`ಸಿಂಬಿ’ ಪ್ರತಿಭಾ ಪಾಟೀಲ ಅವರ ಕವನ ಸಂಕಲನವಾಗಿದೆ. ಇದಕ್ಕೆ ಸವಿತಾ ನಾಗಭೂಷಣ ಶಿವಮೊಗ್ಗ ಅವರ ಬೆನ್ನುಡಿ ಬರಹವಿದೆ; "ಸಿಂಬಿ" ಕವನ ಸಂಕಲನದಲ್ಲಿಯ 'ಸೃಷ್ಟಿ', 'ದೊಂಬರದ ಕಲಾವಿದೆ', 'ಅವಳಿಗೆಲ್ಲಿ ಸಮಯವಿತ್ತು', 'ಅವ್ವನ ತಿಜೋರಿ', 'ಅವಳೆಂಬ ಅಸ್ತಿತ್ವದ ಗುಟ್ಟು ಈ ಮುಟ್ಟು', ಹಾಗೂ 'ಸಿಂಬಿ' ಕವನಗಳು ನನ್ನ ಭಾವಕೋಶವನ್ನು ನಿಜಕ್ಕೂ ಹಿಗ್ಗಿಸಿದವು. 'ಗೊರಕೆಯ ಗೋಷ್ಠಿ' ಎಂಬ ಕವನವು ತುಟಿ ಬಿರಿಯುವಂತೆ ಮಾಡಿತು. ಎಲ್ಲ ಎಳೆಯರ ಕವನಗಳನ್ನು ನೋಡಿದಾಗ, ಅರೆ!!! ಪ್ರಥಮ ಸಂಕಲನದಲ್ಲಿ ನನಗಿಂತ ಇವರೇ ಗಟ್ಟಿಯಾಗಿ ಬರೆದಿರುವರು ಎಂದು ಸದಾ ನನಗೆ ಅನ್ನಿಸುವುದು. ನಿಮ್ಮ ಒಟ್ಟು ಕವನಗಳನ್ನು ನೋಡಿದಾಗ ನನಗೆ ಹಾಗೇ ಅನ್ನಿಸಿತು!!! ನಿಮ್ಮಲ್ಲಿ ವಿಶ್ವಾಸ ಇಟ್ಟುಕೊಂಡು ಬರೆಯಿರಿ. ಬಿದಿಗೆಯ ಚಂದ್ರನಂತೆ ಅವು ಬಲಿದು ಹಿಗ್ಗಲಿ.
ಕವಿ, ಲೇಖಕಿ ಪ್ರತಿಭಾ ಪಾಟೀಲರು ಮೂಲತಃ ಸಾಹಿತ್ಯದ ತವರು ಮನೆ ಎಂದೇ ಖ್ಯಾತಿ ಪಡೆದಿರುವ ಧಾರವಾಡ ನಗರದ ಮನೆ ಮಗಳಾಗಿ, ಗೊಮ್ಮಟ ನಗರಿ ಎಂದೇ ಪ್ರಸಿದ್ದವಾದ ವಿಜಯಪುರ ಜಿಲ್ಲೆಯ ಗೂಗಧಡಿ ಗ್ರಾಮದವರು. ಎಂ.ಎ, ಬಿ.ಇಡಿ. ಪದವಿಧರೆಯಾದ ಶ್ರೀಮತಿ ಪ್ರತಿಭಾ ಪಾಟೀಲ ಅವರು 7 ವರ್ಷಗಳ ಕಾಲ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದು, ಸುಮಾರು 9 ವರ್ಷಗಳಿಂದ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನೇಕ ಕಥೆ, ಕವನ, ಲೇಖನ, ಚುಟುಕುಗಳನ್ನು ಬರೆದಿದ್ದಾರೆ. ಹಾಗೂ ಅನೇಕ ಪುಸ್ತಕಗಳನ್ನು ವಿಮರ್ಶೆ ಕೂಡಾ ಮಾಡಿದ್ದಾರೆ. ಕಾಲೇಜು ದಿನಗಳಿಂದಲೇ ಕವನಗಳನ್ನು ಬರೆಯುವ ಹವ್ಯಾಸ ಹೊಂದಿದ್ದ ಇವರು ಆ ಪ್ರತಿಭೆಯನ್ನು ಈಗಲೂ ...
READ MORE