾಟಕ,ಜನಜಾಗೃತಿ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಬಿಡಿ ಲೇಖನಗಳು,ಕವನ, ಲೇಖನಗಳು ಕನ್ನಡ ಬ್ಲಾಗಿನಲ್ಲಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ನಾಟಕ, ಧಾರವಾಹಿ, ಚಲನಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. ತಾವು ಬರೆದ ನಾಟಕಗಳನ್ನು ನಿರ್ದೇಶಿಸಿದ್ದಾರೆ.  ಕೃತಿಗಳು; ಹೆಸರಿಲ್ಲದವರು, ಹೂ ಹಾಸಬೇಕಿದೆ, ವಿಕಿರಣಗಳು (ಕವನ ಸಂಕಲನಗಳು), ಸೂರ್ಯಮಾನ್ಯ, ಕಾಶೀಬಾಯಿ ಕೇರಾಪ್‌ ಸಾವಿತ್ರಿಬಾಯಿ, ಮೈಲಾರಲಿಂಗೇಶ್ವರ, ರಮಾಬಾಯಿ, ಪೂನಾಒಪ್ಪಂದ, ಅರೋಗ್ಯ ಭಾಗ್ಯ, ಬಾಬೂಜಿ, ದಾನಮ್ಮನ ಕನ್ನಡ ...

READ MORE

Related Books