ಲೇಖಕ,ಕವಿ ಹಿಪ್ಪರಗಿ ಸಿದ್ದರಾಮ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೆರೂಟಗಿ ಗ್ರಾಮದವರು. ಪ್ರಸ್ತುತ ಧಾರವಾಡದಲ್ಲಿ ಗಣಕರಂಗ ಸಂಸ್ಥೆಯ ಮೂಲಕ ಸಾಹಿತ್ಯ, ರಂಗಭೂಮಿ, ಕಿರುತೆರೆ-ಹಿರಿತೆರೆ, ಸಂಘಟನೆ, ಬೀದಿನಾಟಕ,ಜನಜಾಗೃತಿ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಬಿಡಿ ಲೇಖನಗಳು,ಕವನ, ಲೇಖನಗಳು ಕನ್ನಡ ಬ್ಲಾಗಿನಲ್ಲಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ನಾಟಕ, ಧಾರವಾಹಿ, ಚಲನಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. ತಾವು ಬರೆದ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಕೃತಿಗಳು; ಹೆಸರಿಲ್ಲದವರು, ಹೂ ಹಾಸಬೇಕಿದೆ, ವಿಕಿರಣಗಳು (ಕವನ ಸಂಕಲನಗಳು), ಸೂರ್ಯಮಾನ್ಯ, ಕಾಶೀಬಾಯಿ ಕೇರಾಪ್ ಸಾವಿತ್ರಿಬಾಯಿ, ಮೈಲಾರಲಿಂಗೇಶ್ವರ, ರಮಾಬಾಯಿ, ಪೂನಾಒಪ್ಪಂದ, ಅರೋಗ್ಯ ಭಾಗ್ಯ, ಬಾಬೂಜಿ, ದಾನಮ್ಮನ ಕನ್ನಡ ತೂಷನ್ ಕ್ಲಾಸ್, ಭಾರತದ ಪ್ರಜೆಗಳಾದ ನಾವು (ನಾಟಕಗಳು), ನೆನಪುಗಳು, ಸಂಬಂಧಗಳು (ಕಥಾ ಸಂಕಲನ).
ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ, ಜ್ಯೋತಿ ಭಾಪುಲೆ ಪುರಸ್ಕಾರ, ಡಾ. ರಾಜಕುಮಾರ ಪ್ರಶಸ್ತಿ ಲಭಿಸಿದೆ.