ಈ ಕವನ ಸಂಕಲನದಲ್ಲಿ 60 ಕವನಗಳಿವೆ. ವಿಭಿನ್ನ ದೃಷ್ಠಿಕೋನದಿಂದ ಕೂಡಿರುವ ಇಲ್ಲಿನ ಕವಿತೆಗಳು ಪ್ರಕೃತಿ, ತಾಯಿ, ಸ್ನೇಹ, ಸಂಬಂಧ, ಸೌಹಾರ್ದತೆಗಳನ್ನು ಒಳಗೊಂಡಿದ್ದು. ಇದೇ ಈ ಕವನಗಳ ವಸ್ತುವಿಷಯವಾಗಿದೆ. ಈ ಕವನಸಂಕಲನದಲ್ಲಿರುವ ’ದೀಪ’ ಕವನದಲ್ಲಿ ಬೆಳಕು ಬಯಕೆಯಲ್ಲ, ಕತ್ತಲು ತಿಳಿದೆಯಿಲ್ಲ, ಉರಿವೆ ನೋವ ನುಂಗಿ ಕವಿ ಎಣ್ಣೆ ಮುಗಿಯುವವರೆಗೂ ಎನ್ನುವ ಸಾಲುಗಳಲ್ಲಿ ವಿಷಾದದ ಛಾಯೆ ಎದ್ದು ಕಾಣುತ್ತದೆ. ’ಅವಳು’ ಕವನದಲ್ಲಿನ ಕನಸಲ್ಲಿ ಹುಟ್ಟಿದ್ದು ಕತೆಯಾಗಿ ಬರೆಯೋಕೆ ಕವಿಯಾಗ ಬೇಕಿಲ್ಲ, ಮನಸಲ್ಲಿ ಹುಟ್ಟಿದ್ದ ಮೊಳಕೇನ ಒಡೆಯೋಕೆ ಮಳೆಯಾಗಬೇಕಿಲ್ಲ ಸಾಲುಗಳು ಗೇಯ ಗೀತೆಯಂತಿದ್ದು, ಮನಸ್ಸಿಗೆ ಮುದ ನೀಡುತ್ತದೆ. ’ಹೆಣ್ಣು’ ಕವನದ ಪದ ಪದಗಳಲ್ಲಿ ಸ್ತ್ರೀಯ, ಅಸಹಾಯಕತೆ, ನೋವು , ಹತಾಶೆ ನಿಟ್ಟುಸಿರು ವ್ಯಕ್ತವಾಗಿದೆ. ಒಟ್ಟಾರೆಯಾಗಿ ಈ ಕವನಸಂಕಲನದಲ್ಲಿರುವ ಗ್ರಾಮೀಣ ಸೊಗಡಿನ ಅರ್ಥಪೂರ್ಣ ಕವನದ ಸಾಲುಗಳು ಮನದಲ್ಲಿ ಉಳಿಯುತ್ತವೆ. ದೀಪ ಹೆಣ್ಣು, ಅಗಲಿಕೆ ತಾಯಿಗರ್ಭದಿಂದ ಭೂಗರ್ಭದವರೆಗೂ ಕವನಗಳು ನಮ್ಮ ಭಾವನೆಗಳನ್ನು ಮೀಟುವಂತಿದೆ.
ದರುಶನ ಕಾವ್ಯನಾಮದ ದರ್ಶನ್.ಹೆಚ್. ಎಸ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊಸಕೊಡಿಗೆ ಗ್ರಾಮದವರು. ‘ನಿಟ್ಟೆ’ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವೀಧರರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃತಿಗಳು: ತಾಯಿಗರ್ಭದಿಂದ ಭೂಗರ್ಭದವರೆಗೂ (ಕವನಗಳ ಸಂಕಲನ-2017) ...
READ MORE