ತುಯ್ತವೆಲ್ಲ ನವ್ಯದತ್ತ

Author : ರಘುನಂದನ

Pages 264

₹ 300.00




Year of Publication: 2024
Published by: ಥೀಯೆಟರ್ ತಾತ್ಕಲ್ ಬುಕ್ಸ್
Address: #28, Good Earth Malhar, Kambipura, kengeri, bengaluru 560074

Synopsys

“ತುಯ್ತವೆಲ್ಲ ನವ್ಯದತ್ತ” ಅಂದತ್ತರ ಉಯ್ಯಾಲೆ ರಘುನಂದನ ಅವರ ಕೃತಿಯಾಗಿದೆ. ಹಲವು ಕವಿತೆಗಳ ಸಾರವನ್ನು ಇಲ್ಲಿ ನೀಡಲಾಗಿದೆ. ಕೃತಿ ಕುರಿತು ಕವಿ ರಘುನಂದನ ಹೀಗೆ ಹೇಳುತ್ತಾರೆ; ಈ ಪುಸ್ತಕದ ಅತಿದೀರ್ಘ ಕಂಡಿಕೆ ಎಂದರೆ ಅನುಭಾವ, ಅನಭೂತಿ, ಆಧ್ಯಾತ್ಮ, ಅಧಿಭೂತತೆ ಎಂಬವುಗಳ ತತ್ತ್ವಜಿಜ್ಞಾಸೆ. ಆ ತತ್ತ್ವಶೋಧದ ಭಾಗವಾಗಿ ಕಳೆದ ಶತಮಾನ ಹಾಗೂ ನಾವಿರುವ ಶತಮಾನ, ಈ ಎರಡು ಶತಮಾನಗಳ ಕೆಲವು ಮುಖ್ಯ ಸಾಮಾಜಿಕ-ರಾಜಕೀಯ ಆಗುಹೋಗು, ವಿಚಾರ ಮತ್ತು ತತ್ತ್ವಗಳನ್ನು ನಿರುಕಿಸಬೇಕಾಗಿ ಬಂತಲ್ಲದೆ ಅವುಗಳನ್ನು ಆಧರಿಸಿ ನಾವು ಮನುಷ್ಯರು ತಳೆಯುವ ನಿಲುವುಗಳನ್ನು ಪರೀಕ್ಷಿಸಬೇಕಾಯಿತು. ಕಾವ್ಯದ ಮತ್ತು ಇತರ ಸಾಹಿತ್ಯದ ಓದಿಗೆ-ಮಾನುಷ ಬದುಕಿನ ತಿಳಿವಿಗೇ ಆ ಬಗೆಯ ಜಿಜ್ಞಾಸೆ ಬೇಕು, ಅದು ಅನಿವಾರ್ಯವೇ ಆದದ್ದು. ಆದ್ದರಿಂದ ಈ ಪುಸ್ತಕವನ್ನು ಮತ್ತು ಮೇಲೆ ಹೇಳಿದ ಆ ಕಂಡಿಕೆಯನ್ನು ಸಾವಧಾನ ಓದುವ ಯಾರಿಗೂ ಅಂಥದಕ್ಕೆ ಇಲ್ಲಿ ತಾವಿಲ್ಲ, ಇರಕೂಡದಿತ್ತು, ಇದ್ದರೂ ಅದು ಈಗಿರುವಷ್ಟು ಉದ್ದ ಚಾಚಿಕೊಳ್ಳಬಾರದಿತ್ತ, ಇಷ್ಟೊಂದೆಲ್ಲ ತಾವು ತಿನ್ನಬಾರದಿತ್ತು ಅನ್ನಿಸುವುದಿಲ್ಲ ಎಂದುಕೊಂಡಿದ್ದೇನೆ.

About the Author

ರಘುನಂದನ

ಕವಿ, ನಾಟಕಕಾರ ರಘುನಂದನ ವೃತ್ತಿನಿರತ ನಿರ್ದೇಶಕ, ರಂಗಕಲೆಯ ಅಧ್ಯಾಪಕರು. ಸಮುದಾಯ ಸಂಘಟನೆಯಲ್ಲಿ ಹಲವು ವರ್ಷಗಳ ಕಾಲ ತೊಡಗಿಕೊಂಡಿದ್ದು, ಕನ್ನಡ ನಾಡಿನ ಉದ್ದಗಲ ಕೆಲಸಮಾಡಿದ್ದಾರೆ. ಬಳಿಕ ಮೈಸೂರಿನ ರಂಗಾಯಣದಲ್ಲಿ, ಅದು ಆರಂಭಗೊಂಡಾಗಿ ನಿಂದ ತೊಡಗಿ, ಹನ್ನೆರಡು ವರ್ಷಗಳ ಕಾಲ ಅಭಿನಯ ಶಿಕ್ಷಕರಾಗಿದ್ದರಲ್ಲದೆ, ಆ ಸಂಸ್ಥೆಯದೇ ನಾಟಕಕಾರರಾಗಿದ್ದರು. ಅಲ್ಲಿನ ರಂಗನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಹಲವು ದಶಕಗಳಿಂದ ನೀನಾಸಮ್ ಸಂಸ್ಥೆಯ ಒಡನಾಡಿ ಆಗಿದ್ದು, ಸಂಸ್ಥೆ ನಡೆಸುವ ರಂಗಶಿಕ್ಷಣ ಕೇಂದ್ರದಲ್ಲಿಯೂ, ತಿರುಗಾಟ ತಂಡದಲ್ಲಿಯೂ ಅಧ್ಯಾಪನ, ರಂಗನಿರ್ದೇಶನ ಮಾಡಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆ, ನವದೆಹಲಿ, ಮತ್ತು ತ್ರಿಶ್ಶೂರ್ ನಾಟಕ ಶಾಲೆ, ಕೇರಳ-ಇವುಗಳಿಂದ ಮೊದಲುಗೊಂಡು ಹಲವು ಸಂಸ್ಥೆಗಳಲ್ಲಿ ಅನೇಕ ವರ್ಷ ಸಂದರ್ಶಕ ಪ್ರಾಧ್ಯಾಪಕರಾಗಿ, ...

READ MORE

Related Books