ಶಿಕ್ಷಣ ಕ್ಷೇತ್ರದಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 42 ವರ್ಷದ ಈರಪ್ಪ ಬಿಜಲಿ ವೃತ್ತಿಯಿಂದ ಶಿಕ್ಷಕರಾದರೂ ಪ್ರವೃತ್ತಿಯಿಂದ ಉತ್ತಮ ಸಾಹಿತಿಗಳಾದ ಇವರ ಜನ್ಮಭೂಮಿ ಮತ್ತು ಕರ್ಮಭೂಮಿಗಳೆರಡೂ ಕೊಪ್ಪಳ . ಸಾಹಿತ್ಯದಲ್ಲಿ ಇತ್ತೀಚೆಗೆ ಎರಡು ವರ್ಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡ ಬಿಜಲಿಯವರು, 2021ರಲ್ಲಿ ತಮ್ಮ ಚೊಚ್ಚಲ ಕೃತಿಗಳಾದ ಮುಗಿಲ ಸಂಚಲನ.( ಕವನ ಸಂಕಲನ). ಶ್ವೇತ ಹೃದಯ ( ಭಾವಗೀತೆಗಳ ಸಂಕಲನ) ಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕಾಣಿಕೆಯಾಗಿ ನೀಡಿ ಜನಪ್ರಿಯತೆ ಗಳಿಸಿದ್ದಾರೆ.
ಬಿಜಲಿಯವರು ಸಾಹಿತ್ಯದ ಪ್ರಕಾರಗಳಾದ ಶಿಶುಗೀತೆ, ಗಝಲ್, ಮುಕ್ತಕಗಳು, ರುಬಾಯಿ, ಹೈಕುಗಳು, ಜಾನಪದ ತ್ರಿಪದಿಗಳು, ಭಾವಗೀತೆಗಳು,ಆಧುನಿಕ, ಛಂದೋಬದ್ಧ ಕವಿತೆಗಳು ,ಚುಟುಕು, ವಚನಗಳು ಇತ್ಯಾದಿಗಳನ್ನು ಬರೆಯುತ್ತಾರೆ. ಬಿಜಲಿಯವರು ಇಲ್ಲಿಯವರಿಗೂ 200 ಭಾವಗೀತೆಗಳು, 350 ಕವನಗಳು,200 ಗಝಲ್ ಗಳು, 100 ಶಿಶುಗೀತೆಗಳನ್ನು ಬರೆದಿದ್ದಾರೆ.