ಸ್ವರ್ಗ ನಿಸರ್ಗ ಕೃತಿಯು ’ ದಿನೇಶ ಎನ್. ಅಮ್ಮಿನಳ್ಳಿ ಅವರ ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ವಾಣಿ ಭಂಡಾರಿ ಶಿವಮೊಗ್ಗ ಅವರು, ರವಿಯು ನಿತ್ಯವೂ ಬೆಳಗುತಿರಲು ಪ್ರಕೃತಿಯ ಒಡಲಾಳದಲ್ಲಿ ಇರುವ ಲಕ್ಷಾಂತರ ಜೀವಜಂತುಗಳಿಗೆ ಭಾಸ್ಕರನ ಹೊಂಗಿರಣಗಳೊಂದಾಗಿ ಬಾಡಿದ ಮೊಗದಲ್ಲಿ ಹಿಡಿಯಷ್ಟಾದರೂ ನಗೆಮೊಗ್ಗು ಚೆಲ್ಲಲ ಎಂಬ ನಿಸರ್ಗ ಕವಿ" ಗಳ ಮಹೋನ್ನತವಾದ ಆಶಯವು ಬೆಳಗಿನ ಕವಿತೆಗಳ ಮೂಲಕ ಸಹೃದಯರನ್ನು ತಲುಪುತ್ತಾ, ಸಂಭ್ರಮವನ್ನುಂಟು ಮಾಡುತ್ತದೆ. ಹೀಗೆ ದಿನ ದಿನವೂ ಬೆಳಗಿನ ನವಿರುಕಿರಣಕೊಂದು ಹೊಸ ಕವಿತೆ ಎಂಬಂತೆ ನವನತನತೆಯ ನಿಸರ್ಗವನ್ನು ಆಹ್ವಾದಿಸುತ್ತಾ, ರವಿಯನ್ನು ಧ್ಯಾನಿಸುತ್ತಾ, ಆರಾಧಿಸುತ್ತಾ, ಮೌನದೊಳಗೆ ಧ್ಯಾನಿಯಾಗಿ ಸಹೃದಯ ರಸಿಕರನ್ನು ರಂಜಿಸುವ ಕವಿ ಹೃದಯವು ನಿಸರ್ಗ ಕವಿಗಳಾಗಿ ಹೊರಹೊಮ್ಮಿರುವುದು ಅವರ ನೈಜ್ಯ ಕಾವ್ಯ ಸಂಪತ್ತಿನ ದ್ಯೋತಕವೆನ್ನಬಹುದು ಎಂದಿದ್ದಾರೆ. ಹಚ್ಚ ಹಸಿರಿನ ಬೆಚ್ಚನೆಯ ಸಿರಿ-ಝರಿ, ಕೆರೆ-ಕೊಲೆ, ಹಳ್ಳ-ಕೊಳ್ಳ ಬನ~ವನಗಳ ನಡುವೆ ಕಾವ್ಯ ಕುಸುಮವಾಗಿ ಕಂಗೋಪ ದಿನೇಶ್ ಅವರು ನಾ ಕಂಡಂತೆ ಈಗಾಗಲೇ ಬೆಳಗಿನ ಕುರಿದಾಗಿಯದಿರುವ ಕವಿತೆಗಳ ಸಂಖ್ಯೆ ಒಂದು ಸಾವಿರಕ್ಕಿಂತಲೂ ಮಿಗಿಲಾಗಿದೆ ಎಂಬುದು ಹೆಮ್ಮೆಯ ವಿಷಯ. ಕವಿಯ ಅನುಭವದ ಮೂಲದ ವಕ್ರತೆಯೇ (ಪ್ರತಿಭೆ ಇಡೀ ಕಾವ್ಯವನ್ನು ತನ್ನೊಳಗೆ ಸೆಳೆದುಕೊಳ್ಳುತ್ತದೆ. ಒಂದು ಅಕ್ಷರದಿಂದ ಹಿಡಿದು ವರ್ಣನೆಯವರೆಗೆ ಕಾವ್ಯಕ್ಕೆ ಹೆಸರು ಇಡುವುದರಿರಿದ ಬಂಧಗಳ ಪಾತ್ರದ ವರ್ಣನೆ ಸನ್ನಿವೇಶ ಅಲಂಕಾರ ಎಲ್ಲಾ ಹಂತಗಳಲ್ಲಿ ವಕ್ರಕವಿ ವ್ಯಾಪಾರವೇ ಕಂಡುಬರುತ್ತದೆ. ನವಿಲನ ಮೊಟ್ಟೆಯಲ್ಲಯೇ ಅದರ ಸುಂದರ ಗರಿಯು ಅಡಗಿರುವಂತೆ ನಂತರ ಪಡೆದ ಅಲಂಕಾರದ ಆಭರಣದಂತೆಲ್ಲ ಅತ್ಯಂತ ಸಹಜವಾಗಿ ಹಾಗೆಯೇ ಪಡೆದ ಅಲಂಕಾರಗಳು ಸಹಜೋಕ್ತಿಗಳೇ ಆಗಿರುತ್ತವೆ. ಕುಂತಕನ ಪರಿಭಾಷೆಯಲ್ಲಿ ವಕ್ರೋಕ್ತಿ ಎಂದರೆ ತಿರುವು ನುಡಿಯಲ್ಲ ಅಂಕುಡೊಂಕು ನುಡಿಯಲ್ಲಿ ಲೋಕೋತ್ತರವಾದ ಮನೋಹರವಾದ ಉಕ್ತಿ ಎಂದರ್ಥವಾಗುತ್ತದೆ. ಹೀಗೆ ವ್ಯವಸ್ಥಿತವಾದ ಬಂಧಕ್ಕೆ ಒಳಪಟ್ಟು ಆಹ್ಲಾದವನ್ನುಂಟು ಮಾಡುವ ಶಬ್ದಾರ್ಥಗಳು ಇಲ್ಲಿ ಕಾವ್ಯವಾಗಿವೆ ಎನ್ನುತ್ತಾರೆ.
ಲೇಖಕ ದಿನೇಶ್ ಎನ್. ಮಡಿಪಾಳ ಅಮ್ಮಿನಳ್ಳಿ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಮ್ಮಿನಳ್ಳಿಯವರು. ವೃತ್ತಿಯಲ್ಲಿ ಕಾರ್ಮಿಕರು. ಕವನ, ಕತೆ, ಲೇಖನ, ಗಝಲ್, ಹನಿಗವನ, ನ್ಯಾನೊ ಕತೆ, ಚುಟುಕು ರುಬಾಯಿ, ಹಾಯ್ಕು, ಟಂಕಾ ಮತ್ತು ಭಾವಗೀತೆಗ ರಚನೆಯಲ್ಲಿ ಆಸಕ್ತರು. ಕೃತಿಗಳು: ಸ್ವರ್ಗ ನಿಸರ್ಗ ...
READ MORE