ಕವಿ ಈರಪ್ಪ ಬಿಜಿಲಿ ಅವರ ಭಾವಗೀತೆಗಳ ಸಂಕಲನ ಶ್ವೇತ ಹೃದಯ. ಈ ಸಂಕಲನದಲ್ಲಿ 64 ಭಾವಗೀತೆಗಳಿವೆ. ಚಲನಚಿತ್ರ ಸಾಹಿತಿ ಸುರೇಶ ಕಂಬಳಿ ಅವರು ಈ ಕೃತಿಗೆ ಮುನ್ನುಡಿಯ ಂಆತುಗಳನ್ನು ಬರೆದಿದ್ದು, ಇಲ್ಲಿನ ಕವಿತೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ.ಹೃದಯವನ್ನು ಭಾವದ ಮಳೆಯಲ್ಲಿ ತೇಲಿಸುತ್ತವೆ. ಇವರಿಗೆ ಜೀವನ ಅನುಭವದ ದ್ರವ್ಯವಿದೆ. ಪಕ್ವತೆಯಿದೆ ಎಂಬುದಾಗಿ ಹೇಳಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ವೀರ ಗಣೇಶ, ಒಲವ ತೇರು,ಹೃದಯ ನರ್ತನ, ಶ್ರಾವಣ, ರಾಣಿ ಜೇನಿನ ಬಯಕೆ, ಜಯದುರ್ಗೆ, ನಲ್ಲೆಯ ಅಂತರಾಳ, ಪ್ರೇಮಸುಧೆ, ಕನಸು, ನಲ್ಲನ ಆಗಮನ, ಪ್ರಕೃತಿ ಪುರುಷ, ಮಣ್ಣಿನ ಮಗ ರೈತ, ಮೌನದಿ ಕವಿತೆಯಾದಳು,ಮುಸ್ಸಂಜೆ ಪ್ರಣಯ, ಸ್ನೇಹ ಸಂಭ್ರಮ, ಅಂದದ ಬಳೆಗಳು,ಶಾಂತಿನಿವಾಸ, ಸಂಕ್ರಾಂತಿ, ಕಡಲಮುತ್ತು, ಭೂಮಿ ಪುತ್ರ ಸೇರಿದಂತೆ ವಿಭಿನ್ನ ಅವತರಣಿಕೆಯ ಭಾವಗೀತೆಗಳಿವೆ.
ಶಿಕ್ಷಣ ಕ್ಷೇತ್ರದಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 42 ವರ್ಷದ ಈರಪ್ಪ ಬಿಜಲಿ ವೃತ್ತಿಯಿಂದ ಶಿಕ್ಷಕರಾದರೂ ಪ್ರವೃತ್ತಿಯಿಂದ ಉತ್ತಮ ಸಾಹಿತಿಗಳಾದ ಇವರ ಜನ್ಮಭೂಮಿ ಮತ್ತು ಕರ್ಮಭೂಮಿಗಳೆರಡೂ ಕೊಪ್ಪಳ . ಸಾಹಿತ್ಯದಲ್ಲಿ ಇತ್ತೀಚೆಗೆ ಎರಡು ವರ್ಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡ ಬಿಜಲಿಯವರು, 2021ರಲ್ಲಿ ತಮ್ಮ ಚೊಚ್ಚಲ ಕೃತಿಗಳಾದ ಮುಗಿಲ ಸಂಚಲನ.( ಕವನ ಸಂಕಲನ). ಶ್ವೇತ ಹೃದಯ ( ಭಾವಗೀತೆಗಳ ಸಂಕಲನ) ಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕಾಣಿಕೆಯಾಗಿ ನೀಡಿ ಜನಪ್ರಿಯತೆ ಗಳಿಸಿದ್ದಾರೆ. ಬಿಜಲಿಯವರು ಸಾಹಿತ್ಯದ ಪ್ರಕಾರಗಳಾದ ಶಿಶುಗೀತೆ, ಗಝಲ್, ಮುಕ್ತಕಗಳು, ರುಬಾಯಿ, ಹೈಕುಗಳು, ಜಾನಪದ ತ್ರಿಪದಿಗಳು, ಭಾವಗೀತೆಗಳು,ಆಧುನಿಕ, ಛಂದೋಬದ್ಧ ...
READ MORE