‘ಸೋರೆ ದೋಣಿಯ ಗೀತ’ ಕೃತಿಯು ರಂಗನಾಥ ಕಂಟನಕುಂಟೆ ಅವರ ಕವನಸಂಕಲನವಾಗಿದೆ. ಇಲ್ಲಿ ಲೇಖಕರ ವ್ಯಕ್ತಿತ್ವಕ್ಕೆ ತೀರ ಭಿನ್ನವೆಂಬಂತೆ ವೈಯುಕ್ತಿಕ ಎನ್ನಬಹುದಾದ ಲೋಕವೊಂದು ತರ್ಕಾತೀತವಾದ ಚಿತ್ರಗಳಲ್ಲಿ ಬರುತ್ತದೆ. ಈ ಚಿತ್ರಗಳಿಗಾಗಿ ಅವರು ಭೂಮಿ ಗಗನವನ್ನು ಜಾಲಾಡುವ ಬಗೆಯಲ್ಲಿ ಕವನ ಬರೆಯುತ್ತಾರೆ. ಅದನ್ನು ನಾವು ಇಲ್ಲಿನ ಆರ್ತತೆ, ತಲ್ಲಣ, ಪ್ರಶ್ನೆ, ವಿಸ್ಮಯ, ಹಾಗೂ ಕನಸುಗಳಲ್ಲಿ ಕಾಣಬಹುದು. ಇಲ್ಲಿನ ಅವ್ವ, ಗೆಳತಿಯರು ಕವಿತೆಯ ನಾಯಕನ ವೈಯುಕ್ತಿಕ ಬಾಳಿನ ಹಾಸನ್ನು ದಾಟಿ ಲೋಕದ ವ್ಯಕ್ತಿಗಳಾಗಿ ಬದಲಾಗುವ ರೂಪಾಂತರ ಕ್ರಿಯೆಯಿದೆ. ಒಟ್ಟಿನಲ್ಲಿ ಇಲ್ಲಿನ ಕವಿತೆಗಳಲ್ಲಿ ಬಹಳ ಸೂಕ್ಷ್ಮವಾದ ಮನಸ್ಸೊಂದು ಕೆಲಸ ಮಾಡಿದೆ.
ಕವಿ, ಲೇಖಕ, ಚಿಂತಕರಾದ ರಂಗನಾಥ ಕಂಟನಕುಂಟೆಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕಂಟನಕುಂಟೆಯಲ್ಲಿ ಪೂರ್ಣಗೊಳಿಸಿದ ರಂಗನಾಥ್ ಅವರು ಸರ್ಕಾರಿ ಪದವಿ ಪೂರ್ಣ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಪಿಯುಸಿ ಮುಗಿಸಿ, ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು ಎಂಬ ವಿಷಯದಡಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. ಕಳೆದ ಇಪತ್ತು ವರ್ಷಗಳಿಂದ ಅಧ್ಯಾಪಕರಾಗಿ ...
READ MORE